ಬೆಂಗಳೂರು ನೀರು ಕುಡಿದ್ರೆ ಫ್ಲೋರೋಸಿಸ್ ಕಾಯಿಲೆ !! ಫ್ಲೋರೈಡ್ ಇದೆ ಜೀವಜಲದಲಿ !!

Fluoride Mix Water Used In Bengaluru.
Fluoride Mix Water Used In Bengaluru.

ಬೆಂಗಳೂರಿನಲ್ಲಿ ನಾವು ಕುಡಿಯುತ್ತಿರುವ ನೀರು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗ್ತಿದೆ. ಯಾಕೆಂದ್ರೆ ನಾವು ಬಳಸ್ತಿರೋ ನೀರಿನಲ್ಲಿ ಫ್ಲೋರೈಡ್​ ಅಂಶ ಕಂಡು ಬಂದಿದೆ ಅನ್ನೋ ಭಯಾನಕ ಸುದ್ದಿ ಹೊರಬಂದಿದೆ.

 

ಇತ್ತೀಚೆಗೆ ನಗರದಲ್ಲಿ ಫ್ಲೋರೋಸಿಸ್​ ಖಾಯಿಲೆ ಹೆಚ್ಚಾಗ್ತಿದ್ದ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಸರ್ವೇ ನಡೆಸಲಾಗಿತ್ತು. ಹಾಗೆ ಬಳಸುವ ನೀರನ್ನ ಟೆಸ್ಟಿಂಗ್​ಗೆ ಒಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಸುಮಾರು 1ಪಿಪಿಎಂ ಫ್ಲೋರೈಡ್​ ಅಂಶ ಪತ್ತೆಯಾಗಿದ್ದು ಬೆಳಕಿಗೆ ಬಂದಿದೆ.ಈ ನೀರನ್ನ ಸೇವಿಸ್ತಿರೋದ್ರಿಂದ ಫ್ಲೋರೋಸಿಸ್​ ಅಂದ್ರೆ ಹಲ್ಲುಗಳು ಹಳದಿಗಟ್ಟುವುದು, ಹುಟ್ಟುವ ಮಕ್ಕಳಿಗೆ ಹಾಗೂ ವಯಸ್ಕರಲ್ಲಿ ಅಂಗ ವೈಕಲ್ಯ ಕಂಡು ಬರುತ್ತೆ.

 

 

ಇದ್ರಿಂದ ಈಗಾಗಲೇ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಎಲ್ಲೆಡೆ ಫ್ಲೋರೋಸಿಸ್​ ಹಾಗೂ ಫ್ಲೋರೈಡ್​ ಕುರಿತು ಜಾಗೃತಿ ಕಾರ್ಯಕ್ರಮಗಳನ್ನ ಕೈಗೊಂಡಿದ್ದಾರೆ. ಹಾಗೂ ಮನೆಮನೆಗೆ ತೆರಳಿ ಲಸಿಕೆಯನ್ನ ಹಾಕಲು ಯೋಜನೆ ರೂಪಿಸಿಕೊಳ್ಳಲಾಗಿದೆ.