ಎಂಇಪಿ  ಪಕ್ಷದ ಟಕೇಟ್ ಗಾಗಿ ಅಭ್ಯರ್ಥಿಗಳ ಭಾರೀ ಪೈಪೋಟಿ

ವಿಧಾನ ಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯ ಚುನಾವಣಾ ಕಣ ರಂಗೇರುತ್ತಿದೆ. ವಿವಿಧ ಪಕ್ಷಗಳ ಮುಖಂಡರು ಟಿಕೇಟ್ ಗಾಗಿ ಹಣಾಹಣಿ ನಡೆಸುತ್ತಿದ್ದಾರೆ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡುವರೆಗೆ ಈ ಚಟುವಟಿಕೆ ಸಕ್ರಿಯವಾಗಿರುತ್ತದೆ . ಆದರಂತೆ ಕೆಲವು ಪಕ್ಷಗಳು ಪಟ್ಟಿ ಬಿಡುಗಡೆ ಮಾಡಿದರೆ ಇನ್ನೂ ಕೆಲ ಪಕ್ಷಗಳು ಇನ್ನೂ ಗೊಂದದಲ್ಲಿವೆ. ಆದರೇ ಇಲ್ಲಿ ಟಿಕೇಟ್ ಖಾತರಿಯಾಗದೆ, ನಾನು ಅಭ್ಯರ್ಥಿ ನನಗೆ ಬಿಫಾರಂ ಫೈನಲ್ ಆಗಿದೆ ಎಂದು ಅಭ್ಯರ್ಥಿಗಳು ಹೇಳಿಕೊಳ್ಳುತ್ತೀದ್ದಾರೆ. ಹಾಗಾದರೇ ಅದು ಮತಕ್ಷೇತ್ರ ಯಾವುದು ಹಾಗೆ ಹೇಳುತ್ತಿರುವ ಅಭ್ಯರ್ಥಿಗಳು ಯಾರು ಅಂತ ನೀವೇ ನೋಡಿ . . . .

ad

  

ಎಂಇಪಿ ಪಕ್ಷ ಇನ್ನೂ ಉದಯವಾಗಿ ಕೆಲವು ತಿಂಗಳು ಕಳೆದಿಲ್ಲ ಆಗಲೇ ಒಂದಿಲ್ಲ ಒಂದು ಸುದ್ದಿ ಮಾಡುತ್ತಿದೆ ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸೋ ಗುರಿ ಹೊಂದಿರುವ ಎಂಇಪಿ, ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿ ಇವೆ.  ಸದ್ಯಕ್ಕೆ ಯಾದಗಿರಿ ಕೇಂದ್ರ ಕ್ಷೇತ್ರಗಳಲ್ಲಿ ಸ್ಪರ್ಧಿಸು ಗುರಿ ಹೊಂದಿರುವ ಎಂಇಪಿ ಪಕ್ಷದಿಂದ ಟಿಕೇಟ್ ಖಾತ್ರಿ ಆಗುವ ಮೊದಲೆ ಕರ್ನಾಟಕ ರಕ್ಷಣ ವೇದಿಕೆ ರಾಜ್ಯ ಸಂಚಾಲಕ ಬಸವರಾಜ್ ಪಡುಕೋಟೆ ಮತ್ತು ಯಾದಗಿರಿ ನಗರದ ಟಿಪ್ಪು ಸುಲ್ತಾನ್ ಸಂಘದ ಸಂಸ್ಥಾಪಕ ಅಬ್ದುಲ್ ಕರೀಮ ಈ ಇಬ್ಬರು ಕೂಡ ಎಂಇಪಿ ಪಕ್ಷದ ಅಭ್ಯರ್ಥಿಗಳೆಂದು ಹೇಳಿಕೊಳ್ಳುತ್ತಿದ್ದಾರೆ ಈ ಇಬ್ಬರನ್ನು ಪ್ರಶ್ನಿಸಿದರೇ ಈ ಬಾರಿ ಯಾದಗಿರಿ ಮತಕ್ಷೇತ್ರದಿಂದ ನಾನೇ ಅಭ್ಯರ್ಥಿಯೆಂದು ಹೇಳಿಕೊಳ್ಳುತ್ತಿದ್ದಾರೆ . . .

ಇನ್ನೂ ಯಾದಗಿರಿ ಜಿಲ್ಲಾ ಟಿಪ್ಪು ಸುಲ್ತಾನ  ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಅಬ್ದುಲ್ ಕರೀಂ ಕೂಡ ಎಂಇಪಿ ಪಕ್ಷದ ನಾನು ಅಭ್ಯರ್ಥಿಯೆಂದು ಹೇಳಿಕೊಳ್ಳುತ್ತಿದ್ದಾರೆ. ನಾನು ಸಂಘಟನೆ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ ನಾನು ಸಾಕಷ್ಟು ಜನ ಬೆಂಬಲವನ್ನು ಹೊಂದಿದ್ದೇನೆ. ಎಂಇಪಿ ಪಕ್ಷ ನನಗೆ ಯಾದಗಿರಿ ಮತಕ್ಷೇತ್ರದಿಂದ ಟಿಕೇಟ್ ನೀಡುವ ಭರವಸೆಯು ವರಿಷ್ಟರು ನನಗೆ ಮೊದಲೇ ನೀಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇವು ಎಲ್ಲದರ ನಡುವೆ ಎಂಇಪಿ ಪಕ್ಷ ಯಾದಗಿರಿ ಮತಕ್ಷೇತ್ರದಲ್ಲಿ ಯಾವ ರೀತಿಯಾಗಿ ಪೈಪೋಟಿ ಕೊಡುತ್ತದೆ ಎನ್ನುವುದೇ ಒಂದು ಕುತೂಹಲ ಎಂದು ಹೇಳಬಹುದು.

ವರದಿ:  ಸೈಯದ್ ಮನ್ಸೂರ ಯಾದಗಿರಿ ಬಿಟಿವಿ ನ್ಯೂಸ್