ಸಿಲಿಕಾನ ಸಿಟಿಯಲ್ಲಿ ಸಮುದ್ರನೋಡಬೇಕಾ ಹಾಗಿದ್ರೆ ಇಲ್ಲೊಮ್ಮೆ ಭೇಟಿ ನೀಡೊಕೆ ಮರಿಬೇಡಿ

ಇದು ಸಿಲಿಕಾನ್ ಸಿಟಿಯ ಸಮುದ್ರ.. ಕರಾವಳಿಯ ಸಮುದ್ರ ಕೇಳಿದ್ದೀರಿ, ರಾಮೇಶ್ವರಂ ಸಮುದ್ರ ಕೇಳಿದ್ದೀರ..ಆದರೆ ಇದ್ಯಾವುದಪ್ಪ ಸಿಲಿಕಾನ್ ಸಿಟಿ ಸಮುದ್ರ ಅಂತ ಮೂಗಿನ ಮೇಲೆ ಬೆರಳಿಟ್ರಾ?!!

 ಹೌದು ಸಿಲಿಕಾನ್ ಸಿಟಿಯ ಸಮುದ್ರ ಇರೋದು ಕಸ್ತೂರ್ಬಾ ರಸ್ತೆಯಲ್ಲಿ. ವಿಶ್ವೇಶ್ವರಯ್ಯ ಮ್ಯೂಸಿಯಂ ನಲ್ಲಿ ಈಗ ಸಮುದ್ರ ತಯಾರಾಗಿದೆ. ಅಂದ್ರೆ ಮ್ಯೂಸಿಯಂ ಸಂಪೂರ್ಣ ನೀರು ತುಂಬ್ಕೊಂಡಿದೆ ಅಂತಲ್ಲ. 3D ಸಿನೆಮಾ ಮೂಲಕ ನಿಮ್ಮನ್ನು ಹದಿನೈದು ನಿಮಿಷಗಳ ಕಾಲ ಸಮುದ್ರದೊಳಗೆ ಕರ್ಕೊಂಡು ಹೋಗ್ತಾರೆ. ಸಮುದ್ರದಲ್ಲಿರುವ ಜಲಚರಗಳ ಚಲನವಲನಗಳನ್ನು ತಿಳಿದುಕೊಳ್ಳುವ ಆಸಕ್ತಿ ಇದ್ರೆ ಈ ಸಿನೆಮಾವನ್ನೊಮ್ಮೆ ನೋಡಲೇಬೇಕು. ಬಹಮಾಸ್,ಮತ್ತು ಆಸ್ಟ್ರೇಲಿಯಾದ ‌ಗ್ರೇಟ್ ಬ್ಯಾರಿಯರ್ ನಲ್ಲಿ ಈ ದೃಶ್ಯಗಳನ್ನು ಯುನೈಟೆಡ್ ನೇಷನ್ ಎನ್ವಿರಾನ್ಮೆಂಟ್ ನವ್ರು ಸೆರೆ ಹಿಡಿದ್ದಾರೆ. ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಜಲಚರಗಳ ಕುರಿತು ಅರಿವು ಮೂಡಿಸುವ ಸಲುವಾಗಿ ವಿಶ್ವೇಶ್ವರಯ್ಯ ಮ್ಯೂಸಿಯಂ ಈ ದೃಶ್ಯಗಳನ್ನು ಎಂಟು ಲಕ್ಷಕ್ಕೆ ಒಂದು ವರ್ಷದ ಅವಧಿಗೆ ಖರೀದಿಸಿದೆ.

ಸಿನೆಮಾ‌ ನೋಡ್ತಾ ಇದ್ದಂತೆ ಮೀನುಗಳು,ಆಮೆಗಳು ವೀಕ್ಷಕರ ಹತ್ತಿರ ಬಂದಂತೆ ಭಾಸವಾಗುತ್ತದೆ. ಮೂರೇ ದಿನಗಳಲ್ಲಿ ವಿವಿಧ ಶಾಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಮಕ್ಕಳಿಗೆ ೧೫ ರೂಪಾಯಿ ಹಾಗೂ ದೊಡ್ಡವರಿಗೆ ೩೦ ರೂಪಾಯಿ ಪ್ರವೇಶ ಶುಲ್ಕ ವಿಧಿಸಲಾಗಿದೆ. ದಿನಕ್ಕೆ ನಾಲ್ಕರಿಂದ ಆರು ಶೋಗಳು ನಡೆಯುತಿದ್ದು ಜಲಚರಗಳನ್ನು ಉಳಿಸ ಬೇಕಾದ್ರೆ ಸಮುದ್ರಗಳ ಉಳಿವು ಅತೀ ಮುಖ್ಯ ಅಂತಾರೆ ಮ್ಯೂಸಿಯಂ ನಿರ್ದೇಶಕ ಮದನ್ ಗೋಪಾಲ್.ನೀವೂ ಒಮ್ಮೆ ಸಿಲಿಕಾನ್ ಸಿಟಿಯ ಸಮುದ್ರಕ್ಕೆ ಭೇಟಿ ನೀಡಿ ಜಲಚರಗಳ ಬಗ್ಗೆ ತಿಳಿದುಕೊಳ್ಳಿ.