ಪ್ಯಾಡ್ ಮ್ಯಾನ್ ಮಹದೇವ್ !! ಇನ್ನು ಬೆಂಗಳೂರು ಪಾಲಿಕೆ ಶಾಲೆಗಳಲ್ಲಿ ಸ್ಯಾನಿಟರಿ ಇನ್ಸಿನೇಟರ್ ಯಂತ್ರ !! ಇದು ಬಿಬಿಎಂಪಿ ಬಜೆಟ್

ಬೃಹತ್​​ ಬೆಂಗಳೂರು ಬಜೆಟ್​ ಮಂಡನೆಯಾಗ್ತಿದ್ದು, 9300 ಕೋಟಿ ರೂಪಾಯಿ ಗಾತ್ರದ ಬಜೆಟ್​ ಅನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್​​ ಮಂಡಿಸಿದ್ದಾರೆ. ಬಜೆಟ್ ನಲ್ಲಿ ಹಲವು ಜನಪರ ಯೋಜನೆಗಳನ್ನು ಘೋಷಿಸಲಾಗಿದೆ.

adಅದರಲ್ಲಿ ಅತ್ಯಂತ ಪ್ರಮುಖವಾಗಿರುವುದು ಪಾಲಿಕೆಯ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಶುಚಿತ್ವಕ್ಕಾಗಿ ಸ್ಯಾನಿಟರಿ ಇನ್ಸಿನೇಟರ್ ಯಂತ್ರ ಅವಳಡಿಕೆಗೆ ಕ್ರಮ. ಇತ್ತಿಚೆಗೆ ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಚಿತ್ರದಿಂದ ಪ್ರೇರೇಪಣೆ ಪಡೆದಿದ್ದಾರೋ ಎನ್ನುವಂತಿದೆ ಈ ಯೋಜನೆ. ಏನೇ ಆದರೂ ಇದೊಂದು ಬಹಳ ಶ್ಲಾಘನೀಯ ಯೋಜನೆಯಾಗಿದೆ. ಇದಲ್ಲದೆ 400 ಸ್ಥಳಗಳಲ್ಲಿ ಉಚಿತ ವೈಫೈ ಸೇರಿದಂತೆ ಹಲವು ಹೈಟೆಕ್​​ ಯೋಜನೆಗಳು ಬಜೆಟ್​ನಲ್ಲಿವೆ. ಪಾಲಿಕೆಯ 24 ಹೆರಿಗೆ ಆಸ್ಪತ್ರೆಗಳಲ್ಲಿ ಸಾಮಾನ್ಯ ಹೆರಿಗೆ ಆಗುವ ವರದ ಪ್ರಥಮ ಹೆಣ್ಣು ಮಗುವಿಗೆ 5 ಲಕ್ಷ ನೀಡುವ ಪಿಂಕ್​​ ಬೇಬಿ ಯೋಜನೆ, ಪುಲಕೇಶಿನಗರ, ವಿಜಯನಗರ, ಜಯನಗರ, ಸರ್ವಜ್ಞನಗರ, ರಾಜಾಜಿನಗರದಲ್ಲಿ ಡಯಾಲಿಸಿಸ್ ಕೇಂದ್ರಕ್ಕೆ 15 ಕೋಟಿ ಮೀಸಲು, ಪಾಲಿಕೆ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಚಿಕಿತ್ಸೆಗೆ 2 ಕೋಟಿ ರೂ.

ಪಾಲಿಕೆಯ ಶಾಲೆಗಳಿಗೆ ಶುದ್ಧ ನೀರಿಗೆ 5 ಕೋಟಿ ರೂ. ಬಡ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ನೀಡಲು 1 ಕೋಟಿ, ಪಾಲಿಕೆ ವ್ಯಾಪ್ತಿಯ ಶಾಲೆಗಳ ಹೆಣ್ಣು ಮಕ್ಕಳ ಶುಚಿತ್ವಕ್ಕಾಗಿ ಸ್ಯಾನಿಟರಿ ಇನ್ಸಿನೇಟರ್ ಯಂತ್ರಕ್ಕಾಗಿ 5 ಲಕ್ಷ ಮೀಸಲು. ಸಣ್ಣ‌ ಹಾಗು ಮಧ್ಯಮ ಪತ್ರಕರ್ತರಿಗೆ ಆರೋಗ್ಯ ರಕ್ಷಣೆ ವಿಮೆ. ಪ್ರತಿ ವಾರ್ಡ್ ನಲ್ಲಿ 200 ಸಸಿ ನೆಡುವುದು. 50 ಉದ್ಯಾನವನಗಳಲ್ಲಿ ಶೌಚಾಲಯ ನಿರ್ಮಾಣ. ಹಡ್ಸನ್ ವೃತ್ತದಲ್ಲಿ ಇಂಜಿನಿಯರಿಂಗ್ ವುಡ್ ಬಳಸಿ ಪ್ರಥಮ ಬಾರಿಗೆ 5 ಪಥ ಸಂಪರ್ಕಿಸೋ ಸ್ಕೈವಾಕ್ ನಿರ್ಮಾಣ, 8 ವಲಯಗಳಲ್ಲಿ ಹೆಲಿಪಾಡ್ ನಿರ್ಮಾಣ.ಪರಿಶಿಷ್ಟ ಪಂಗಡದವರಿಗೆ ಮನೆ ನಿರ್ಮಿಸಲು ಅನುದಾನ 4ರಿಂದ 5 ಲಕ್ಷಕ್ಕೆ ಏರಿಕೆಮಾಡಿ 80 ಕೋಟಿ ಮೀಸಲು, ಕನ್ನಡಮಯ ಬಸ್ ನಿಲ್ದಾಣ ನಿರ್ಮಿಸಲು 5 ಕೋಟಿ ಹೀಗೆ ಹಲವು ಘೋಷಣೆಗಳನ್ನು ಬಜೆಟ್​ನಲ್ಲಿ ಮಾಡಲಾಗಿದೆ.