ಚಿಕನ್​ ಪ್ರಿಯರಿಗೆ ಎದುರಾಗಿದೆ ಸಖತ್​ ಶಾಕ್​- ನಗರಕ್ಕೆ ಕಾಲಿಟ್ಟಿದೆ ಮಾರಕ ಹಕ್ಕಿಜ್ವರ!!

Bengaluru: Bird flu to Hens in Yelahanka.

ಚಳಿಗಾಲದಲ್ಲಿ ಬಿಸಿ-ಬಿಸಿಯಾಗಿ ಚಿಕನ್​​​ ಸಾಂಬಾರ, ಚಿಕನ್​ 65 ಹೀಗೆ ನಾನಾತರದ ಚಿಕನ್​​ ಐಟಂ ತಿಂದು ಹಸಿವು ತಣಿಸಿಕೊಳ್ಳೋ ಪ್ಲಾನ್​ ನಿಮ್ಮದಾಗಿದ್ದರೇ ಇನ್ನೊಂದಿಷ್ಟು ದಿನ ನಿಮ್ಮ ಆಸೆಗೆ ಬ್ರೇಕ್​ ಹಾಕಲೇ ಬೇಕು.

ಯಾಕೆ ಅಂತಿರಾ ನಗರಕ್ಕೆ ಮಾರಕ ಹಕ್ಕಿಜ್ವರ ಕಾಲಿಟ್ಟಿದ್ದು, ಚಿಕನ್​ ಪ್ರಿಯರಿಗೆ ಸಖತ್ ಶಾಕ್ ನೀಡಿದೆ.
ಯಲಹಂಕ ದಾಸರಹಳ್ಳಿಯಲ್ಲಿರುವ ಕೆಜಿಎನ್​ ಚಿಕನ್​ ಸೆಂಟರ್​​ನಲ್ಲಿ ಕೋಳಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದವು. 15 ಕೋಳಿಗಳು ಹೀಗೆ ಸಾವನ್ನಪ್ಪಿದ್ದರಿಂದ ಅವುಗಳನ್ನು ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಈ ವೇಳೆ ಈ ಕೋಳಿಗಳಲ್ಲಿ ಹಕ್ಕಿಜ್ವರದ ರೋಗಾಣುಗಳು ಪತ್ತೆಯಾಗಿದೆ. ಅಲ್ಲದೇ ಇದೇ ಕೋಳಿಗಳನ್ನು ಭೂಪಾಲದಲ್ಲಿರುವ ಪ್ರಯೋಗಾಲದಲ್ಲಿ ಪರೀಕ್ಷಿಸಿದಾಗ ಸತ್ತಿರೋ ಕೋಳಿಗಳಲ್ಲಿ ಹೆಚ್೫ಎನ್೧ ಅಂಶ ಇರುವುದು ಸಾಬೀತಾಗಿದೆ. ಇದೀಗ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಸೂಕ್ತ ಕ್ರಮಕ್ಕೆ ಮುಂಧಾಗಿದೆ.
ಹಕ್ಕಿಜ್ವರ ಪ್ರಕರಣ ದೃಢವಾಗ್ತಿದ್ದಂತೆ ಬಿಬಿಎಂಪಿ ಹಾಗೂ ಪಶು ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ.

 

 

 

ಈಗಾಗಲೇ ಕೆಜಿಎನ್ ಅಂಗಡಿಗೆ ತೆರಳಿ ಶುಚಿಗೊಳಿಸಲಾಗಿದೆ.ದಾಸರಹಳ್ಳಿ ಸುತ್ತಮುತ್ತಲಿನ ವಲಯದಲ್ಲಿ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ಚಿಕನ್ ಸೆಂಟರ್‌ಗಳನ್ನ ಮುಚ್ಚಿಸಲಾಗಿದೆ. ಅಲ್ಲದೇ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸುವಂತೆ ಜಿಲ್ಲಾಧಿಕಾರಿಗಳನ್ನ ಕೋರಲಾಗಿದೆ

ಇನ್ನು ಈಗಾಗಲೇ ದಾಸರಹಳ್ಳಿ ಸುತ್ತಮುತ್ತಲಿನ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕೋಳಿಗಳನ್ನ ಮಾರಾಟ ಮಾಡದಂತೆ ಸೂಚಿಸಲಾಗಿದೆ. ಅಲ್ಲದೇ, ಸದ್ಯ ಇರುವ ಕೋಳಿಗಳನ್ನ ಸುಡುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಆದೇಶಕ್ಕಾಗಿ ಅನುಮತಿ ಕೋರಲಾಗಿದೆ. ಒಂದೊಮ್ಮೆ ಕೋಳಿಜ್ವರ ಉಲ್ಬಣಿಸಿದಲ್ಲಿ ನಗರದಾದ್ಯಂತ ಚಿಕನ್​ ಮಾರಾಟ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.