ಲಾಡ್ಜ್​​ಗೆ ಕಾಲಿಟ್ಟರೇ ಟಿವಿ ಮಾಯ- ಆರೇಸ್ಟ್ ಆದಾಗ ಸಿಕ್ಕಿದ್ದು 21 ಎಲ್​.ಇ.ಡಿ ಟಿವಿ!!

Bengaluru: Police Arrest the TV Thief.

ಆತ ಸಾಮಾನ್ಯ ವ್ಯಕ್ತಿಯಂತೆ ಲಾಡ್ಜ್​ಗೆ ಹೋಗ್ತಿದ್ದ. ನಕಲಿ ಐಡಿ ಕಾರ್ಡ್​ಗಳನ್ನು ನೀಡಿ ರೂಂ ಪಡೆದುಕೊಳ್ತಿದ್ದ. ರೂಂಗೆ ತೆರಳಿದವನೇ ರೂಂನಲ್ಲಿದ್ದ ಎಲ್​ಇಡಿ ಟಿವಿಯನ್ನು ಬಿಚ್ಚಿ ತಾನು ತಂದಿದ್ದ ಸೂಟಕೇಸ್​ನಲ್ಲಿ ಭದ್ರವಾಗಿ ಇಡುತ್ತಿದ್ದ. ಅಷ್ಟೇ ತನಗೇನೂ ಗೊತ್ತೆ ಇಲ್ಲ ಅನ್ನುವ ಹಾಗೆ ಹೊಟೇಲ್​ ರೂಂನಿಂದ ನಾಪತ್ತೆಯಾಗುತ್ತಿದ್ದ. ಇಂತಹ ಖರ್ತನಾಕ ಟಿವಿ ಕಳ್ಳ ಕೊನೆಗೂ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಸಿಲಿಕಾನ ಸಿಟಿಯ ಲಾಡ್ಜ್​ ಮಾಲೀಕರುಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

 

 

ಕಳೆದ ಕೆಲ ತಿಂಗಳಿನಿಂದ ಸಿಲಿಕಾನ ಸಿಟಿಯ ಹಲವು ಲಾಡ್ಜ್​​ಗಳಲ್ಲಿ ಎಲ್​.ಇ.ಡಿ ಟಿವಿಗಳು ಮಾಯವಾಗಿದ್ದವು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕೊಡಗು ಜಿಲ್ಲೆ ಮೂಲದ ಚೀರಂಬಳ್ಳಿ ನಿವಾಸಿ ವಾಸುದೇವ ಎಂಬಾತನನ್ನು ಬಂಧಿಸಿದ್ದು, ಬಂಧಿತನಿಂದ 21 ಎಲ್​ಇಡಿ ಟಿವಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಟ್ಯಾನರಿ ರೋಡ್​ನಲ್ಲಿ ವ್ಯಕ್ತಿಯೊಬ್ಬ ಎಲ್​ಇಡಿ ಟಿವಿಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಟಿವಿಕಳ್ಳನನ್ನು ಬಂಧಿಸಿದ್ದಾರೆ.

 

Bengaluru: Police Arrest the TV Thief.
Bengaluru: Police Arrest the TV Thief.

ವಾಸುದೇವ್ ಕಳ್ಳತನದ ಹಿಂದೆ ಕೂಡ ಇಂಟರಸ್ಟಿಂಗ್ ಕತೆ ಇದೆ. ಈತ ಹಲವು ಕಡೆ ಸಾಲ ಮಾಡಿದ್ದ. ಸಾಲ ತೀರಿಸೋಕೆ ಹಾಗೂ ಕಳ್ಳತನ ಪ್ರಕರಣದ ವಾದ ಮಾಡುವ ಲಾಯರ್ ಫೀಸ್ ಕಟ್ಟೋಕೆ ಅಂತ ಈತ ಕಳ್ಳತನ ಮಾಡುತ್ತಿದ್ದ. ಈಗಾಗಲೇ ಗಿರಿನಗರ , ಶಿವಮೊಗ್ಗ ಸೇರಿದಂತೆ ಹಲವೆಡೆ ಕಳ್ಳತನ ಮಾಡಿದ್ದ ವಾಸುದೇವ ಆ ಪ್ರಕರಣಗಳ ವಾದ ಮಂಡನೆಗೆ ವಕೀಲರು ಹೆಚ್ಚಿನ ಹಣ ಕೇಳಿದ್ದರಿಂದ ಮತ್ತೆ ಕಳ್ಳತನಕ್ಕೆ ಇಳಿದಿದ್ದ. ಒಟ್ಟಿನಲ್ಲಿ ಬದುಕೋಕೆ ವಿನೂತನ ದಾರಿ ಹಿಡಿದಿದ್ದ ಟಿವಿಕಳ್ಳ ಕೊನೆಗೂ ಜೈಲು ಸೇರಿದ್ದಾನೆ.