ಮುಂದೆ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೋಗಲ್ಲ. – ದೇವೇಗೌಡರ ಸ್ಪಷ್ಟನೆ.

ಹಾಸನದಲ್ಲಿ ಮಾಜಿ ಪ್ರಧಾನಿ‌ ಹೆಚ್.ಡಿ. ದೇವೇಗೌಡರು ಹೇಳಿಕೆ.

ಓವೈಸಿ ಪಕ್ಷದ ಜೊತೆ ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ವಿಚಾರ. ನಾನು ‌ಖಚಿತ ಅಭಿಪ್ರಾಯಕ್ಕೆ ಬಂದಿಲ್ಲ. ಬಿಎಸ್ಪಿ, ಸಿಪಿಐಎಂ,ಎನ್ಸಿಪಿ ಜೊತೆ ಈಗಾಗಲೇ ಹೊಂದಾಣಿಕೆ ಮಾಡಿ ಕೊಳ್ಳಲಾಗಿದೆ. ಮುಂದೆ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೋಗಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಬಿಎಸ್ಪಿ ಜೊತೆ ಇರುತ್ತೇನೆ. ಈ ಸಾರಿ ಸರ್ಕಾರ ರಚನೆ ಮಾಡಿಯೇ ತೀರುವೆ ಎಂದು ವಿಶ್ವಾಸ. ಅಹಂನಿಂದ ಹೀಗೆ ಹೇಳುತ್ತಿಲ್ಲ, ದೈವಬಲದಪರೀಕ್ಷೆ ಇದೆ.ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಗಟ್ಟಿ ಯಾಗಬೇಕು.ನನ್ನ ಮಗನನ್ನು ಸಿಎಂ ಮಾಡೋದಷ್ಟೇ ನನ್ನ ಉದ್ದೇಶ ಅಲ್ಲ.

ಕಮೀಷನ್ ‌ಆರೋಪ ಪ್ರತ್ಯಾರೋಪ ವಿಚಾರ. ೨ ರಾಷ್ಟ್ರೀಯ ಪಕ್ಷಗಳು ಇಷ್ಡು ದೂರ ಹೋಗಲೇ ಬಾರದಿತ್ತು. ನಾನು ಯಾರ ಬಗ್ಗೆಯೂ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ನಾವು ಅಭ್ಯರ್ಥಿ ಹಾಕುತ್ತೇವೆ. ಸೋಲು ಗೆಲುವು ಬೇರೆ, ಬೆಂಬಲ ಕೊಡಿ ಎಂದು ಯಾರ ಜೊತೆಯೂ ಮಾತನಾಡಲು ಹೋಗಿಲ್ಲ. ಚಿದಂಬರಂ ಪುತ್ರನ ಅರೆಸ್ಟ್ ಬಗ್ಗೆ ನಾನು ಮಾತನಾಡಲ್ಲ. ಕಾವೇರಿಗಾಗಿ ೧೯೬೪ ರಿಂದ ಹೋರಾಟ ಮಾಡಿದ್ದೇನೆ, ಮುಂದೆಯೂ ಮಾಡುವೆ. ರಾಜ್ಯ ಸರ್ಕಾರ ಏನು ಮಾಡುತ್ತೋ ನನಗೆ ಗೊತ್ತಿಲ್ಲ. ನಾನು ಲೋಕಸಭೆಯಲ್ಲಿ ಹೋರಾಟ ಮಾಡಲು ನಿರ್ಧರಿಸಿದ್ದೇನೆ. ನಮಗೆ ನೀರು ಉಳೀಬೇಕು, ನನ್ನ ಜನ ಉಳೀಬೇಕು. ಮಾಲೀಕಯ್ಯ ಗುತ್ತೇದಾರ್ ನನ್ನ ಸ್ನೇಹಿತ. ಆದ್ರೆ ಜೆಡಿಎಸ್ ಸೇರ್ಪಡೆ ಬಗ್ಗೆ ಗುಟ್ಟು ಬಿಟ್ಟು ಕೊಡದ ಮಾಜಿ ಪ್ರಧಾನಿ.