ಕೆಎಎಸ್​ ಮುಗಿಸಿ ಅಧಿಕಾರಿಯಾದ ಮೇಲೆ ಗಂಡನಿಗೆ ಕೈಕೊಟ್ಟ ಪತ್ನಿ!!

ಸಾಮಾನ್ಯವಾಗಿ ಕೈಹಿಡಿದ ಪತ್ನಿಗೆ ನಾನಾ ಕಾರಣ ನೀಡಿ ವಂಚಿಸುವ ಪತಿಯರನ್ನು ನೀವು ನೋಡಿರ್ತಿರಾ. ಆದರೆ ಇಲ್ಲೊಬ್ಬಳು ಪತ್ನಿ ಪತಿಯ ಸಹಾಯದಿಂದ ಮದುವೆ ಬಳಿಕ ಅಧ್ಯಯನ ಮಾಡಿ ಕೆಎಎಸ್​​ ಮುಗಿಸಿದ್ದು, ಈಗ ಸರ್ಕಾರಿ ಉದ್ಯೋಗ ಪಡೆದ ಬಳಿಕ ಗಂಡನಿಗೆ ಕೈಕೊಟ್ಟು ಹೋದ ಘಟನೆ ನಡೆದಿದೆ.

ಹಾಸನ ಮೂಲದ ರುದ್ರಕುಮಾರ ಮೋಸ ಹೋದ ಪತಿ. ರುದ್ರಕುಮಾರ್ 2005 ರಲ್ಲಿ ಕವಿತಾ ಎಂಬಾಕೆಯನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಗಂಡನ ಸಹಾಯದಿಂದ ವಿದ್ಯಾಭ್ಯಾಸ ಮುಂದುವರಿಸಿದ ಕವಿತಾ ಕೆಎಎಸ್​ ಪಾಸಾಗಿದ್ದರು. ಈ ಮಧ್ಯೆ ದಂಪತಿಗೆ ಒಂದು ಗಂಡು ಮಗು ಕೂಡ ಜನಿಸಿತ್ತು. ಬಳಿಕ ರಾಜ್ಯ ಸರ್ಕಾರಿ ಉದ್ಯೋಗಕ್ಕೆ ಸೇರಿದ ಕವಿತಾ ಪ್ರಸ್ತುತ ಮಂಡ್ಯದ ಸಧ್ಯ ರಾಜ್ಯಲೆಕ್ಕಪತ್ರ ಇಲಾಖೆಯಲ್ಲಿ ಉಪನಿರ್ದೇಶಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.


ಈ ಮಧ್ಯೆ ರುದ್ರಕುಮಾರ್ ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಇದನ್ನೆ ನೆಪವಾಗಿಟ್ಟುಕೊಂಡ ಕವಿತಾ ಗಂಡನನ್ನು ಬಿಟ್ಟು ಹೋಗಿದ್ದು, ವಿವಾಹ ವಿಚ್ಚೇಧನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮಗುವನ್ನು ಗಂಡನಿಗೆ ತೋರಿಸುವಂತೆ ನ್ಯಾಯಾಲಯದ ಆದೇಶವಿದ್ದರೂ ಕವಿತಾ ಗಂಡನಿಗೆ ಅನ್ಯಾಯ ಎಸಗುತ್ತಿದ್ದಾರೆ. ಇದೀಗ ಹೆಂಡತಿಯೂ ಇಲ್ಲದೇ, ಮಗುವು ಇಲ್ಲದೇ ಕಂಗಾಲಾಗಿರುವ ರುದ್ರಕುಮಾರ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.