ಕುಮಟಾದಲ್ಲೂ ಶುರುವಾಗುತ್ತಾ ಬಿಜೆಪಿ ಬಂಡಾಯ? ಯಾರು ತಿರುಗಿ ಬಿದ್ದವರು?

ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಉತ್ತರಕನ್ನಡ ಜಿಲ್ಲೆಯ ಕುಮಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ನಿನ್ನೆ ತೆರೆ ಬಿದಿದ್ದು, ಜೆಡಿಎಸ್ ನಿಂದ ಕೆಲ ತಿಂಗಳ ಹಿಂದಷ್ಟೆ ಬಿಜೆಪಿ ಸೇರಿದ್ದ ಮಾಜಿ ಶಾಸಕ ದಿನಕರ ಶೆಟ್ಟಿ ಅವರನ್ನ ಈ ಬಾರಿ ಕುಮಟ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಅಂತಾ ಘೋಷಣೆ ಆಗಿದೆ. ದಿನಕರ ಶೆಟ್ಟಿ ಅವರು ಬಿಜೆಪಿ ಅಭ್ಯರ್ಥಿ ಪ್ರಕ್ರಿಯೆ ಭಾರಿ ಪ್ರಮಾಣದ ಭಿನ್ನಮತಕ್ಕೆ ಕಾರಣವಾಗತ್ತಾ ಇದೆ ಅಂತಾ ಹೇಳಲಾಗತ್ತಾ ಇದೆ, ಪ್ರಬಲ ಆಕಾಂಕ್ಷಿಯಾಗಿದ್ದ ಉದ್ಯಮಿ ಯಶೋಧರ ನಾಯ್ಕ ಇದೀಗ ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಲು ತಯಾರಿ ನಡೆಸುತ್ತಿದ್ದಾರೆ.

ad


ಟಿಕೇಟ್ ಕೈ ತಪ್ಪಿದ್ದ ಬೆನ್ನಲೆ ಯಶೋಧರ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತಯಾರಿ ನಡೆಸಿಕೊಂಡಿದ್ದಾರೆನ್ನಲಾಗಿದೆ. ಇವರ ಪಕ್ಷೇತರ ಸ್ಪರ್ಧೆಗೆ ಬಿಜೆಪಿ ಮೂಲ ಕಾರ್ಯಕರ್ತರೆ ಬೆಂಬಲಿಸ್ತಾ ಇದ್ದಾರೆ ಎನ್ನುವ ಮಾತು ಸಹ ಕೇಳಿ ಬರತ್ತಾ ಇದೆ. ಯಶೋಧರ ನಾಯ್ಕ ಪಕ್ಷೇತರ ಸ್ಪರ್ಧೆ ಮಾಡುವ ಬಗ್ಗೆ ಅವರ ಅಭಿಮಾನಿಗಳ ಜೊತೆ ಚರ್ಚೆ ನಡೆಸಿ ಮುಂದಿನ ತೀರ್ಮಾಕ್ಕೆ ಬರಲಿದ್ದಾರೆ ಎನ್ನಲಾಗತ್ತಾ ಇದೆ. ಒಟ್ಟಿಲ್ಲಿ ಶಿಸ್ತಿನ ಪಕ್ಷ ಅಂತಾ ಕರೆಸಿಕೊಳ್ಳತ್ತಾ ಇದ್ದ ಬಿಜೆಪಿಯಲ್ಲಿಗ ಅಭ್ಯರ್ಥಿ ಘೋಷಣೆ ಆಗತ್ತಾ ಇರುವಂತೆ ಭಿನ್ನಮತ ಹೊಗೆಯಾಡಲು ಶುರುವಾಗಿದೆ.

ಆದಷ್ಟು ಶೀಘ್ರದಲ್ಲಿ ಪಕ್ಷದ ನಾಯಕರು ಭಿನ್ನಮತವನ್ನು ಆರಂಭದಲ್ಲೆ ಸರಿಪಡಿಸದೆ ಇದ್ದಲ್ಲಿ ಇದು ಚುನಾವಣಾ ಫಲಿತಾಂಶದ ಮೇಲೆ ಕೊಡಲಿ ಏಟು ಬಿಳಲಿದೆ ಎನ್ನುವುದು ರಾಜಕೀಯ ವಿಶ್ಲೇಷಕರಿಂದ ಕೇಳಿ ಬರತ್ತಾ ಇರೋ ಮಾತು. ಕುಮಟ ವಿಧಾನಸಭಾ ಕ್ಷೇತ್ರದಲ್ಲಿ ಭಿನ್ನಮತ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುವಲ್ಲಿ ಕೇಂದ್ರ ಸಚಿವ ಅನಂತಕುಮಾರ ಮೂಲ ಕಾರಣ ಸ್ಥಳೀಯ ಬಿಜೆಪಿ ಮುಖಂಡರೆ ಹೇಳಿಕೊಳ್ಳತ್ತಾ ಇದ್ದಾರೆ.