ಮತ್ತೆ ಮ್ಯಾನ್ ಹೋಲ್ ಗಿಳಿದ ಕಾರ್ಮಿಕ- ನಿಯಮಕ್ಕಿಲ್ಲ ಬೆಲೆ!!

ನಗರದಲ್ಲಿ ಇದುವರೆಗೂ ಹತ್ತಾರು ಜನರು ಮ್ಯಾನ್​ ಹೋಲ್​ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮದಲ್ಲದ ತಪ್ಪಿಗೆ ಅಮಾಯಕ ಕಾರ್ಮಿಕರು ಪ್ರಾಣ ತೆತ್ತಿದ್ದಾರೆ. ಆದರೂ ಅಧಿಕಾರಿಗಳದಿವ್ಯ ನಿರ್ಲಕ್ಷ್ಯ ಇನ್ನು ಮುಂದುವರಿದಿದೆ. ಹೌದು ನಗರದಲ್ಲಿ ಮತ್ತೆ ಬರಿಗೈಯಲ್ಲಿ ಕಾರ್ಮಿಕರನ್ನೇ ಮ್ಯಾನ್​ಹೋಲ್​ಗೆ ಇಳಿಸಲಾಗಿದ್ದು, ಬಿಟಿವಿ ಕ್ಯಾಮರಾಗೆ ಈ ಎಕ್ಸಕ್ಲೂಸಿವ್​ ವಿಡಿಯೋ ಲಭ್ಯವಾಗಿದೆ.


ಕೆ.ಆರ್.ಪುರನ ಬಸವಪುರ ವಾರ್ಡ್​​​ನ ಶೀಗೆಹಳ್ಳಿ ಯಲ್ಲಿ ಮ್ಯಾನ್​ಹೋಲ್​​ ಸ್ವಚ್ಛಗೊಳಿಸಲು ಕಾರ್ಮಿಕರನ್ನೆ ಬಳಸಿಕೊಳ್ಳಲಾಗಿದೆ. ತುಂಬಿದ ಮ್ಯಾನ್ ಹೋಲ್​​ಗೆ ಯಾವುದೇ ಸುರಕ್ಷತಾ ಕ್ರಮಗಳು, ಮುಂಜಾಗ್ರತಾ ಕ್ರಮಗಳಿಲ್ಲದೇ ಕಾರ್ಮಿಕನನ್ನು ಇಳಿಸಲಾಗಿದೆ. ಆತ ಗಬ್ಬು ವಾಸನೆ ನಡುವೆಯೇ ಅತ್ಯಂತ ಅಪಾಯಕಾರಿ ಕೆಲಸ ಮಾಡಿಸಿದ್ದಾರೆ.


ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯದ ಎದ್ದು ಕಾಣಿಸುತ್ತಿದ್ದು ಮ್ಯಾನ್ ಹೋಲ್​​ ಸ್ವಚ್ಛತೆಗೆ ಯಂತ್ರಗಳನ್ನು ಬಳಸಬೇಕೆಂಬ ನಿಯಮವಿದ್ದರೂ ನಿಯಮ ಲಕ್ಷಿಸದೇ ಪುಡಿಗಾಸಿಗೆ ದುಡಿಯುವ ಕಾರ್ಮಿಕರ ಪ್ರಾಣವನ್ನು ಪಣಕ್ಕೆ ಒಡ್ಡಲಾಗಿದ್ದು, ಇದಕ್ಕೆ ಸಾರ್ವಜನಿಕರ ತೀವ್ರ ಆಕ್ಷೇಪ ವ್ಯಕ್ತವಾಗಿದೆ.