ತುಮಕೂರಿನಲ್ಲಿ ಬಿಜೆಪಿ ಟಿಕೆಟ್ ಭಿನ್ನಮತ!! ಹಲವರ ರಾಜೀನಾಮೆ!!

ರಾಜ್ಯ ವಿಧಾನಸಭಾ ಚುನಾವಣೆಗೆ ಟಿಕೇಟ್ ಘೋಷಣೆಯಾಗುತ್ತಿದ್ದಂತೆ ತುಮಕೂರು ಜಿಲ್ಲಾ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಮುಂದುವರೆದಿದೆ.ತುಮಕೂರು ನಗರದಲ್ಲಿ ಬಿಜೆಪಿ ನಿಷ್ಠಾವಂತ ನಾಯಕ ಸೊಗಡು ಶಿವಣ್ಣನವರನ್ನ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲೆಯ ಪ್ರಮುಖ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದರು.

ad


ಸುಮಾರು 40 ವರ್ಷಗಳಿಂದ ಪಕ್ಷ ಕ್ಕಾಗಿ ದುಡಿದ ಸೊಗಡು ಶಿವಣ್ಣನವರಿಗೆ ಮೊದಲ ಪಟ್ಟಿಯಲ್ಲಿ ಟಿಕೇಟ್ ನೀಡಲಿಲ್ಲ ಹಾಗೂ ಜಿಲ್ಲೆಯಲ್ಲಿ ಮೂಲ ಕಾರ್ಯಕರ್ತರನ್ನ ಕಡೆಗಣಿಸಲಾಗುತ್ತಿದೆ, ಜಿಲ್ಲೆಯ ಪ್ರತಿಯೊಂದೂ ಪ್ರಮುಖ ಹುದ್ದೆಗಳನ್ನ ಬೇರೆ ಪಕ್ಷದಿಂದ ಬಂದವರಿಗೆ ನೀಡಿದ ಜಿಲ್ಲಾದ್ಯಕ್ಷ ಜ್ಯೋತಿ ಗಣೇಶ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ.

 

ನಮ್ಮ ನಾಯಕ ಸೊಗಡು ಶಿವಣ್ಣನವರನ್ನ ಕಡೆಗಣಿಸಿದ್ದಾರೆ ಹಾಗಾಗಿ ನಾವು ಪಕ್ಷದಲ್ಲಿ ನಮಗೆ ನೀಡಲಾಗಿದ್ದ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ.ಅದೇ ರೀತಿ ಎರಡನೇ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವಾಗ ಸೊಗಡು ಶಿವಣ್ಣನವರಿಗೆ ಟಿಕೇಟ್ ನೀಡದಿದ್ದರೆ ಪಕ್ಷಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಸಿದರು.