ಲೇಡಿ ಪೊಲೀಸರಿಗೇ ಡಾರ್ಲಿಂಗ್​ ಎಂದ ಕಿರಾತಕರು.!!

Bengaluru: Two Women Police Sexually Harassed By Man.
Bengaluru: Two Women Police Sexually Harassed By Man.

ಬೆಂಗಳೂರಿನಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬ ಕೂಗು ಕೇಳಿ ಬರುತ್ತಿರುವಾಗಲೇ ಇದೀಗ ಮಹಿಳಾ ಪೊಲೀಸ್ ಸಿಬ್ಬಂದಿಗೆ ಭದ್ರತೆ ಇಲ್ಲದೇ ಇರೋ ವಿಚಾರ ಇದೀಗ ಬೆಳಕಿಗೆ ಬಂದಿದೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಹೊಯ್ಸಳ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಮಹಿಳೆ ಪೊಲೀಸ್ ಸಿಬ್ಬಂದಿಗೆ ಕುಡಿದ ಮತ್ತಿನಲ್ಲಿದ್ದ ಇಬ್ಬರು ಕಿರಾತಕರು ಕಿರುಕುಳ ನೀಡಿದ್ದಾರೆ.

 ಯಶ್ವಂತಪುರದ ಮತ್ತಿಕೆರೆಯ ವಿನಾಯಕ್ ಸರ್ಕಲ್​ ಬಳಿ ನಿನ್ನೆ ಹೊಯ್ಸಳವೊಂದು ಗಸ್ತು ತಿರುಗುತ್ತಿತ್ತು. ಈ ವೇಳೆ ಹೊಯ್ಸಳದಲ್ಲಿ ಗೀತಾ ಮತ್ತು ಮಹಾಲಕ್ಷ್ಮೀ ಎಂಬ ಇಬ್ಬರು ಮಹಿಳಾ ಪೇದೆಗಳು ಕೆಲಸ ಮಾಡುತ್ತಿದ್ದರು.

 

ಈ ವೇಳೆ ಕುಡಿದ ಮತ್ತಿನಲ್ಲಿ ಬಾರ್​ನಿಂದ ಹೊರಬಂದ ವೈಭವ್ ಮತ್ತು ರೋಹಿತ್ ಎಂಬ ಇಬ್ಬರು ಕಿರಾತಕರು ಪಿಂಕ್ ಹೊಯ್ಸಳದಲ್ಲಿದ್ದ ಸಿಬ್ಬಂದಿಗೆ ಡಾರ್ಲಿಂಗ್ ಎಂದು ಮೈ ಕೈ ಮುಟ್ಟಿ ಗಾಡಿಯಿಂದ ಹೊರಕ್ಕೆ ಎಳೆದು ಹಿಂಸಿಸಿದ್ದಾರೆ.

ಅಲ್ಲದೇ ಹೊಯ್ಸಳದ ಡೋರ್​ ತೆಗೆದು ಇಬ್ಬರು ಮಹಿಳಾ ಪೇದೆಗಳನ್ನು ಹೊರಕ್ಕೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಅಡ್ಡಿ ಪಡಿಸಿದ ಪೊಲೀಸ್ ಪೇದೆ ಮಂಜಣ್ಣ ಎಂಬುವವರಿಗೂ ಈ ಕಿರಾತಕರು ಬೆದರಿಸಿದ್ದು, ಪೊಲೀಸನಾದ್ರೂ ಏನು ಮಾಡೋಕೆ ಆಗೊಲ್ಲ ಎಂದು ಹೆದರಿಸಿದ್ದಾರೆ. ಇದೀಗ ಮಂಜಣ್ಣ ವೈಯ್ಯಾಲಿಕವಾಲ್​ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಕುಡಿದ ಮತ್ತಿನಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಕಿರುಕುಳ ನೀಡಿದ ಇಬ್ಬರನ್ನು ಬಂಧಿಸಿದ್ದಾರೆ. ಒಟ್ಟಿನಲ್ಲಿ ಇನ್ಮುಂದೆ ಜನರಿಗೆ ಭದ್ರತೆ ನೀಡೋ ಮಹಿಳಾ ಪೊಲೀಸರಿಗೂ ಭದ್ರತೆ ಅಗತ್ಯವಾಗಿರೋದು ಮಾತ್ರ ದುರಂತವೇ ಸರಿ .