ಆಸ್ಪತ್ರೆಯಲ್ಲೂ ನಿಮ್ಮ ಬೆತ್ತಲೆ ಫೋಟೋ ತೆಗೆಯೋ ಕೀಚಕರಿದ್ದಾರೆ !! ಕೆ ಆರ್ ಪುರ ಆಸ್ಪತ್ರೆಯಲ್ಲಿ ಕಾಮಾಂಧ !!

Bengaluru: D-group employee Indecent Behavior on Hospital Workers and Patients.
Bengaluru: D-group employee Indecent Behavior on Hospital Workers and Patients.

ಆಸ್ಪತ್ರೆ ಅಂದ್ರೆ ದೇಗುಲವಿದ್ದಂತೆ. ಆಸ್ಪತ್ರೆ ಸಿಬ್ಬಂದಿಗಳನ್ನು ಸ್ವಲ್ಪವೂ ಅನುಮಾನಿಸದೆ ಅವರು ಹೇಳಿದಂತೆ ಕೇಳುತ್ತೇವೆ. ನಮ್ಮ ದೇಹ ಪರೀಕ್ಷೆ ಮಾಡುವ ಸಂಧರ್ಭ ಆಸ್ಪತ್ರೆ ಸಿಬ್ಬಂದಿಗಳ ಎದುರು ಮುಲಾಜಿಲ್ಲದೆ ದೇಹದ ಭಾಗಗಳನ್ನು ತೋರಿಸುತ್ತೇವೆ. ಅದನ್ನೂ ಮೊಬೈಲಲ್ಲಿ ಸೆರೆ ಹಿಡಿದು ಶೇರ್ ಮಾಡುವ ಕೀಚಕ ಸಿಬ್ಬಂದಿಗಳು ಇರುತ್ತಾರೆ !

 

ಹೌದು. ಕೆ ಆರ್ ಪುರಂ ಸರಕಾರಿ ಆಸ್ಪತ್ರೆಯಲ್ಲಿ ಇಂತಹ ಘಟನೆ ವರದಿಯಾಗಿದೆ. ಆಸ್ಪತ್ರೆಗೆ ಬಂದ ಮಹಿಳಾ ‌ರೋಗಿಯೊಂದಿಗೆ ಡಿ ಗ್ರೂಪ್ ನೌಕರನೊಬ್ಬ ಈ ರೀತಿ ಅನುಚಿತವಾಗಿ ವರ್ತಿಸಿದ್ದಾನೆ.

 

ಬೆಂಗಳೂರು ನಗರದ ಕೆಆರ್ ಪುರ ಸರ್ಕಾರಿ ಆಸ್ಪತ್ರೆಯಲ್ಲಿನ ಕಾಮಾಂಧ ಡಿಗ್ರೂಪ್ ನೌಕರ ರಘು ಎಂಬಾತನಿಂದ ಈ ಕೃತ್ಯ ನಡೆದಿದೆ. ಮಹಿಳೆಯೊಬ್ಬಳು ಇಸಿಜಿ ಮಾಡಿಸಲು ಹೋಗಿದ್ದಾಗ ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಿದಾನೆ. ಇಸಿಜಿ ಮಾಡಿಸಲು ಮಹಿಳೆ ಸ್ವಲ್ಪ ಬಟ್ಟೆ ಸರಿಸಬೇಕಿತ್ತು. ಅ ಅವಕಾಶವನ್ನೇ ದುರುಪಯೋಗಪಡಿಸಿಕೊಂಡ ಕೀಚಕ ಮೋಬೈಲ್ ನಲ್ಲಿ ದೃಶ್ಯಾವಳಿ ಸೆರೆ ಹಿಡಿದಿದ್ದಾನೆ.

 

ಕೀಚಕ ರಘು ಮೇಲೆ ಕ್ರಮಕ್ಕೆ ಒತ್ತಾಯಿಸಿ ನೊಂದ ಮಹಿಳೆ  ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಟಿಹೆಚ್ ಒ ಡಾ. ಚಂದ್ರಶೇಖರ್  ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.