ಹ್ಯಾರಿಸ್ ಕ್ಷೇತ್ರಕ್ಕೆ ಕರ್ಚಿಫ್ ಹಾಕಿದ್ರಾ ಸಿಎಂ ಸಿದ್ದರಾಮಯ್ಯ !! ಅಶಾಂತಿಯಲ್ಲಿ ಶಾಂತಿನಗರ ಕಾಂಗ್ರೆಸ್ !!

ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸೋ ವಿಚಾರವನ್ನು ಇನ್ನೂ ಜೀವಂತವಿಟ್ಟಿದ್ದಾರೆ. ಟಿಕೆಟ್ ಘೊಷಣೆಯಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಜೊತೆಗೆ ಹೊಸ ಕ್ಷೇತ್ರವನ್ನು ಹುಡುಕಿಕೊಂಡಿದ್ದಾರೆ. ಅದು ನಲಪಾಡ್ ಪ್ರಕರಣದಿಂದ ಸುದ್ದಿಯಾಗಿರುವ ಶಾಂತಿನಗರ !

ಹೌದು. ವಿದ್ವತ್ ಎಂಬಾತನ ಮೇಲೆ ಹಲ್ಲೆ ನಡೆಸಿದ ತಮ್ಮ ಪುತ್ರ ಮೊಹಮ್ಮದ್ ನಲಪಾಡ್ ವಿವಾದದ ಹಿನ್ನೆಲೆಯಲ್ಲಿ ಹ್ಯಾರಿಸ್ ಬದಲಿಗೆ ಬೇರೊಬ್ಬರಿಗೆ ಟಿಕೆಟ್ ನೀಡಲಾಗುವುದೇ ಅಥವಾ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಕ್ಷೇತ್ರದಿಂದ ಸ್ಪರ್ಧಿಸುವರೇ ಎಂಬ ಪ್ರಶ್ನೆಗಳು ಇದೀಗ ಹುಟ್ಟಿಕೊಂಡಿವೆ. ಕಾಂಗ್ರೆಸ್ ಪಾಲಿಗೆ ಅತ್ಯಂತ ಸುಭದ್ರ ಕ್ಷೇತ್ರವೆನಿಸಿದ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಘೋಷಿಸದಿರೋದು ಈ ಪ್ರಶ್ನೆಗಳ ಹುಟ್ಟಿಗೆ ಕಾರಣವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರವೊಂದರಲ್ಲೇ ನಿಲ್ಲುವ ಹೈ ರಿಸ್ಕ್ ಎದುರಿಸುವರೇ ಅಥವಾ ಸು
ರಕ್ಷಿತ ಕ್ಷೇತ್ರವನ್ನು ಆಯ್ದುಕೊಳ್ಳುವ ಸಾಧ್ಯತೆಯನ್ನು ಇನ್ನೂ ಜೀವಂತ ವಿಟ್ಟುಕೊಂಡಿದ್ದಾರೆಯೇ ಎಂಬ ಕುತೂಹಲ ಮೂಡಿಸಿದೆ.

ನಿನ್ನೆ ಟಿಕೆಟ್ ಘೋಷಣೆ ಆಗದ ಹಿನ್ನಲೆಯಲ್ಲಿ ಹ್ಯಾರಿಸ್ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದರು. ಆ ಸಂಧರ್ಭದಲ್ಲಿ ಹ್ಯಾರಿಸ್ ಖುದ್ದು ಮುಖ್ಯಮಂತ್ರಿಯೇ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಲ್ಪಸಂಖ್ಯಾತರು ಹೆಚ್ಚಿರುವ ಶಾಂತಿನಗರ ಕಾಂಗ್ರೆಸ್ ಪಾಲಿಗೆ ಅತ್ಯಂತ ಸುಭದ್ರ ಕ್ಷೇತ್ರ. ಆದರೆ, ಹ್ಯಾರೀಸ್ ಹೊರತಾಗಿ ಇಲ್ಲಿ ಕಾಂಗ್ರೆಸ್‌ಗೆ ಅಂತಹ ಪ್ರಬಲ ಅಭ್ಯರ್ಥಿಗಳಿಲ್ಲ. ಜೆಡಿಎಸ್ ಹಾಗೂ ಬಿಜೆಪಿಯಲ್ಲೂ ಹ್ಯಾರೀಸ್ ಎದುರು ಗೆಲ್ಲಬಲ್ಲ ಪ್ರಬಲ ಅಭ್ಯರ್ಥಿಗಳು ಇಲ್ಲ. ಸಿಎಂ ಸಿದ್ದರಾಮಯ್ಯ ನಿಂತರೂ ಬಿಜೆಪಿ ಜೆಡಿಎಸ್ ನಿಂದ ಯಾವುದೇ ಪ್ರಬಲ ಅಭ್ಯರ್ಥಿಗಳು ನಿಲ್ಲಲ್ಲ. ಹ್ಯಾರೀಸ್ ಸಿಎಂ ಅವರಿಗಾದರೆ ಕ್ಷೇತ್ರ ಬಿಟ್ಟುಕೊಡಬಹುದು. ಸಿಎಂ ಚಾಮುಂಡೇಶ್ವರಿ ಹಾಗೂ ಶಾಂತಿನಗರ ಎರಡೂ ಗೆದ್ದರೆ ಅನಂತರ ಶಾಂತಿನಗರವನ್ನು ಹ್ಯಾರೀಸ್‌ಗೆ ಬಿಟ್ಟುಕೊಡಬಹುದು. ಒಂದು ವೇಳೆ ಚಾಮುಂಡೇಶ್ವರಿ ಸೋತು, ಶಾಂತಿನಗರ ಗೆದ್ದರೆ, ಆಗ ಹ್ಯಾರೀಸ್‌ಗೆ ಬೇರೆ ಸ್ಥಾನಮಾನ ನೀಡಬಹುದು ಎಂಬ ಲೆಕ್ಕಾಚಾರಗಳನ್ನು ಸಿಎಂ ಸಿದ್ದರಾಮಯ್ಯ ಹೊಂದಿದ್ದಾರೆ.