ಬಿಜೆಪಿ ನಾಯಕರ ವಿರುದ್ಧ ಪ್ರಕಾಶ್ ರೈ ತೀವ್ರ ವಾಗ್ದಾಳಿ!! ರೈ ಯಾರ್ಯಾರ ವಿರೋಧಿ?

ಸಂವಿಧಾನವನ್ನೆ ಬದಲಾಯಿಸುತ್ತೇನೆ ಎಂದು ಹೇಳಿಕೆ ನೀಡಿದ್ದ ಜನಪ್ರತಿನಿಧಿ. ಆ ವೇಳೆ ಸಂವಿಧಾನ ಬದಲಾವಣೆ ಮಾಡಬೇಡಿ ಎಂದ್ರೆ, ತಂದೆ ತಾಯಿ ಬಗ್ಗೆ ಹುಟ್ಟಿನ ಬಗ್ಗೆ, ರಕ್ತದ ಬಗ್ಗೆ ಮಾತನಾಡಿದ್ರೆ ನೋವಾಗಲ್ವಾ ಎಂದು ಪರೋಕ್ಷವಾಗಿಯೇ ನಟ ಪ್ರಜಾಶ ರಾಜ್ ವಿಜಯಪುರದಲ್ಲಿ ಕೇಂದ್ರ ಸಚಿವ ಅನಂತಕುಮಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ, ಅಮೀತ್ ಶಾ, ಅನಂತಕುಮಾರ ಹೆಗಡೆ ಅಂಥವರನ್ನು ನಾನು ವಿರೋಧಿಸುತ್ತೇನೆ.


ನಾನು ಧರ್ಮದ ಬಗ್ಗೆ ಮಾತಾಡ್ತಿಲ್ಲ, ಇಂತಹ ರಾಕ್ಷಸರ ಬಗ್ಗೆ ಮಾತಾಡ್ತಿದ್ದೇನೆ ಎಂದು ಕಿಡಿ ಕಾರಿದರು. ಇನ್ನು ನಾನು ಇಂತಹವರ ಬಗ್ಗೆ ಮಾತಾಡಿದ್ರೆ, ನನ್ನ ಹಿಂದೂ ವಿರೋಧಿ ಎಂದು ಏಕೆ ತಿಳಿದುಕೊಳ್ತೀರಿ? ಎಂದರು. ಅಲ್ಲದೆ ಅನಂತಕುಮಾರ ಅವರೆ ಧೈರ್ಯ ಇದ್ರೆ ಎದುರಿಗೆ ಬನ್ನಿ. ಎದುರು ಬದುರು ಕುಳಿತು ಚರ್ಚೆ ಮಾಡೋಣ ಎಂದು ಸವಾಲ್ ಎಸೆದರು. ಇನ್ನು ನಾಯಿ, ಬೆಕ್ಕು, ಹಾವುಗಳು ಎಲ್ಲರೂ ಒಂದಾಗಿದ್ದಾರೆ ಎಂದು ಹೇಳ್ತಾರೆ.


ಇವರಿಬ್ಬರೆ ಮನುಷ್ಯರಾ? ಉಳಿದವರ ಬಗ್ಗೆ ಮಾತಾಡ್ತಾರೆ. ಮೋದಿ ಅನ್ನುವ ಪ್ರಳಯ ಬಂದಿದೆಯಂತೆ ಅಂತಾರೆ, ಪ್ರಳಯ ಬಂದ್ರೆ ಎಲ್ಲಾ ಪ್ರಾಣಿಗಳು ಕೊಚ್ಚಿ ಹೋಗಬಾರದು ಎಂದು, ಎಲ್ಲರೂ ಮೇಲೆ ಬರ್ತಿವಿ ಸ್ವಾಮಿ ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು…

 

ವರದಿ:  ರುದ್ರೇಶ ಮುರನಾಳ ಬಿಟಿವಿ ನ್ಯೂಸ್ ವಿಜಯಪುರ