ಸ್ಯಾಂಡಲವುಡ್​​ನಲ್ಲೂ ಕಾಸ್ಟಿಂಗ್ ಕೌಚ್​​ ಸದ್ದು- ಬಿಗ್​ಬಾಸ್​ ಜಯಶ್ರೀ ಸಿನಿಮಾದಿಂದ ಕಿಕೌಟ್​​ ಆಗಿದ್ದ್ಯಾಕೆ ಗೊತ್ತಾ?-ತಡರಾತ್ರಿ ಕಾಲ್ ಮಾಡಿದ ಡೈರೈಕ್ಟರ್​​ ಹೇಳಿದ್ದೇನು?!

 

ad

ಸಿನಿಮಾದಲ್ಲಿ ನಟಿ ಆಗ್ಬೇಕು ಅಂತ ಅದೆಷ್ಟೋ ಹೆಣ್ಮಕ್ಕಳ ಕನಸು.. ಆದ್ರೆ ಆ ಕನಸನ್ನ ನನಸು ಮಾಡಿಕೊಳ್ಳೋ ಚಾನ್ಸ್​ ಮಾತ್ರ ಕೆಲವರಿಗೆ ಮಾತ್ರ ಸಿಗುತ್ತೆ. ದೃರಾದೃಷ್ಟ ಅಂದ್ರೆ ಚಾನ್ಸ್​ ಸಿಕ್ಕಿದ್ರು ಅಲ್ಲೂ ಒಂದಷ್ಟು ಅಡ್ಜಸ್ಟಮೆಂಟ್​ಗಳನ್ನ ಎದುರಿಸಬೇಕಾಗುತ್ತೆ. ಆ ಕಷ್ಟ ಬೇಡ ಅನ್ನೋರಿಗೆ ಆ ಸಿನಿಮಾದಿಂದ ಗೇಟ್​ಪಾಸ್​ ಸಿಗುತ್ತೆ. ಇದೀಗ ಕನ್ನಡದ ಈ ನಟಿಗೂ ಅಂತದ್ದೇ ಸ್ಥಿತಿ ಎದುರಾಗಿದೆ.
ಬಿಗ್​​ಬಾಸ್​ ಜಯಶ್ರಿ ನಿಮ್ಗೆ ಗೊತ್ತಿರೋ ಫೇಸ್​.. ಬಿಗ್​​​ಬಾಸ್​ ಸೀಸನ್​-3ರಲ್ಲಿ ಅಧ್ಬುತ ಆಟ ಆಗಿ ಮನೆ ಮಾತಾದ ಹುಡ್ಗಿ.. ಬಿಗ್​ ಬಾಸ್​ನಿಂದ ಬಂದ ಕೀರ್ತಿ, ಹೆಸರಿನ ಮೇಲೆ ಈಕೆ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ರಂಜಿಸ್ತಿದ್ದಾಳೆ. ಆದ್ರೆ ಈ ಸಿಂಪಲ್​ ಬ್ಯೂಟಿಗೆ ಈಗ ದೊಡ್ಡ ವಂಚನೆ ಆಗಿದೆ.. ಅಷ್ಟಕ್ಕು ಜಯಶ್ರಿಗೆ ವಂಚನೆ ಮಾಡಿದ್ದು ಬೇರಾರು ಅಲ್ಲ. ಪ್ರೊಡಕ್ಷನ್​​ ನಂಬರ್​​​​​ ಹೆಸ್ರಲ್ಲಿ ಶುರುವಾದ ಚಿತ್ರವೊಂದಕ್ಕೆ ಜಯಶ್ರೀ ಸೈನ್​ ಹಾಕಿದ್ರು. ಆದ್ರೆ ಅದೇ ಚಿತ್ರತಂಡದಿಂದ ಈಗ ಜಯಶ್ರಿಗೆ ಅನ್ಯಾಯ ಮಾಡಿದೆ..

ಈ ಹಿಂದೆ ಗ್ಯಾಪಲ್ಲೊಂದ್ ಸಿನಿಮಾ ಅಂತ ಮೂವಿ ಮಾಡಿದ್ದ ಡೈರೆಕ್ಟರ್​​ ಮಂಜು ಹೆದ್ದೂರ್​ ಅನ್ನೋ ರ್ದೇಶಕ ಇನ್ನು ಹೆಸರಿಡದ ತಮ್ಮ ಚಿತ್ರಕ್ಕೆ ಹೀರೋಯಿನ್ ಆಗಿ ಜಯಶ್ರೀಯನ್ನ ಆಯ್ಕೆ ಮಾಡಿದ್ರು. ಅಗ್ರಿಮೆಂಟ್ ಮಾಡ್ಕೊಂಡು ಎರಡು ದಿನ ಶೂಟಿಂಗ್​ ಮಾಡಿದ್ಮೇಲೆ ಈಗ ನಮ್ಮ ಚಿತ್ರಕ್ಕೆ ನೀವು ಬೇಡ್ವೇ ಬೇಡ ಅಂತ ಜಯಶ್ರೀನ್ನ ರಿಜೆಕ್ಟ್ ಮಾಡಿದ್ದಾರೆ..
ಅಷ್ಟೆ ಅಲ್ಲ ನಟ ದಿಂಗಂತ್ ಜೊತೆ ಚಾನ್ಸ್ ಕೊಡಿಸೋ ಭರವಸೆಯನ್ನೂ ಜಯಶ್ರಿಕೆಗೆ ಕೊಟ್ಟಿದ್ದ ಮಂಜು ಜಯಶ್ರೀಗೆ ರಾತ್ರಿ ಪಬ್​​ಗೆ ಹೋಗೋಣ ಬಾ.. ಪಾರ್ಟಿ ಮಾಡೋಣ ಬಾ ಅಂತ ಪೀಡಿಸ್ತಿದ್ನಂನೆ. ಅಷ್ಟೆ ಅಲ್ಲ ರಾತ್ರಿ 11 ಗಂಟೆಗೆ ಫೋನ್​ ಮಾಡಿ ನೀನು ಹೇಗೆ ನಟಿಸ್ತೀಯ ನೋಡ್ಬೇಕು, ನಿನ್ನ ಪರ್ಫಾಮೆನ್ಸ್ ವೀಡಿಯೋ ಕಳಿಸು ಅಂತಿದ್ನಂತೆ.. ಇದಕ್ಕೆ ಜಯಶ್ರೀ ಎಸ್​ ಅನ್ನದಿದ್ದಿದ್ದಕ್ಕೆ ಈಗ ಸಿನಿಮಾದಿಂದಲೇ ರಿಜೆಕ್ಟ್ ಮಾಡಿದ್ದಾರೆ.

ಮಂಜು ಹೆದ್ದೂರ್​ ಮಾಡಿರೋ ಈ ಮೋಸಕ್ಕೆ ನಟಿ ಜಯಶ್ರೀ ಕಕ್ಕಾಬಿಕ್ಕಿಯಾಗಿದ್ದಾರೆ. ಮಂಜು ಚಿತ್ರಕ್ಕಾಗಿ ಇದ್ದ ಬೇರೆ ಪ್ರಾಜೆಕ್ಟ್​ಗಳನ್ನ ಕೈ ಚೆಲ್ಲಿ ಕೂತಿದ್ದ ಈ ಪಾಪದ ಹುಡ್ಗಿಗೆ ಮುಂದೇನು ಅನ್ನೋದೆ ಗೊತ್ತಿಲ್ಲ. ಬಣ್ಣದ ಜಗತ್ತಿನಲ್ಲಿ ಕಲೆಗಿಂತ ಕಮೀಟ್​ಮೆಂಟ್​ಗೆ ಬೆಲೆ ಜಾಸ್ತಿ ಅನ್ನೋದು ಜಯಶ್ರೀ ವಿಷಯದಲ್ಲೂ ಪ್ರ್ಯೂ ಆಗಿದೆ. ಎಲ್ಲೋ ಕೆಲವ್ರು ಮಾಡೋ ಕೆಟ್ಟ ಚಾಳಿಗೆ ಇಡೀ ಚಿತ್ರರಂಗಕ್ಕೆ ಅವಮಾನ ಅನ್ನೋ ಹಾಗಾಗಿದೆ. ಇಂತಹ ನಿರ್ದೇಶಕರು ಇದ್ಬಿಟ್ರೆ ನಮ್​ ಸಿನ್ಮಾ ಇಂಟ್ರಸ್ಟ್ರಿ ಉದ್ದಾರೋಗೋದು ಇನ್ನೆಲ್ಲಿ ಅಲ್ವಾ..?