ಕಾಂಗ್ರೆಸ್​ನಲ್ಲಿ ಅತೃಪ್ತಿ ಶಮನ! ಬಿಜೆಪಿಯಲ್ಲಿ ಹೆಚ್ಚಿದ ತಲ್ಲಣ! ಎಂಟಿಬಿ ಯೂ ಟರ್ನ್​ ಹಿನ್ನೆಲೆಯಲ್ಲಿ ರೆಸಾರ್ಟ್​ನತ್ತ ಬಿಎಸ್​ವೈ ದೌಡು!!

ರಿವರ್ಸ್​ ಆಪರೇಷನ್​​ ಭೀತಿಯಿಂದ ಬಿಜೆಪಿ ಶಾಸಕರು ಬೆಂಗಳೂರು ಹೊರವಲಯದ ರೆಸಾರ್ಟ್​ ಸೇರಿಕೊಂಡಿದ್ದಾರೆ. ಈ ಮಧ್ಯೆ ಬೆಂಗಳೂರಿನಲ್ಲಿ ಡಿಕೆಶಿ ನಡೆಸಿದ ಆಫರೇಶನ್​ ಎಂಟಿಬಿ ಸಕ್ಸಸ್ ಆಗುತ್ತಿದ್ದಂತೆ ಬಿಜೆಪಿ ನಾಯಕರ ಎದೆಯಲ್ಲಿ ನಡುಕ ಆರಂಭವಾಗಿದ್ದು, ಬಿಎಸ್​ವೈ ತರಾತುರಿಯಲ್ಲಿ ಬಿಜೆಪಿ ಶಾಸಕರಿದ್ದ ರೆಸಾರ್ಟ್​ನತ್ತ ಮುಖಮಾಡಿದ್ದಾರೆ.

ad


ನಿನ್ನೆ ಅಧಿವೇಶನ ಸೋಮವಾರಕ್ಕೆ ಮುಂದೂಡಿಕೆಯಾಗುತ್ತಿದ್ದಂತೆ ರಿವರ್ಸ್ ಆಫರೇಶನ್ ಭೀತಿಯಿಂದ ಬಿಜೆಪಿ ನಾಯಕರು ಯಲಹಂಕ ಬಳಿಯ ರಮಡ ರೆಸಾರ್ಟ್​ಗೆ ಶಿಫ್ಟ್​ ಆಗಿದ್ದರು. ಬೆಳಗ್ಗೆ ರಿಲ್ಯಾಕ್ಸ್​ ಮೂಡ್​ನಲ್ಲಿದ್ದ ಬಿಜೆಪಿ ನಾಯಕರು, ಜಿಮ್​ನಲ್ಲಿ ಕರಸತ್ತು ನಡೆಸಿ, ಪತ್ರಿಕೆಗಳ ಮೇಲೆ ಕಣ್ಣಾಡಿಸಿ ರೆಸಾರ್ಟ್​ನಲ್ಲೇ ವಾಕಿಂಗ್ ಮಾಡಿ ಎಂಜಾಯ್ ಮಾಡ್ತಿದ್ದರು.

ಆದರೆ ಮಧ್ಯರಾತ್ರಿ ಆಫರೇಶನ್ ನಡೆಸಿದ ಡಿಕೆಶಿವಕುಮಾರ್ ಅತೃಪ್ತ ಸಚಿವ ಎಂಟಿಬಿ ನಿವಾಸಕ್ಕೆ ತೆರಳಿ ಅವರನ್ನು ಮನವೊಲಿಸಿದ್ದು, ಎಂಟಿಬಿ ಸುಧಾಕರ್ ಸೇರಿದಂತೆ ಇತರ ಅತೃಪ್ತರ ಮನವೊಲಿಸುವ ಭರವಸೆ ನೀಡಿದ್ದರು. ಇದರಿಂದ ಬಿಜೆಪಿ ನಾಯಕರ ಎದೆಬಡಿತ ಏರುಪೇರಾಗಿದ್ದು, ತಕ್ಷಣ ಬಿಎಸ್ವೈ ರೆಸಾರ್ಟ್​ಗೆ ತೆರಳಿ ಶಾಸಕರೊಂದಿಗೆ ಮಾತುಕತೆ ನಡೆಸಿ ಮುಂದಿನ ಪ್ಲ್ಯಾನ್​ಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.


ಸೋಮವಾರದ ವೇಳೆ ಅತೃಪ್ತರ ಸಂಖ್ಯೆ ಹೆಚ್ಚಿಸುವ ಕನಸಿನಲ್ಲಿದ್ದ ಬಿಜೆಪಿಗೆ ಕಾಂಗ್ರೆಸ್​​ನ ಸಂಧಾನ ಯಶಸ್ವಿಯಾಗಿರೋದು ನುಂಗಲಾರದ ತುತ್ತಾಗಿದ್ದು, ಸರ್ಕಾರ ದಿನದಿಂದ ದಿನಕ್ಕೆ ಸುಭದ್ರವಾಗ್ತಿರೋದನ್ನು ನೋಡಿ ಬಿಜೆಪಿ ಕಂಗಾಲಾಗಿದೆ.