ಮತ್ತೊಮ್ಮೆ ಮೇಟಿ ವರ್ಸಸ್​​ ವಿಜಯಲಕ್ಷ್ಮೀ- ಮಾಜಿ ಸಚಿವರ ವಿರುದ್ಧ ಅದೃಷ್ಟಪರೀಕ್ಷೆಗೆ ಮುಂಧಾದ ಸಂತ್ರಸ್ತೆ!

ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂಧಾಗುವರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಈ ಸಾಲಿಗೆ ಮಾಜಿ ಸಚಿವ ಎಚ್.ವೈ.ಮೇಟಿ ಸಿಡಿ ಪ್ರಕರಣದ ಸಂತ್ರಸ್ತೆ ವಿಜಯಲಕ್ಷ್ಮೀ ಕೂಡ ಸೇರ್ಪಡೆಯಾಗಿದ್ದಾರೆ.

 ಹೌದು ತಮ್ಮ ಮಾನಹಾನಿ ಮಾಡಿದ ಮಾಜಿ ಎಚ್​.ವೈ.ಮೇಟಿ ವಿರುದ್ಧವೇ ವಿಜಯಲಕ್ಷ್ಮೀ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಮಾಜಿ ಸಚಿವ ಮೇಟಿ ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ಬಾಗಲಕೋಟೆ ವಿಧಾನಸಭೆ ಕ್ಷೇತ್ರ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ.ಕಾರಣ ಸಿಡಿ ಪ್ರಕರಣದ ಕೇಂದ್ರಬಿಂದುವಾಗಿದ್ದ ಮಹಿಳೆ ವಿಜಯಲಕ್ಷ್ಮೀ ಮಾಜಿ ಸಚಿವ ಮೇಟಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದರ ಮೂಲಕ ಮೇಟಿ ವಿರುದ್ಧ ಸಮರಕ್ಕೆ ಮುಂಧಾಗಿದ್ದಾರೆ. ಈಗಾಗಲೇ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿರುವ ವಿಜಯಲಕ್ಷ್ಕೀ ಎಪ್ರೀಲ್ 17ರಂದು ನಾಮಪತ್ರ ಸಲ್ಲಿಸಲಿದ್ದಾರೆ.ಈ ಹಿಂದೆ ಕಳೆದ 2016ರ ಡಿಸೆಂಬರ್ 16ರಂದು ಬಿಟಿವಿ ಮೊಟ್ಟ ಮೊದಲು ಮೇಟಿ ಸಿಡಿ ಪ್ರಕರಣವನ್ನು ಬಯಲಿಗೆಳೆದಿತ್ತು.ಈ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು.

ಇದಾದ ನಂತರ ರಾಜ್ಯ ಸರ್ಕಾರ ಈ ಪ್ರಕರಣ ತನಿಖೆಯನ್ನ ಸಿಐಡಿಗೆ ವಹಿಸಿತ್ತು.ಸಿಐಡಿ ತನಿಖೆ ನಂತರ ಮಾಜಿ ಸಚಿವ ಮೇಟಿ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಈಗ ಮತ್ತೆ ಮೇಟಿ ಸಿಡಿ ಪ್ರಕರಣ ಮಹಿಳೆ ಮಾಜಿ ಸಚಿವ ಮೇಟಿ ವಿರುದ್ಧ ಸ್ಪರ್ಧಿಸಲು ಮುಂಧಾಗಿದ್ದಾರೆ. ಬಾಗಲಕೋಟೆ ವಿಧಾಸಭೆ ಕ್ಷೇತ್ರದಿಂದ ಮೇಟಿ ವಿರುದ್ಧ ಸ್ಪರ್ಧಿಸಲಿದ್ದಾರೆ. ನನಗೆ ಅನ್ಯಾಯವಾಗಿದೆ,ಅನ್ಯಾಯದ ಮಾಡಿದವರ ವಿರುದ್ಧ ಸ್ಪರ್ಧಿಸುತ್ತಿದ್ದು,ಸೋಲು ಗೆಲುವು ನಂತರ,ಸಮಾಜ ಸೇವೆ ಮಾಡಬೇಕೆನ್ನುವುದು ನನ್ನ ಉದ್ಧೇಶ ಅಂತಿದ್ದಾರೆ ಮೇಟಿ ಸಿಡಿ ಪ್ರಕರಣದ ಮಹಿಳೆ ವಿಜಯಲಕ್ಷ್ಮೀ. ಮತ್ತೆ ಈಗ ವಿಜಯಲಕ್ಷ್ಮೀ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮೇಟಿ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ.