ಗೋರಕ್ಷಣೆಗಾಗಿ ಬಿಜೆಪಿ ಅಷ್ಟಯಾಮ!

BJP stop the Go-carnage By Yajna.

ಗೋರಕ್ಷಣೆಯನ್ನು ಬಲವಾಗಿ ಪ್ರತಿಪಾದಿಸುತ್ತ ಬಂದಿರುವ ಬಿಜೆಪಿ ಬೆಂಗಳೂರಿನಲ್ಲಿ ಗೋ ಸಂರಕ್ಷಣಾ ಘಟಕದಿಂದ ಅಷ್ಟಯಾಮವನ್ನ ನಡೆಸುತ್ತಿದೆ.

ಕಾನೂನು ಬಾಹಿರ ಕಸಾಯಿಖಾನೆಗಳು ಹಾಗೂ ಗೋಹತ್ಯೆ ವಿರೋಧಿಸಿ ಸತತವಾಗಿ 24 ಗಂಟೆಗಳ ಕಾಲ ಅಷ್ಟಯಾಮ ನೆರವೇರಿಸಲಾಗಿದೆ.  ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ ಶನಿವಾರ ಮಧ್ಯಾಹ್ನ 2 ಗಂಟೆವರೆಗೂ ಹೋಮ ನಡೆಸಲಾಯಿತು. ನಂತರ 24 ಗಂಟೆಗಳ ನಿರಂತರ ಹೋಮದ ಬಳಿಕ ಅಖಂಡ ಯಜ್ಞದ ಪೂರ್ಣಾಹುತಿ ಅರ್ಪಿಸಲಾಯಿತು. ಹೋಮದ ಜೊತೆ ಜೊತೆಗೆ ನಿರಂತರವಾಗಿ ಭಜನೆ ಕೂಡ ನಡೆಯಿತು.  ಕರ್ನಾಟಕ ಸೇರಿದಂತೆ ಉತ್ತರ ಭಾರತದಿಂದ ಆಗಮಿಸಿರುವ ಅರ್ಚಕರು ಅಷ್ಟಯಾಮವನ್ನ ನಡೆಸಿಕೊಡುತ್ತಿದ್ದಾರೆ. ಅಷ್ಟಯಾಮದ ಬಳಿಕ ಶ್ರೀರಾಮ ಕಲ್ಯಾಣೋತ್ಸವ ನಡೆಯಲಿದೆ. ಬೊಮ್ಮನಹಳ್ಳಿ ವಾರ್ಡ್‌ನ ಬಿಜೆಪಿ ಕಾರ್ಪೊರೇಟರ್‌ ಸಿ.ಆರ್. ರಾಮ ಮೋಹನರಾಜು ಹೋಮದ ಉಸ್ತುವಾರಿ ವಹಿಸಿದ್ದು, ಬಹುತೇಕ ಬಿಜೆಪಿ ನಾಯಕರು ಹೋಮದಲ್ಲಿ ಪಾಲ್ಗೊಂಡಿದ್ದಾರೆ.

 

 

ಪ್ರತ್ಯುತ್ತರ ನೀಡಿ

Please enter your comment!
Please enter your name here