ಮೆಟ್ರೋದಲ್ಲೂ ಯುವತಿಗೆ ಕಿರುಕುಳ- ಸಿಸಿಟಿವಿ ಆಧರಿಸಿ ತನಿಖೆ!!!

Bengaluru: Young Mens Indecent behavior on woman at Metro Station.
Bengaluru: Young Mens Indecent behavior on woman at Metro Station.

ಬೆಂಗಳೂರಿನಲ್ಲಿ ಪ್ರತಿನಿತ್ಯ ಒಂದಿಲ್ಲ ಒಂದುಕಡೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದ್ದು, ಇದೀಗ ಬೆಂಗಳೂರಿಗರ ಪಾಲಿಗೆ ಅತ್ಯಂತ ಆಪ್ತವಾಗಿರುವ ಮೆಟ್ರೋ ಟ್ರೇನ್​ನಲ್ಲೂ ಯುವತಿಯೊರ್ವಳ ಜೊತೆ ಪುಂಡರ ಗುಂಪೊಂದು ಅಸಭ್ಯವಾಗಿ ವರ್ತಿಸಿ ದೌರ್ಜನ್ಯ ಎಸಗಿದೆ.

Bengaluru: Young Mens Indecent behavior on woman at Metro Station.
Bengaluru: Young Mens Indecent behavior on woman at Metro Station.
adಕಳೆದ ಮಂಗಳವಾರ ಘಟನೆ ನಡೆದಿದ್ದು, ಎಂಜಿ ರಸ್ತೆಯಿಂದ ವಿಜಯನಗರಕ್ಕೆ ತೆರಳುತ್ತಿದ್ದ ಯುವತಿಯೊಂದಿಗೆ ಅಸಭ್ಯ ವರ್ತನೆ ನಡೆದಿದೆ. 5 ಯುವಕರಿದ್ದ ತಂಡ ಯುವತಿಯನ್ನು ಚುಡಾಯಿಸಿದ್ದು, ಬಳಿಕ ಅಸಭ್ಯವಾಗಿ ವರ್ತಿಸಿದೆ. ವಿಜಯನಗರದಲ್ಲಿ ಮೆಟ್ರೋದಿಂದ ಇಳಿದ ಯುವತಿ ಮೆಟ್ರೋ ಸಿಬ್ಬಂದಿಯ ಗಮನಕ್ಕೆ ಈ ವಿಚಾರ ತಂದಿದ್ದಾರೆ.

Bengaluru: Young Mens Indecent behavior on woman at Metro Station.
Bengaluru: Young Mens Indecent behavior on woman at Metro Station.

ಬಳಿಕ ಆಕೆಯ ಸಮ್ಮುಖದಲ್ಲೇ ಮೆಟ್ರೋ ಸಿಬ್ಬಂದಿ ಪೊಲೀಸರನ್ನು ಕರೆಸಿ ಮಾಹಿತಿ ನೀಡಿದ್ದಾರೆ. ದೂರು ಸ್ವೀಕರಿಸಿರುವ ವಿಜಯನಗರ ಪೊಲೀಸರು ಸಿಸಿಟಿವಿ ಆಧರಿಸಿ ಯುವತಿಗೆ ಕಿರುಕುಳ ನೀಡಿದ ಯುವಕರ ಪತ್ತೆಗೆ ಬಲೆ ಬೀಸಿದ್ದಾರೆ.

Watch Here:  https://youtu.be/BYwysNAKbgM