ಪೊಲೀಸರಿಗಿಲ್ಲಿದೆ ಫಿಟನೆಸ್​ ಕ್ಲಾಸ್​- ಕಲ್ಬುರ್ಗಿಯ ಎಸ್​ಪಿಯ ವಿನೂತನ ಪ್ರಯತ್ನ!

 

ad

ಸಮಾಜದಲ್ಲಿ ಪೊಲೀಸರು ಆರೋಗ್ಯವಂತರಾಗಿದ್ದರೆ ಸಾರ್ವಜನಿಕರು ಕೂಡ ನೆಮ್ಮದಿಯಿಂದ ಇರುತ್ತಾರೆ. ದಿನದ ಇಪ್ಪತ್ನಾಲ್ಕು ಗಂಟೆ ಕೂಡ ಪೊಲೀಸರು ನಮ್ಮ ರಕ್ಷಣೆಗಾಗಿಯೇ ದುಡಿಯುತ್ತಿರುತ್ತಾರೆ. ಇಂಥಹ ಜಂಜಾಟದ ಬದುಕಿನಲ್ಲಿ ಅದೆಷ್ಟೊ ಪೊಲೀಸರು ತಮ್ಮ ಆರೋಗ್ಯದತ್ತ ಗಮನವೇ ಹರಿಸುವುದಿಲ್ಲ.. ಹೀಗಾಗಿ ಪೊಲೀಸರ ಆರೋಗ್ಯದತ್ತ ಇದೀಗ ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಹೆಲ್ದಿ ಪೊಲೀಸ್’ ಹೆಲ್ದಿ ಸೊಸೈಟಿ ಅನ್ನೊ ಹೆಸರಿನಲ್ಲಿ ಪೊಲೀಸರು ಬೊಜ್ಜು ಕರಗಿಸಲು ನೆರವಾಗುವ ವಾಕ್‌ಥಾನ್ ಹಾಗೂ ಯೋಗ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ. ಪೊಲೀಸರಿಗಾಗಿ ಉತ್ತಮ ಆರೋಗ್ಯಕ್ಕಾಗಿ ನಡಿಗೆಯೆಂಬ ಕಾರ್ಯಕ್ರಮ ಆರಂಭಿಸಲಾಗಿದೆ. ಪ್ರತಿ ವಾರ ಎಸ್ಪಿ‌ ಎನ್ ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸರು 20 ರಿಂದ 25 ಕೀಮಿ ದೂರ ವಾಕ್ ಮಾಡುತ್ತಿದ್ದಾರೆ.

 

ಈ ವಾಕ್‌ಥಾನ್​ ನಲ್ಲಿ ಜಿಲ್ಲೆಯ 90 ಕ್ಕೂ‌ ಅಧಿಕ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಕೂಡ ತಮ್ಮ ಬೊಜ್ಜನ್ನ ಕರಗಿಸಲು ನಡಿಗೆ ಆರಂಭಿಸಿದಾರೆ. ಕಳೆದ‌ ತಿಂಗಳು ಪೊಲೀಸ್ ಇಲಾಖೆ ಈ‌ ಕಾರ್ಯಕ್ರಮವನ್ನ ಹಮ್ಮಿಕೊಳ್ಳುತ್ತಿದ್ದು, ಬೊಜ್ಜು ಹೊಂದಿರುವ ಪೊಲೀಸರು ಕಡ್ಡಾಯವಾಗಿ ತಮ್ಮ ದೇಹ ಕರಗಿಸಲು‌ ಈ ವಾಕ್‌ಥಾನ್​ನಲ್ಲಿ ಭಾಗವಹಿಸಲೇಬೇಕು.
ಪುರುಷ ಪೊಲೀಸರ‌ ಜೊತೆಗೆ ಮಹಿಳಾ ಪೊಲೀಸರು‌ ಸಹ ಪ್ರತಿ ಶನಿವಾರ ಅಥಾವ ರವಿವಾರದಂದು ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಕಿ.ಮಿ ನಡಿಗೆ ಮಾಡಿದ ನಂತರ ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಯೋಗ ಅಭ್ಯಾಸ ಕೂಡ ಆಯೋಜಿಸಲಾಗುತ್ತಿದೆ. ಬೆಳಗ್ಗೆ ಏಳು ಗಂಟೆಗೆ ಜಿಲ್ಲಾ ಪೊಲೀಸ್ ಮೈದಾನದಿಂದ ನಡಿಗೆ ಶುರು ಮಾಡಿ ಮಧ್ಯಾನ‌ ಎರಡು ಗಂಟೆವರೆಗೆ ಮುಗಿಸುತ್ತಾರೆ.ಒಟ್ಟಿನಲ್ಲಿ ಪೊಲೀಸರಿಗೂ ಆರೋಗ್ಯದ ಕಾಳಜಿ ಮೂಡಿಸಲಾಗುತ್ತಿರುವ ಈ ಪ್ರಯತ್ನ ಶ್ಲಾಘನೀಯ.