ಕಲ್ಯಾಣ ಮಂಟಪ ಕಾಲುವೆ ನುಂಗಿತ್ತಾ !! ರಾಜಕಾಲುವೆಯಲ್ಲೇ ಮದುವೆ ನಡೆದಿತ್ತಾ !!

Kalyana Mantapa Enclosure the Canal At Bengaluru.

ಮರದ ಮೇಲೆ, ಸಮುದ್ರದ ಆಳದಲ್ಲಿ ವಿಶಿಷ್ಠವಾಗಿ ಮದುವೆಯಾಗುವುದು, ಕಾರ್ಯಕ್ರಮಗಳನ್ನು ನಡೆಸುವ ಅಪರೂಪದ ಪ್ರಸಂಗಗಳನ್ನು ನೋಡಿರುತ್ತೀರಿ. ಆದರೆ ಬೆಂಗಳೂರಿನಲ್ಲಿ ನಿಮಗರಿವಿಲ್ಲದಂತೆ ನಿಮ್ಮ ಕುಟುಂಬದ ಸದಸ್ಯರ ಮದುವೆ, ಕಾರ್ಯಕ್ರಮಗಳು ರಾಜಕಾಲುವೆಯಲ್ಲಿ ನಡೆದುಹೋಗುತ್ತದೆ.

ಹಾಗಂತ ಈ ಕಲ್ಯಾಣ ಮಂಟಪಗಳು ನಿಮ್ಮ ಕಾರ್ಯಕ್ರಮಗಳನ್ನು ರಾಜಕಾಲುವೆಯಲ್ಲಿ ನಡೆಸುತ್ತಿರುವುದು ವಿಶಿಷ್ಟತೆಯ ಭಾಗವಾಗಿ ಅಲ್ಲ. ಬದಲಾಗಿ ದಂಧೆಯಾಗಿ !!ಹೌದು. ಬಡವರು ಸರ್ಕಾರಿ ಜಮೀನು ಕೊಂಚ ಒತ್ತುವರಿ ಮಾಡಿದ್ರು ಮುಲಾಜಿಲ್ಲದೇ ಹೊಡೆದು ಹಾಕೋ ಅಧಿಕಾರಿಗಳು ಶ್ರೀಮಂತರು ಒತ್ತುವರಿಗೆ ಸಾಥ್ ನೀಡ್ತಾ ಇದ್ದಾರೆ. ರಾಜಾಜಿನಗರದ ಕೈಗಾರಿಕಾ ಪ್ರದೇಶದಲ್ಲಿ ಲಕ್ಷಗಟ್ಟಲೇ ಬಾಡಿಗೆ ಪಡೆದು ಕೋಟಿಗಟ್ಟಲೇ ಲಾಭ ಮಾಡೋ ಕಲ್ಯಾಣ ಮಂಟಪಗಳು ಮಾತ್ರ ರಾಜಕಾಲುವೆಯನ್ನೇ ಒತ್ತುವರಿ ಮಾಡಿಕೊಂಡು ವಾಣಿಜ್ಯ ಚಟುವಟಿಕೆ ನಡೆಸ್ತಾ ಇವೆ.

 

 

 

ಓಸ್ವಾಲ್ ಕಮ್ಯೂನಿಟಿ ಕಲ್ಯಾಣ ಮಂಟಪ, ಜಲ್ ರಾಮ್ ಕಲ್ಯಾಣ ಮಂಟಪ, ಶುಭರಾಮ್ ಕಲ್ಯಾಣ ಮಂಟಪಗಳು ರಾಜಕಾಲುವೆ ಮೇಲೆ ಅಕ್ರಮವಾಗಿ ಸ್ಲಾಬ್ ಹಾಕಿ ರಾಜಾರೋಷವಾಗಿ ಅಲ್ಲಿಯೇ ಅಡುಗೆ ತಯಾರು ಮಾಡಲಾಗ್ತಾ ಇದೆ.ರಾಜಕಾಲುವೆ ಮೇಲೆ ಸ್ಲ್ಯಾಬ್ ಹಾಕಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಅವಕಾಶ ನೀಡಿವೆ. ರಾಜಕಾಲುವೆ ಒತ್ತುವರಿ ಮಾಡಿದ್ರೆ ಸುಪ್ರೀಂ ಕೋರ್ಟ್ ಆದೇಶದಂತೆ ಜೈಲು ಶಿಕ್ಷೆ ಹಾಗು ಭಾರೀ ದಂಡ ವಿಧಿಸುವ ಅಧಿಕಾರ ಬಿಬಿಎಮ್ ಪಿ ಅಧಿಕಾರಿಗಳಿಗೆ ಇದ್ರೂ ಯಾವುದೇ ಪ್ರಯೋಜವಾಗ್ತಾ ಇಲ್ಲ. ಬಿಬಿಎಮ್ ಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಬಸವರಾಜ್ ಅವರಿಗೆ ಆರ್ ಟಿಐ ಕಾರ್ಯಕರ್ತ ವೇಣುಗೋಪಾಲ್ ಹಲವು ಬಾರಿ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಕಲ್ಯಾಣ ಮಂಟಪಗಳಿಂದ ಮಾಮೂಲಿ ಪಡೆಯುತ್ತಿರುವ ಸ್ಥಳೀಯ ಜನಪ್ರತಿನಿಧಿಗಳು ರಾಜಕಾಲುವೆ ಮುಚ್ಚಲು ಸಹಕಾರ ನೀಡಿದ್ದಾರೆ ಅಂತಾ ಖುದ್ದು ಕಲ್ಯಾಣಮಂಟಪಗಳ ಆಡಳಿತ ಮಂಡಳಿಗಳೇ ಮಾಹಿತಿ ನೀಡಿದೆ.