ಕೇರಳಿಗರು ಬೆಂಗಳೂರಲ್ಲಿ ಮೂತ್ರ ಮಾಡಿದರೆ 9 ಸಾವಿರ ರೂ ದಂಡ !! ಮೂತ್ರದಂಡಕ್ಕೆ ಬೆಚ್ಚಿದ ಮಲ್ಲುಗಳು !!

Bengaluru: Railway Police Fine 9,000/- for urinating in Compound.
Bengaluru: Railway Police Fine 9,000/- for urinating in Compound.

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ರೆ ಅಬ್ಬಬ್ಬಾ ಎಂದರೆ ಎಷ್ಟು ದಂಡ ಹಾಕಬಹುದು. 100 ರೂಪಾಯಿ, ಇನ್ನೂರು ರೂಪಾಯಿ ಅಥವಾ 500 ರೂಪಾಯಿ. ಆದರೆ ಇಲ್ಲಿ ಕಂಪೌಂಡ ಪಕ್ಕ ಮೂತ್ರ ಮಾಡಿದ್ದಕ್ಕೆ ಬರೋಬ್ಬರಿ 9 ಸಾವಿರ ದಂಡ ಕಿತ್ತುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೇರಳದಿಂದ ಬಂದ ಕಲಾವಿದರು ನಗರ ಪೊಲೀಸರ ವಿರುದ್ಧ ಇಂತಹದೊಂದು ಸುಲಿಗೆ ಆರೋಪ ಮಾಡಿದ್ದಾರೆ.

Bengaluru: Railway Police Fine 9,000/- for urinating in Compound.
Bengaluru: Railway Police Fine 9,000/- for urinating in Compound.

ಇದೇ ನವೆಂಬರ್ 12 ರಂದು ಕಾಂಗ್ರೆಸ್ ಶಾಸಕ ಹ್ಯಾರೀಸ್ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ಕೇರಳದಿಂದ ಚಂಡೆ ಕಲಾವಿದರು ಆಗಮಿಸಿದ್ದರು. ಅದೇ ದಿನ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುವ ರೇಲ್ವೆ ನಿಲ್ದಾಣದ ಬಳಿ ಕಂಪೌಂಡ್ ಬಳಿ ಕೆಲ ಕಲಾವಿದರ ಮೂತ್ರ ವಿಸರ್ಜನೆ ಮಾಡಿದ್ದರು. ಇದನ್ನೆ ನೆಪವಾಗಿಸಿಕೊಂಡು ರಾಜ್ಯ ರೇಲ್ವೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರ್ ಕುಮಾರ್ ಪಾಂಡೆಯವರ ಕಾರು ಚಾಲಕ ಪಾಪಣ್ಣ ಹಾಗೂ ವಿನಯ್ ಕುಮಾರ್ ಈ ಕಲಾವಿದರಿಂದ ದಂಡವೆಂದು 9 ಸಾವಿರ ರೂಪಾಯಿ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.

Bengaluru: Railway Police Fine 9,000/- for urinating in Compound.
Bengaluru: Railway Police Fine 9,000/- for urinating in Compound.

ಅಂದಿನ ಕಾರ್ಯಕ್ರಮದ ಸಂಭಾವನೆಯಾಗಿ ನೀಡಲಾಗಿದ್ದ 9 ಸಾವಿರ ರೂಪಾಯಿಗಳನ್ನು ಈ ಇಬ್ಬರು ಪೊಲೀಸರು ಕಿತ್ತುಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಹರಿದಾಸ್ ಎಂಬ ಕಲಾವಿದರು 100 ಕ್ಕೆ ಪೋನ್ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಕಾಟನ್​ ಪೇಟೆ ಪೊಲೀಸರು ಧಾವಿಸಿದ್ದಾರೆ. ಆದರೇ ಘಟನೆ ರೇಲ್ವೆ ನಿಲ್ದಾಣದ ಆವರಣದಲ್ಲಿ ನಡೆದಿರೋದರಿಂದ ಪ್ರಕರಣ ದಾಖಲಿಸಿಕೊಂಡು ಕಾಟನಪೇಟೆ ಪೊಲೀಸರು ಕೇಸ್​ನ್ನು ರೇಲ್ವೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಬೆಂಗಳೂರು ಪೊಲೀಸರು ಸುಲಿಗೆಗಿಳಿದ್ರು ಎಂಬ ಆರೋಪ ತಂದಿಟ್ಟಿದೆ.

Watch Here: https://youtu.be/IciVw6JAUQ8