ನಟನಿಗೆ ಸಂಚಾರಿ ಪೊಲೀಸರು ಕಿರಿಕ್​ ಮಾಡಿದ್ಯಾಕೆ?

Bengaluru: Traffic police attack on film Actor Santhosh for Parking Issue.
Bengaluru: Traffic police attack on film Actor Santhosh for Parking Issue.

ಚಿತ್ರನಟನ ಮೇಲೆ ಟ್ರಾಫಿಕ್ ಪೋಲೀಸ್ ಹಲ್ಲೆ

ad

ಬೆಂಗಳೂರು ಸಂಚಾರಿ ಪೊಲೀಸರ ವಿರುದ್ಧ ಮತ್ತೊಮ್ಮೆ ದೌರ್ಜನ್ಯದ ಆರೋಪ ಕೇಳಿಬಂದಿದೆ.  ಡಿ.ಮಾದ ಮತ್ತು ಮಾನಸಿ,ಮುಗಿಲು ಚಿತ್ರಗಳಲ್ಲಿ ನಟಿಸಿರುವ  ಪಿ.ಸಂತೋಷ ಎಂಬ  ನಟನಿಗೆ ಸಂಚಾರಿ ಪೊಲೀಸರು ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು, ತನ್ನನ್ನು ನವೆಂಬರ್​ 3 ರ ಸಂಜೆ 5.30 ರಿಂದ 10.30 ರವರೆಗೆ ಕೂಡಿಹಾಕಿ ಥಳಿಸಲಾಗಿದೆ ಎಂದು  ನಟ ಪಿ.ಸಂತೋಷ ಆರೋಪಿಸಿದ್ದಾರೆ.

ಬೆಂಗಳೂರಿನ ವೈಟ್​ಫಿಲ್ಡ್​​ನ  ಸಂಚಾರಿ ಪೊಲೀಸರಾದ ಸಂತೋಷ ನಾಯ್ಕ ಮತ್ತು ಕಿರಣ ಸೇರಿ 5 ಪೇದೆಗಳು ಹಲ್ಲೆ ನಡೆಸಿದ್ದಾರೆ ಎಂದು ಪಿ. ಸಂತೋಷ ಆರೋಪಿಸಿದ್ದಾರೆ. ಹವ್ಯಾಸದಲ್ಲಿ ಚಿತ್ರನಟನಾಗಿರುವ ಸಂತೋಷ ಜೀವನೋಪಾಯಕ್ಕಾಗಿ  ಟ್ಯಾಕ್ಸಿ ಓಡಿಸುವ ಕೆಲಸ ಮಾಡುತ್ತಿದ್ದಾರೆ.  ನವೆಂಬರ್ 3 ರಂದು ಪ್ರಯಾಣಿಕರನ್ನ ಪಿಕಪ್ ಮಾಡಲು ತೆರಳಿದ್ದ  ಸಂತೋಷ ಐಟಿಪಿಎಲ್ ನ ಜಿ ಆರ್ ಟೆಕ್ ಪಾರ್ಕ್ ಎದುರು ಇಟಿಯೋಸ್ ಗಾಡಿ ನಿಲ್ಲಿಸಿಕೊಂಡಿದ್ದರು. ಈ ವೇಳೆ ಟ್ರಾಫಿಕ್ ಪೊಲೀಸರು  ಸಂತೋಷ ಜೊತೆ ಜಗಳಕ್ಕಿಳಿದಿದ್ದಾರೆ.

 

 

ಬಳಿಕ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ  ಎಂದು ಆರೋಪಿಸಿ ಸಂತೋಷನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಒದೆ ತಿಂದು ಅಸ್ವಸ್ಥನಾಗಿದ್ದ ಸಂತೋಷನನ್ನು ಸಂಚಾರಿ ಪೊಲೀಸರು ಕಾಡುಗೋಡಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಇನ್ನು ತನ್ನ ಮಗನನ್ನು ಯಾಕೆ ಥಳಿಸಿದ್ದಿರೆಂದು ಪ್ರಶ್ನಿಸಲು ತೆರಳಿದ ಸಂತೋಷ ತಾಯಿಯೊಂದಿಗೆ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಟನ ತಾಯಿ ಆರೋಪಿಸಿದ್ದಾರೆ. ಹೀಗಾಗಿ ನೊಂದಿರುವ ನಟ ಹಾಗೂ ಆತನ ತಾಯಿ ನಗರ ಸಂಚಾರಿ ಪೊಲೀಸರ ಆಯುಕ್ತರ ಮೊರೆ ಹೋಗಿದ್ದು ನ್ಯಾಯಕ್ಕೆ ಆಗ್ರಹಿಸಿದ್ದಾರೆ.