ಉಡುಪಿಯಲ್ಲಿ ಬಿಜೆಪಿ ಸೀಟು ಯಾರಿಗೆ? ಯಾರ್ಯಾರಿದ್ದಾರೆ ಆಕಾಂಕ್ಷಿಗಳು?

ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಿಜೆಪಿಗೆ ದೊಡ್ಡ ತಲೆನೋವಾಗಿದೆ. ಶಕ್ತಿ ಕೇಂದ್ರ ಎಂದು ಕರೆಸಿಕೊಳ್ಳುವ ಕ್ಷೇತ್ರದಲ್ಲೇ ಬಿಜೆಪಿಗೆ ಭಿನ್ನಮತದ ಭೀತಿ ಉಂಟಾಗಿದೆ. ಶೋಭಾ ಕರಂದ್ಲಾಜೆ ಮತ್ತು ಮಾಜಿ ಶಾಸಕ ರಘುಪತಿ ಭಟ್ ನಡುವಿನ ಭಿನ್ನಮತ ಅಭ್ಯರ್ಥಿ ಆಯ್ಕೆಗೆ ತೊಡಕಾಗಿದೆ. ಬಿಜೆಪಿ ಮೊದಲ ಪಟ್ಟಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಹೆಸರಿಲ್ಲ. ಬಿಜೆಪಿಗೆ ಉಡುಪಿ ಅಂದ್ರೆ ಹೆಮ್ಮೆ ಅಂತ ಬೀಗುತ್ತಿದ್ದ ಕೇಂದ್ರ ನಾಯಕರಿಗೆ ಶಕ್ತಿಕೇಂದ್ರದಲ್ಲೇ ಅಭ್ಯರ್ಥಿ ಆಯ್ಕೆಯ ಸಂಕಟ ಎದುರಾಗಿದೆ. ಮಾಜಿ ಶಾಸಕ ರಘುಪತಿ ಭಟ್ ಗೆ ಜನಬೆಂಬಲ ಇದೆ. ಆದ್ರೆ ಸಂಸದೆ ಶೋಭಾ ಕೆರಂದ್ಲಾಜೆ ಇವರ ಆಯ್ಕೆಗೆ ತೊಡಕಾಗಿದ್ದಾರೆ.

adಜೊತೆ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷೆ ಹೊಂದಿರು ಉದಯ್ ಕುಮಾರ್ ಶೆಟ್ಟಿ ಕೂಡ ಹಿಂಬಾಗಿಲಿನ ಪ್ರಯತ್ನ ಮುಂದುವರಿಸಿದ್ದಾರೆ ಅನ್ನುವ ಮಾತುಗಳು ಕೇಳಿಬರುತ್ತಿದೆ. ಕಳೆದ ಚುನಾವಣೆಯಲ್ಲಿ ನೈತಿಕ ಕಾರಣಕ್ಕೆ ಭಟ್ ಗೆ ಟಿಕೆಟ್ ಕೈ ತಪ್ಪಿತ್ತು. ಈ ಬಾರಿಯ ಮೊದಲ ಪಟ್ಟಿಯಲ್ಲಿ ಭಟ್ಟರ ಹೆಸರು ಅಂತಿಮಗೊಂಡರೂ ಪ್ರಕಟವಾಗಲಿಲ್ಲ. ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬರ್ತಾರೆ ಎಂದು ಕಾದು ಸುಸ್ತಾದ ಕಾರ್ಯಕರ್ತರು, ಈಗ ಮತ್ತಷ್ಟು ಗೊಂದಲದಲ್ಲಿ ಬಿದ್ದಿದ್ದಾರೆ. ಇನ್ನೋರ್ವ ಟಿಕೆಟ್ ಆಕಾಂಕ್ಷಿ ಶಿರೂರು ಮಠದ ಲಕ್ಷ್ಮೀವರ ತೀರ್ಥರು, ಬಹಿರಂಗ ಪ್ರಚಾರ ಆರಂಭಿಸಿಬಿಟ್ಟಿದ್ದಾರೆ .ಬಿಜೆಪಿಯ ಒಳಜಗಳದಲ್ಲಿ ಯಾರಿಗೆ ಟಿಕೆಟ್ ಸಿಗುತ್ತೆ, ಯಾರಿಗೆ ಲಾಭ ಅಗುತ್ತೆ ಅನ್ನುವುದು ಯಕ್ಷ ಪ್ರಶ್ನೆಯಾಗಿದೆ. ಬಿಜೆಪಿ ಹೈಕಂಮಾಡ್ ಒಳಜಗಳ ನಿವಾರಣೆ ಶೋಭಾಕರಂದ್ಲಾಜೆಗೆ ಟಿಕೆಟ್ ನೀಡುವುದಕ್ಕೆ ಮುಂದಾದ್ರೆ ರಘುಪತಿ ಭಟ್ ಬಣದ ಬಂಡಾಯ ಭಯ ಎದುರಾಗಲಿದೆ. ಬಿಜೆಪಿಯ ಪ್ರಯೋಗಶಾಲೆಯಲ್ಲಿ ಈ ಬಾರಿ ಸಂಸದೆ ಶೋಭಾ ಕರದ್ಲಾಂಜೆ ,ರಘಪತಿ ಭಟ್ ಉದಯ್ ಕುಮಾರ್ ಶೆಟ್ಟಿ ಈ ಮೂರು ಜನರಲ್ಲಿ ಯಾರು ಪಾಸಾಗ್ತಾರಾ ಕಾದು ನೋಡಬೇಕು.

.