ನಂಗೆ ನನ್ನ ಹೆಂಡ್ತಿ ಹತ್ರ ಮಾತಾಡೋಕೆ ಭಯವಾಗುತ್ತೆ- ಡಿವೋರ್ಸ್​ ಗಾಗಿ ಹೈಕೋರ್ಟ ಮೆಟ್ಟಿಲೇರಿದ ಪತಿ!

Bengaluru: Husband approached the High Court for divorce.

 ಇತ್ತೀಚಿನ ದಿನಗಳಲ್ಲಿ ಮದುವೆಯಾಗಿರೋ ದಂಪತಿಗಳು ನಾನಾ ಕಾರಣಕ್ಕೆ ಡಿವೋರ್ಸ್​ ಮೊರೆ ಹೋಗೋದು ಸಾಮಾನ್ಯವಾದ ಸಂಗತಿ.

ad

 

ಆದರೇ ಡಿವೋರ್ಸ್​ಗೆ ಬಂದ ಪತಿ -ಪತ್ನಿಯನ್ನು ಕಂಡು ಕೋರ್ಟ್​ ಹಾಲ್​​ನಲ್ಲೂ ಹೆದರಿದ್ದು, ನಂಗೆ ಹೆಂಡ್ತಿ ಕಂಡ್ರೆ ಭಯವಾಗುತ್ತೆ ಅವಳಿಂದ ಮುಕ್ತಿ ಕೊಡಿಸಿ ಎಂದು ಹೈಕೋರ್ಟ್​ ಮೊರೆ ಹೋದ ವಿಲಕ್ಷಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  ವ್ಯಕ್ತಿಯೊರ್ವ ಪತ್ನಿಯ ಜೊತೆ ಬಾಳಲಾರದೇ ಹೈಕೋರ್ಟ್​ ಮೊರೆ ಹೋಗಿದ್ದು, ಡಿವೋರ್ಸ್​ಗೆ ಅರ್ಜಿ ಹಾಕಿದ್ದ. ಆದರೇ ಹೈಕೋರ್ಟ್​ನ ಪೀಠದ ಎದುರು ಹಾಜರಾದ ದಂಪತಿಗೆ ನ್ಯಾಯಮೂರ್ತಿಗಳು ಸ್ವಲ್ಪ ಹೊತ್ತು ಇಬ್ಬರು ಕಬ್ಬನ್ ಪಾರ್ಕ್ ಸುತ್ತಾಡಿ ಮಾತಾಡಿಕೊಂಡು ಬನ್ನಿ ಎಂದಿದ್ದಾರೆ. ಆದರೇ ತಕ್ಷಣ ರಿಯಾಕ್ಟ್​ ಮಾಡಿದ ಪತಿ, ಅಯ್ಯೋ ನಾನು ಹೋಗಲ್ಲ.

 

 

ನನಗೆ ಅವಳನ್ನು ಕಂಡ್ರೆ ಭಯವಾಗುತ್ತೆ. ಏನೇ ಇದ್ರೂ ಇಲ್ಲೆ ಮಾತಾಡ್ತಿನಿ ಎಂದು ಬಡಬಡಿಸಿದ್ದಾನೆ.  ಗಂಡನ ಮಾತು ಕೇಳಿ ಸ್ವತಃ ನ್ಯಾಯಮೂರ್ತಿಗಳೇ ಬೆಚ್ಚಿ ಬಿದ್ದಿದ್ದು, ಕೊನೆಗೆ ಕೋರ್ಟ್​ನ ಕಾರಿಡಾರಿನಲ್ಲೇ ಮಾತಾಡಿಕೊಳ್ಳಿ. ಒಂದಾಗ್ತಿರೋ ಅಥವಾ ಬೇರೆ-ಬೇರೆ ಆಗ್ತಿರೋ ಸಂಜೆಯೊಳಗೆ ನಿಮ್ಮ ನಿರ್ಧಾರ ತಿಳಿಸಿ ಎಂದಿದ್ದಾರೆ. ಕೊನೆಗೆ ಗಂಡನ ಮನವೊಲಿಸಿದ ಪೊಲೀಸರು ಪತಿಗೆ ಖಾಲಿ ಕೋರ್ಟ್​ ಹಾಲ್​ನಲ್ಲಿ ಪತ್ನಿ ಜೊತೆ ಮಾತನಾಡಲು ಅವಕಾಶ ಕೊಟ್ಟರು. ಪೊಲೀಸರ ಕಾವಲಿನಲ್ಲಿ ಪತಿ-ಪತ್ನಿ ಗಂಟೆಗೂ ಅಧಿಕ ಕಾಲ ಮಾತಾಡಿಕೊಂಡಿದ್ದಾರೆ. ಆದರೂ ಪತಿ-ಪತ್ನಿ ಒಂದು ಒಪ್ಪಂದಕ್ಕೆ ಬರಲಾರದೇ ಹೋಗಿದ್ದಕ್ಕೆ ನ್ಯಾಯಾಲಯವೂ ಈ ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ವರ್ಗಾಯಿಸಲಾಗಿದೆ.