ಕನ್ನಡ ರ್ಯಾಪರ್ ಚಂದನ್ ಶೆಟ್ಟಿಗೆ ಸಿಸಿಬಿ ನೊಟೀಸ್​- ಇಷ್ಟಕ್ಕೂ ಚಂದನ್ ಶೆಟ್ಟಿ ಮಾಡಿದ ತಪ್ಪೇನು ಗೊತ್ತಾ?!

ಒಂದಷ್ಟು ಕನ್ನಡ ರ್ಯಾಪ್​ ಹಾಡುಗಳ ಮೂಲಕ ಪ್ರಸಿದ್ಧಿ ಪಡೆದುಕೊಂಡು ಮನೆಮಾತಾಗಿದ್ದ ಕನ್ನಡದ ರ್ಯಾಪರ್​ ಚಂದನ್ ಶೆಟ್ಟಿ ಸಂಕಷ್ಟಕ್ಕೊಳಗಾಗಿದ್ದಾರೆ. ಹೌದು ಅಂತ್ಯ ಎಂಬ ಶೀರ್ಷಿಕೆಯಡಿ ಇತ್ತೀಚಿಗೆ ರ್ಯಾಪರ್​ ಚಂದನ್ ಶೆಟ್ಟಿ ಸಾಂಗ್ ವೊಂದನ್ನು ರಿಲೀಸ್ ಮಾಡಿದ್ದರು. ಆದರೇ ಸಾಂಗ್ ಹಿಟ್​ ಆಗುವ ಬದಲು ನಗರ ಪೊಲೀಸ್ ಇಲಾಖೆಯ ಕಣ್ಣಿಗೆ ಬಿದ್ದು ಅವರ ಅಸಮಧಾನಕ್ಕೆ ಕಾರಣವಾಗಿದ್ದು, ಚಂದನ್ ಶೆಟ್ಟಿಗೆ ನೊಟೀಸ್ ರವಾನೆಯಾಗಿದೆ.


ಅಂತ್ಯ ಅನ್ನೋಸಾಂಗ್​ನಲ್ಲಿ ಚಂದನ ಬೇಕಾಬಿಟ್ಟಿಯಾಗಿ ಗಾಂಜಾ ಸೇದುವ, ಧಮ್ ಹೊಡೆಯುವ ದೃಶ್ಯಗಳನ್ನು ಬಳಸಿಕೊಂಡಿದ್ದರು. ಗಾಂಜಾ ಸೇದುವಂತ ದೃಶ್ಯಗಳು ಹಸಿ-ಹಸಿಯಾಗಿ ಸಾಂಗ್​ನುದ್ದಕ್ಕೋ ಚಿತ್ರೀಸಲಾಗಿತ್ತು. ಇದು ಯುವಜನತೆಯನ್ನು ಪ್ರೇರೇಪಿಸುವಂತಿದೆ ಎಂಬ ಕಾರಣಕ್ಕೆ ಸಿಟಿ ಕ್ರೈಂ ಬ್ರ್ಯಾಂಚ್​​ ಚಂದನ್ ಶೆಟ್ಟಿಗೆ ನೊಟೀಸ್ ಜಾರಿ ಮಾಡಿದೆ. ಅಲ್ಲದೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

 

 

ಈ ಬಗ್ಗೆ ವಿವರಣೆ ನೀಡಿರುವ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಸಿಂಗರ್ ಚಂದನ್ ಶೆಟ್ಟಿ ರಿಲೀಸ್ ಮಾಡಿರುವ ಅಂತ್ಯ ಸಾಂಗ್​ನಲ್ಲಿ ಗಾಂಜಾಸೇದುವ ಮಾರುವ ದೃಶ್ಯಗಳನ್ನು ಅತಿಯಾಗಿ ಬಳಕೆ ಮಾಡಲಾಗಿದೆ. ಇದು ಕೂಡ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಚಂದನಗೆ ನೊಟೀಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದೇವೆ ಎಂದರು.