ಪೊಲೀಸರು ಫೈನ್​​ ಹಾಕಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಚಾಲಕ!!

ಬೆಂಗಳೂರಿನಲ್ಲಿ ರಸ್ತೆ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗೆ ನಿಯಮ ಉಲ್ಲಂಘಿಸಿದ ಅಟೋ ಚಾಲಕನ ಬಳಿ ಫೈನ್ ಕೇಳಿದಕ್ಕೆ ಹೈಡ್ರಾಮಾ ಮಾಡಿ ಪೊಲೀಸರನ್ನೇ ಕಂಗಾಲಾಗಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಿನ್ನೆ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆ ಬಳಿ ನಿಯಮ ಉಲ್ಲಂಘಿಸಿದ್ದಕ್ಕೆ ಅಟೋ ಚಾಲಕನನ್ನು ಸಂಚಾರಿ ಪೊಲೀಸರು ಹಿಡಿದಿದ್ದರು. ಈ ವೇಳೆ ಪೊಲೀಸರು ದಂಡ ಕಟ್ಟುವಂತೆ ಒತ್ತಾಯಿಸಿದ್ದಕ್ಕೆ ಈ ಚಾಲಕ ಮಹೇಶ್ ಬಿಎಂಟಿಸಿ ಬಸ್​ ಅಡಿಯಲ್ಲಿ ಮಲಗಿ ಆತ್ಮಹತ್ಯೆಗೆ ಯತ್ನಿಸಿ ಪೊಲೀಸರಿಗೆ ಶಾಕ್ ನೀಡಿದ್ದಾರೆ.

ಮಹೇಶ್ ಅಟೋದ ನೋಂದಣಿ ಸಂಖ್ಯೆ ಪರಿಶೀಲಿಸಿದ ಪೊಲೀಸರಿಗೆ ವಿವಿಧ ಸಂದರ್ಭದಲ್ಲಿ ಒಟ್ಟು 32 ಭಾರಿ ಅಟೋ ಚಾಲಕ ಸಂಚಾರಿ ನಿಯಮ ಉಲ್ಲಂಘಿಸಿದ್ದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ 32 ಕೇಸ್​ಗಳ ದಂಡವನ್ನು ಒಮ್ಮೆಲೆ ಕಟ್ಟುವಂತೆ ಅಟೋಚಾಲಕನಿಗೆ ಪೊಲೀಸರು ಸೂಚಿಸಿದ್ದಾರೆ.

ಇದರಿಂದ ವಿಚಲಿತಗೊಂಡ ಅಟೋ ಚಾಲಕ ಮಹೇಶ್​ ನನ್ನ ಬಳಿ ದಂಡ ಕಟ್ಟಲು ಹಣವಿಲ್ಲ. ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದೇನೆ. ನನ್ನನ್ನು ಬಿಟ್ಟುಬಿಡಿ ಎಂದು ಪೊಲೀಸರ ಬಳಿ ಗೋಗರೆದಿದ್ದಾರೆ. ಅಲ್ಲದೇ ಈಗ ಎರಡು ಕೇಸ್​ಗಳ ದಂಡ ಕಟ್ಟುತ್ತೇನೆ ಉಳಿದ ಹಣವನ್ನು ಕೋರ್ಟ್​್ನಲ್ಲಿ ಕಟ್ಟುತ್ತೇನೆ ಎಂದ ಮಹೇಶ. ಆದರೇ 32 ಕೇಸ್​ಗಳಿದ್ದಿದ್ದರಿಂದ ಒಪ್ಪದ ಪೊಲೀಸರ ಸ್ಥಳದಲ್ಲೇ ಇದಕ್ಕೆ ದಂಡ ಕಟ್ಟುವಂತೆ ಒತ್ತಾಯಿಸಿದರು. ಅದಕ್ಕಾಗಿ ಮಹೇಶ್ ಆತ್ಮಹತ್ಯೆಗೆ ಯತ್ನಿಸಿ ಪೊಲೀಸರನ್ನೇ ಹೆದರಿಸಿದ್ದಾನೆ. ಬಳಿಕ ಪೊಲೀಸರ ಈತನನ್ನು ವಶಕ್ಕೆ ಪಡೆದಿದ್ದು, ಕ್ರಮಜರುಗಿಸಿದ್ದಾರೆ.

 

ಪ್ರತ್ಯುತ್ತರ ನೀಡಿ

Please enter your comment!
Please enter your name here