ಬ್ಯಾಂಕಿನವರ ಕಿರುಕುಳಕ್ಕೆ ಸೆಲ್ಫಿ ಸೂಸೈಡ್.!!ಇದು ಮನಕಲಕುವ ದೃಶ್ಯ!!

Bengaluru: Cab Driver Committe Suicide for Fear the debt notice.
Bengaluru: Cab Driver Committe Suicide for Fear the debt notice.

ರಾಜ್ಯದಲ್ಲಿ ರೈತರು ಸಾಲದ ಶೂಲಕ್ಕೆ ಬಲಿಯಾಗುತ್ತಲೇ ಇದ್ದಾರೆ. ಈ ಮಧ್ಯೆ ಈ ಸಾಲಿಗೆ ಕ್ಯಾಬ್​ ಚಾಲಕನೊರ್ವ ಬಲಿಯಾಗಿದ್ದು, ಪಡೆದ ಪುಟ್ಟ ಸಾಲದ ಮೊತ್ತಕ್ಕೆ ಬಾಳಿಬದುಕಬೇಕಿದ್ದ ಯುವಕನೊರ್ವ ಪ್ರಾಣ ಕಳೆದುಕೊಂಡಿದ್ದಾನೆ. ಬ್ಯಾಂಕ್​ ಸಿಬ್ಬಂದಿಯ ಕಾಟ ತಾಳಲಾರದೇ ಕೇವಲ 5 ಲಕ್ಷ ಸಾಲ ಪಡೆದ ವ್ಯಕ್ತಿಯೊಬ್ಬ ಸಾವಿನ ಸೆಲ್ಫಿ ವಿಡಿಯೋ  ರೆಕಾರ್ಡ್​ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಲದ ಕಂತು ಪಾವತಿಸಿಲ್ಲ ಎಂದು ಸಾರ್ವಜನಿಕವಾಗಿ  ಬ್ಯಾಂಕ್ ಮ್ಯಾನೇಜರ್ ಹಾಗೂ  ಸಿಬ್ಬಂದಿಯಿಂದ ನಿಂದಿಸಿರೋದು ಈತನ ಸಾವಿಗೆ ಕಾರಣವಾಗಿದೆ

ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಬಳಿಯ ಬೆನ್ನಿಗಾನಹಳ್ಳಿ ನಿವಾಸಿ ಅನಿಲ್​ ಹೀಗೆ ತನ್ನ ಸಾವಿನ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಸ್ಥಳೀಯ ಎಸ್​​ಬಿಐ ಬ್ಯಾಂಕ್​ನಲ್ಲಿ ಅನಿಲ್​ 5 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದು, ಪ್ರತಿತಿಂಗಳು ಕಂತು ಕಟ್ಟುತ್ತ ಬಂದಿದ್ದ ಎನ್ನಲಾಗಿದೆ. ಈಗಾಗಲೇ 3 ಲಕ್ಷ ಅಸಲು ಹಾಗೂ ಬಡ್ಡಿ ಕಟ್ಟಿದ್ದ. ಇನ್ನುಳಿದ ಹಣ ಕಟ್ಟಲು ವಿಫಲವಾಗಿದ್ದ ಅನಿಲ್​ನನ್ನು  ಬ್ಯಾಂಕ್​ ಮ್ಯಾನೇಜರ್​ ಹಾಗೂ ಸಿಬ್ಬಂದಿ ನಿಂದಿಸಿದ್ದರು ಎನ್ನಲಾಗಿದೆ.

ಮನೆ ಅಡವಿಟ್ಟು ಸಾಲ ಪಡೆದಿದ್ದ ಅನಿಲ್​ಗೆ ಸಾಲ ಕಟ್ಟದಿದ್ದರೇ ಮನೆ ಹರಾಜಾಕುವುದಾಗಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಇದರಿಂದ ಹೆದರಿದ್ದ ಅನಿಲ್​ ಕಾಲಾವಕಾಶ ಕೋರಿದ್ದ.  ಆದರೇ  ಅದಕ್ಕೂ ಅವಕಾಶ ನೀಡದ ಬ್ಯಾಂಕ್ ಸಿಬ್ಬಂದಿ ನೊಟೀಸ್​ ನೀಡುವ ಬೆದರಿಕೆ ಒಡ್ಡಿದ್ದರು. ಹೀಗಾಗಿ ವೃದ್ಧ ತಂದೆ-ತಾಯಿ,ಪತ್ನಿ ಮಕ್ಕಳನ್ನು ನೆನೆದು ಕಂಗಾಲಾದ ಅನಿಲ್ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದು ಸೆಲ್ಪಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

 

ವಿಡಿಯೋದಲ್ಲಿ ಯಾರು ಸಾಲ ಮಾಡಬೇಡಿ. ಸಾಲದಿಂದಲೇ ನನ್ನ ಬದುಕು ಬಲಿಯಾಯಿತು ಎಂದು ಅನಿಲ್​ ಮನವಿ ಮಾಡಿದ್ದಾನೆ. ಹೀಗೆ ಅನಿಲ್ ಸಾವಿಗೂ ಮುನ್ನ ಮಾಡಿರುವ ವಿಡಿಯೋ ವೈರಲ್​ ಆಗಿದ್ದು, ಜನರು ಶಾಕ್​ ಆಗಿದ್ದಾರೆ. ಇನ್ನು ಬಾಳಿಬದುಕಬೇಕಿದ್ದ ಮಗ ಸಾಲಕ್ಕೆ ಹೆದರಿ ಸಾವಿಗೆ ಶರಣಾಗಿರೋದರಿಂದ ಅನಿಲ್ ಹೆತ್ತವರು ಕಣ್ಣೀರಿಡುತ್ತಿದ್ದಾರೆ. ಆತನನ್ನೇ ನಂಬಿ ಬಂದಿದ್ದ ಪತ್ನಿ-ಮಕ್ಕಳು ಅನಾಥರಾಗಿದ್ದು, ಸಾಲ ಮರುಪಾವತಿಗಾಗಿ ಹಿಂಸೆ ನೀಡಿ ಅನಿಲ್ ಆತ್ಮಹತ್ಯೆಗೆ ಪ್ರೇರಣೆ ನೀಡಿದ  ಬ್ಯಾಂಕ್​ ವಿರುದ್ಧ ಅನಿಲ್ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.