ಉದ್ಯಮಿ ಮೇಲೆ ಊಬರ್ ಚಾಲಕನಿಂದ ಹಲ್ಲೆ!

ಬ್ಯುಸಿನೆಸ್​ಗಾಗಿ ನಗರಕ್ಕೆ ಆಗಮಿಸಿದ್ದ ಉದ್ಯಮಿಯೊರ್ವನ ಮೇಲೆ ಉಬರ್ ಚಾಲಕರು ಗೂಂಡಾಗಿರಿ ನಡೆಸಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಮುಂಬೈ ಮೂಲದ ಉದ್ಯಮಿ ದೇವ್ ಬ್ಯಾನರ್ಜಿ ಥಳಿತಕ್ಕೊಳಗಾದ ಉದ್ಯಮಿ.


ನಿನ್ನೆ ಮುಂಬೈ ಮೂಲದ ದೇವ್ ಬ್ಯಾನರ್ಜಿ ಸ್ನೇಹಿತನ ಜೊತೆ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಏರಪೋರ್ಟ್​​ನಿಂದ ನಗರಕ್ಕೆ ಬರಲು ದೇವ್ ಬ್ಯಾನರ್ಜಿ ಊಬರ್ ಕ್ಯಾಬ್ ಬುಕ್ ಮಾಡಿದ್ದರು. ಸ್ಥಳಕ್ಕೆ ಬಂದ ಊಬರ್ ಚಾಲಕ ಸೀಟ್ ಬೆಲ್ಟ್​​ ಹಾಕಿರಲಿಲ್ಲ. ಇದನ್ನು ಪ್ರಶ್ನಿಸಿದ ದೇವ್ ಆ ಕ್ಯಾಬ್ ನಲ್ಲಿ ಸಂಚರಿಸಲು ನಿರಾಕರಿಸಿ ಬೇರೆ ಕ್ಯಾಬ್​​ನಲ್ಲಿ ತೆರಳಲು ಯತ್ನಿಸಿದರು.

ಇದಕ್ಕೆ ರೆಬೆಲ್ ಆದ ಚಾಲಕ ಇನ್ನಿತರ ಸ್ನೇಹಿತರ ಜೊತೆ ಸೇರಿ ಬೇರೆ ಕ್ಯಾಬ್​ನಲ್ಲಿ ಹೊರಟಿದ್ದ ದೇವ್ ಬ್ಯಾನರ್ಜಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಇದರಿಂದ ಹೆದರಿದ ಉದ್ಯಮ ದೇವ್, ಮೂರ್ಚೆ ಹೋದಂತೆ ನಟಿಸಿ ಜೀವ ಉಳಿಸಿಕೊಂಡಿದ್ದಾರೆ. ಈ ಬಗ್ಗೆ ದೇವ್ ಬ್ಯಾನರ್ಜಿ ಏರಪೋರ್ಟ್​​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.