ನಟಿ ಅಮೂಲ್ಯ ರಾಜಕಾರಣಕ್ಕೆ !! ಬಿಲ್ಕುಲ್ ಪೊಲಿಟಿಕ್ಸ್ ಗೆ ಬರಲ್ಲಾ ಅಂದ್ರು ಗೋಲ್ಡನ್ ಕ್ವೀನ್ !!

ರಾಜಕಾರಣದಲ್ಲಿ ಚೆಲುವಿನ ಚಿತ್ತಾರ ಬಿಡಿಸಲು ನಟಿ ಅಮೂಲ್ಯ ಪಾದಾರ್ಪಣೆ ಮಾಡುತ್ತಿದ್ದಾರೆ ಎನ್ನುವುದು ಸ್ಯಾಂಡಲ್ವುಡ್ ಮತ್ತು ರಾಜಕೀಯ ಪಾಳಯದಲ್ಲಿ ಭಾರೀ ಸದ್ದು ಮಾಡುತ್ತಿದೆ.

ad


ಹೌದು. ನಟಿ ಅಮ್ಯೂಲ್ಯ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡುತ್ತಿದ್ದಾರಂತೆ. ಇತಿಚ್ಚೆಗೆ ಬಿಜೆಪಿ ಮುಖಂಡ ಜಿ ಎಚ್ ರಾಮಚಂದ್ರರ ಪುತ್ರ ಜಗದೀಶ್ ರನ್ನು ಅಮೂಲ್ಯ ಇತ್ತಿಚೆಗೆ ವಿವಾಹವಾಗಿದ್ದರು. ಮಾಜಿ ಕಾರ್ಪೋರೇಟರ್ ಜಿ ಎಚ್ ರಾಮಚಂದ್ರರ ಮನೆ ಸೊಸೆಯಾಗಿ ಅಮೂಲ್ಯ ಬಂದಿರೋದು ಬಿಜೆಪಿಗೆ ರಾಜಕೀಯವಾಗಿ ಲಾಭದಾಯಕವಾಗಲಿದೆ ಎಂದು ಆ ಸಂಧರ್ಭದಲ್ಲೇ ಲೆಕ್ಕಾಚಾರಗಳು ನಡೆದಿತ್ತು.

ರಾಜರಾಜೇಶ್ವರಿ ನಗರದಲ್ಲಿ ಜಿ ಎಚ್ ರಾಮಚಂದ್ರ ತನ್ನದೇ ಆದ ಪ್ರಭಾವವನ್ನು ಹೊಂದಿದ್ದಾರೆ. ರಾಮಚಂದ್ರ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದು ಕಾಂಗ್ರೆಸ್ ಪಾಳಯದಲ್ಲಿ ನಡುಕಕ್ಕೆ ಕಾರಣವಾಗಿದೆ. ತನ್ಮದ್ಯೆ ನಟಿ ಅಮೂಲ್ಯ ಕೂಡಾ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವುದು ಕಾಂಗ್ರೆಸ್ ಗೆ ಮತ್ತಷ್ಟೂ ತಲೆನೋವು ತರಿಸಿದೆ.

ಅಮೂಲ್ಯ ರಾಜರಾಜೇಶ್ವರಿ ನಗರದಿಂದ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಯ ಬಗ್ಗೆ ಅಮೂಲ್ಯ ಬಿಟಿವಿ ಜೊತೆ ಮಾತನಾಡಿದ್ದಾರೆ. “ನನ್ನ ಮಾವ ಬಿಜೆಪಿಯಲ್ಲಿ ಚುನಾವಣೆ ಸ್ಪರ್ದಿಸುತ್ತಾರೆ. ನಾನು ಚುನಾವಣೆ ಸ್ಪರ್ದಿಸುತ್ತೇನೆ ಎಂಬ ಸುದ್ದಿ ಹೇಗೆ ಬಂತೋ ಗೊತ್ತಿಲ್ಲ. ರಾಜರಾಜೇಶ್ವರಿ ನಗರದಿಂದ ನನ್ನ ಮಾವ ಚುನಾವಣೆಗೆ ನಿಂತ್ರೆ ನಾನು ಸಪೋರ್ಟ್ ಮಾಡುತ್ತೇನೆ. ಅವರ ಪರ ಚುನಾವಣಾ ಪ್ರಚಾರ ಮಾಡುತ್ತೇನೆ.‌ ನಾನು ಯಾವ ಪಕ್ಷವನ್ನೂ ಸೇರಲ್ಲ” ಎಂದಿದ್ದಾರೆ.