ನಗರದಲ್ಲಿ ಕೆಲಕಾಲ ಮೆಟ್ರೋ ಸ್ಥಗಿತ- ಕಾರಣ ಏನು ಗೊತ್ತಾ?

Bengaluru: Traffic variation in Metro train for Technical issue

ಸಿಲಿಕಾನ ಸಿಟಿಯ ಜನರ ಪಾಲಿಗೆ ಆಪ್ತವಾಗಿರುವ ಮೆಟ್ರೋ ರೈಲಿನಲ್ಲಿ ಇಂದು ಆಕಸ್ಮಿಕ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೆಲಕಾಲ ಮೆಟ್ರೋದಲ್ಲಿ ಎಸಿ ವ್ಯವಸ್ಥೆ ಹಾಗೂ ಮೆಟ್ರೋ ಸಂಚಾರವೇ ಸ್ಥಗಿತಗೊಂಡಿತ್ತು.

ಮೆಜೆಸ್ಟಿಕ್​​ನಿಂದ ಸೆಂಟ್ರಲ್​ ಕಾಲೇಜು ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಮೆಟ್ರೋ ಸಂಚಾರ ಸ್ಥಗಿತಗೊಂಡಿದ್ದರ ಜೊತೆಗೆ ವಿದ್ಯುತ್​ ಪೊರೈಕೆ ಕೂಡ ಸ್ಥಗಿತವಾಗಿದ್ದರಿಂದ ಕೆಲ ನಿಮಿಷಗಳ ಕಾಲ ಎಸಿ ಇಲ್ಲದೇ ಪ್ರಯಾಣಿಕರು ಉಸಿರಾಡಲು ಕಷ್ಟಪಡುವಂತಾಯಿತು. ಕೇವಲ ಅರ್ಧಗಂಟೆಯಲ್ಲಿ ಸಮಸ್ಯೆ ಬಗೆಹರಿದಿದ್ದರಿಂದ ಮೆಟ್ರೋ ಸಂಚಾರ ಆರಂಭವಾಗಿದೆ.
ಮೆಟ್ರೋ ಧೀಡಿರ ಸ್ಥಗಿತಗೊಂಡಿದ್ದರ ಕುರಿತು ಪ್ರತಿಕ್ರಿಯಿಸಿರುವ ಬಿಎಂಆರ್​ಸಿಎಲ್​ ಎಂಡಿ ಮಹೇಂದ್ರ ಜೈನ್​, ತಾಂತ್ರಿಕ ಪವರ್ ಸಪ್ಲೈ ಟ್ರಿಪ್ ಆಗಿದೆ. ಎಲ್ಲ ಪ್ಲ್ಯಾಟ್ ಫಾರ್ಮ್ ಒಳಗೆ ನಿಂತುಕೊಂಡಿದೆ. ಈ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ. ಪವರ್ ಸಪ್ಲೈ ಟ್ರಿಪ್ ಆಗಲು ಕಾರಣ ಹುಡುಕುತ್ತಿದ್ದೇವೆ ಎಂದರು. ಅಲ್ಲದೇ ಮೆಟ್ರೋ ಫ್ರೀಕ್ವೆನ್ಸಿ ಹೆಚ್ಚಳ ಮಾಡಿದ್ದೇವೆ.

 

 

ಇದರಿಂದ ಒತ್ತಡ ಹೆಚ್ಚಾಗಿ ಪವರ್ ಟ್ರಿಪ್ ಆಯ್ತಾ ಎಂಬ ಬಗ್ಗೆ ತಾಂತ್ರಿಕ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದರು. ಅಲ್ಲದೇ ಹೊಸ ವರ್ಷದ ದಿನದಂದು ಮೆಟ್ರೋ ಅವಧಿ ವಿಸ್ತರಣೆ ಮಾಡಿದ್ದರಿಂದ ಮೂರು ಗಂಟೆಯಲ್ಲಿ ಬರೋಬ್ಬರಿ 32 ಸಾವಿರ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ ಎಂದರು. ಕೆಲಕಾಲ ಧೀಡಿರ ಮೆಟ್ರೋ ಸ್ಥಗಿತಗೊಂಡಿದ್ದರಿಂದ ಮೆಟ್ರೋ ನಂಬಿ ಶಾಲೆ-ಕಾಲೇಜು, ಕಚೇರಿಗೆಗಳಿಗೆ ಪ್ರಯಾಣಿಸುತ್ತಿದ್ದ ಜನರು ಪರದಾಡಿದರು.