ರಾಜ್ಯಕ್ಕೆ “ಇಂದಿರಾ ಕ್ಲಿನಿಕ್” ಭಾಗ್ಯ

Indira Clinic Bhagya from Karnataka State Govt
Indira Clinic Bhagya from Karnataka State Govt

ರೋಗಿಗಳಿಗೆ ಇಂದಿರಾ ಕ್ಲಿನಿಕ್ ಭಾಗ್ಯ

ಎಲೆಕ್ಷನ್ ಗೆ ಇನ್ನೇನು ದಿನಗಣನೆ ಆರಂಭವಾಗಿರುವ ಬೆನ್ನಲ್ಲೆ ಕರ್ನಾಟಕದಲ್ಲಿ ಅಧಿಕಾರಿದಲ್ಲಿರುವ ಕಾಂಗ್ರೆಸ್ ಸರ್ಕಾರ ಜನರನ್ನು ಸೆಳೆಯಲು ಅಗತ್ಯವಾಗಿರುವ ಯೋಜನೆಗಳನ್ನು ರೂಪಿಸುತ್ತಲೇ ಇದೆ. ಈಗಾಗಲೇ ಇಂದಿರಾ ಕ್ಯಾಂಟೀನ್ ಆರಂಭಿಸಿ ಬಿಬಿಸಿಯಿಂದಲೂ ಮೆಚ್ಚುಗೆ ಗಳಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಇದೀಗ ಇದೇ ಮಾದರಿಯಲ್ಲಿ ನಗರದಲ್ಲಿ ಇಂದಿರಾ ಕ್ಲಿನಿಕ್ ತರಲೂ ರಾಜ್ಯ ಸರ್ಕಾರ ನಿರ್ಧರಿಸಿದೆ.

Indira Clinic Bhagya from Karnataka State Govt

ಬಿಎಂಟಿಸಿ ಸಿಬ್ಬಂದಿ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಈ ಯೋಜನೆ ಜಾರಿಗೆ ಬರಲಿದ್ದು ಡಿಸೆಂಬರ್ 2ರಂದು ಮೆಜೆಸ್ಟಿಕ್,ಯಶವಂತಪುರ ಟಿಟಿಎಂಸಿಯಲ್ಲಿ ಪ್ರಾಯೋಗಿಕವಾಗಿ ಈ ಕ್ಲಿನಿಕ್‌ ಓಪನ್ ಆಗಲಿದೆ. ಈ ಕ್ಲಿನಿಕ್​ನಲ್ಲಿ ಪ್ರಯಾಣಿಕರು, ಬಿಎಂಟಿಸಿ ಸಿಬ್ಬಂದಿಗೆ ಉಚಿತ ತುರ್ತು ಚಿಕಿತ್ಸೆ ಸಿಗಲಿದೆ. ನಂತ್ರ ಪ್ರಮುಖ ಬಸ್ ನಿಲ್ದಾಣ, ಟಿಟಿಎಂಸಿಗಳಲ್ಲಿ ಹಂತ ಹಂತವಾಗಿ ಕ್ಲಿನಿಕ್ ತೆರೆಯಲು ಸರ್ಕಾರ ನಿರ್ಧರಿಸಿದೆ.

Indira Clinic Bhagya from Karnataka State Govt
ಇದರಿಂದ ಬಿಎಂಟಿಸಿ ಸಿಬ್ಬಂದಿಗೆ ಅನುಕೂಲವಾಗಿದ್ದು, ಪ್ರಯಾಣದ ವೇಳೆಯಲ್ಲಿ ಧೀಡಿರ ಅಸ್ವಸ್ಥರಾಗುವ ಪ್ರಯಾಣಿಕರಿಗೂ ನೆರವಾಗಲಿದೆ. ಇಂದಿರಾ ಕ್ಯಾಂಟಿನ್ ಮಾದರಿಯಲ್ಲಿ ಇಲ್ಲಿಯೂ ಅತ್ಯಂತ‌ ಕಡಿಮೆ ದರಕ್ಕೆ ಚಿಕಿತ್ಸೆ ದೊರೆಯಲಿದೆ. ಇದಲ್ಲದೇ ರಾಜ್ಯ ಸರ್ಕಾರ ಸಧ್ಯದಲ್ಲೇ ಇಂದಿರಾ ಸಾರಿಗೆ ವ್ಯವಸ್ಥೆ ಕೂಡಾ ಆರಂಭಿಸಲು ಚಿಂತನೆ ನಡೆಸಿದೆ.

Indira Clinic Bhagya from Karnataka State Govt

Indira Clinic Bhagya from Karnataka State Govt

Watch Here: https://youtu.be/kOU7fXkMM2I