ಮೈಸೂರಿನಲ್ಲಿ ಡ್ರ್ಯಾಗನ್ಸ್​ ವಿತ್ ಐಸ್​ಕ್ರಿಂ ಹಾವಳಿ- ಈ ಅನಾರೋಗ್ಯಕರ ಐಸ್​ಕ್ರಿಂ ನಿಷೇಧಕ್ಕೆ ಒತ್ತಾಯ!

 

ಇತ್ತಿಚಿಗ್ಯಾಕೋ ಸಾಂಸ್ಕೃತಿಕ ನಗರಿ ಮೈಸೂರು ಸಾಂಸ್ಕೃತಿಕ ಚಟುವಟಿಕೆಗಳಿಗಿಂತ ಜಾಸ್ತಿ, ಕಾನೂನು ಬಾಹಿತ ಚಟುವಟಿಕೆಗಳಿಂದಲೇ ಸದ್ದು ಮಾಡ್ತಿದೆ. ಕಿಕಿ ಡ್ಯಾನ್ಸ್​ ಚಾಲೆಂಜ್​ನಿಂದ ಸುದ್ದಿಯಾಗಿದ್ದ ಮೈಸೂರು ಈಗ ಡ್ರ್ಯಾಗನ್ಸ್​ ವಿತ್ ಐಸ್​ಕ್ರಿಂ ಟ್ರೆಂಡ್​ನಿಂದ ಸುದ್ದಿಯಾಗಿದೆ.
ನೈಟ್ರೊಜನ್ ‌ಐಸ್ ಕ್ರೀಮ್ ಬಿಜಿನೆಸ್ ಮೈಸೂರಿನಲ್ಲಿ ಬಲು ಜೋರಾಗಿ ನಡೀತಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಡ್ರ್ಯಾಗನ್ಸ್ ಬ್ರೀತ್ ಲಿಕ್ವಿಡ್ ನೆಟ್ರೋ ಐಸ್ ಕ್ರೀಮ್ ಯುವಜನೆತಯನ್ನು ಹೆಚ್ಚಾಗಿ ಸೆಳೆಯುತ್ತಿದೆ

.

ಇನ್ನು ಈ ಅನಾರೋಗ್ಯಕರ ಐಸ್​ಕ್ರಿಂ ನಿಷೇಧಿಸಬೇಕೆಂದು ಆಗ್ರಹಿಸಿರುವ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ತಲೆ ಎತ್ತಿರುವ ಮೈನಸ್ 21 ಡಿಗ್ರಿ ಕೆಫೆ ಮೇಲೆ ದಾಳಿ‌ ನಡೆಸಿ ರಿಯಾಲಿಟಿ ಚೆಕ್ ಮಾಡಿದ್ರು.
ಸಾರಜನಕದ ಅಂಶವಿರುವ ಈ ಐಸ್ ಕ್ರೀಮ್ ಸೇವಿಸಿದ ಬಳಿಕ ಬಾಯಿಯಿಂದ ಹೊಗೆ ಬರುತ್ತೆ. ಡ್ರ್ಯಾಗನ್ಸ್ ಬ್ರೀತ್ ಲಿಕ್ವಿಡ್ ನೆಟ್ರೋ ಐಸ್ ಕ್ರೀಮ್​ನಲ್ಲಿರುವ ಸಾರಜನಕವನ್ನು ಸೇವಿಸಿದರೆ ಆರೋಗ್ಯಕ್ಕೆ ಹಾನಿಯಾಗಲಿದೆ. ಹೀಗಾಗಿ ಡ್ರ್ಯಾಗನ್ಸ್ ಬ್ರೀತ್ ಲಿಕ್ವಿಡ್ ನೆಟ್ರೋ ಐಸ್ ಕ್ರೀಮ್ ಬ್ಯಾನ್ ಮಾಡಬೇಕು ಅಂತ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದ್ರು.