ಸಿಲಿಕಾನ ಸಿಟಿಯಲ್ಲಿ ಮತ್ತೊಬ್ಬ ಸೈಕೋಪಾತ್​​ ಬಂಧನ!

Bengaluru: Psychopath Clicks women's photo, Record a Women's Video.
Bengaluru: Psychopath Clicks women's photo, Record a Women's Video.

ಬೆಂಗಳೂರಿನಲ್ಲಿ ರಸ್ತೆಯಲ್ಲಿ ಓಡಾಡುವ ಮಹಿಳೆಯರು ಸೇಫಲ್ಲ ಎಂಬುದು ಹಲವು ಸಂದರ್ಭದಲ್ಲಿ ಸಾಬೀತಾಗಿದೆ. ಇದೀಗ ಕೆಲಸ ಮಾಡುವ ಕಂಪನಿಯಲ್ಲೂ ಹೆಣ್ಣುಮಕ್ಕಳು ಸೇಫಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಹೌದು ಬೆಂಗಳೂರಿನಲ್ಲಿ ಮತ್ತೊಬ್ಬ ಸೈಕೋಪಾತ್​​ ಕಾಣಿಸಿಕೊಂಡಿದ್ದು, ಈ ಸೈಕೋಪಾತ್, ಐಟಿ ಕಂಪನಿಯಲ್ಲಿ ಮಹಿಳಾ ಉದ್ಯೋಗಿಗಳ ಶೌಚಾಲಯದ ವಿಡಿಯೋ ತೆಗೆಯುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.  ಇಂದಿರಾನಗರದ 80 ಫೀಟ್​ ರಸ್ತೆಯಲ್ಲಿರುವ ಐಟಿ ಕಂಪನಿಯೊಂದರಲ್ಲಿ ಹೌಸ್​ ಕೀಪಿಂಗ್​ ಕೆಲಸ ಮಾಡುತ್ತಿದ್ದ, ಧರ್ಮೇಂದ್ರ ಕುಮಾರ್​ ಯಾದವ್​ ಎಂಬಾತನೇ ಈ ಸೈಕೋ. ಈತ ಕಂಪನಿಯಲ್ಲಿ ಮಹಿಳಾ ಉದ್ಯೋಗಿಗಳು ಶೌಚಾಲಯಕ್ಕೆ ತೆರಳುವುದನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ. ಬಳಿಕ ಅದನ್ನು ನೋಡಿ ಎಂಜಾಯ್ ಮಾಡುತ್ತಿದ್ದ.

ಮಹಿಳಾ ಉದ್ಯೋಗಿಯೊಬ್ಬರು ಇದನ್ನು ಕಂಡುಹಿಡಿದು, ಧರ್ಮೇಂದ್ರ ಕುಮಾರ್​ ಮೊಬೈಲ್​ ಪರಿಶೀಲನೆ ನಡೆಸಿದಾಗ ಈ ರೀತಿಯ ಸಾಕಷ್ಟು ವಿಡಿಯೋಗಳು ಪತ್ತೆಯಾಗಿವೆ.  ಇದನ್ನು ನೋಡಿದ ಮಹಿಳಾ ಉದ್ಯೋಗಿಗಳು, ಆತನ ವಿರುದ್ಧ ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಇಂದಿರಾನಗರ ಪೊಲೀಸರು ಸೈಕೋ ಧರ್ಮೇಂದ್ರ ಕುಮಾರ್​​ನನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಧರ್ಮೇಂದ್ರಕುಮಾರ್ ಯಾದವ್​ ಈ ರೀತಿಯ ಹವ್ಯಾಸ ಹೊಂದಿದ್ದು, ಸೈಕೋಮನಸ್ಥಿತಿಯು ಬೆಳಕಿಗೆ ಬಂದಿದೆ.