ಏರ್ ಶೋಗೆ ಹರಿದು ಬಂದ ಜನಸಾಗರ : ದುಗುಡದ ಮದ್ಯೆಯೇ ಉತ್ಸಾಹ

ಬೆಂಗಳೂರಿನಲ್ಲಿ ನೆಡೆಯುತ್ತಿರುವ ಏರ್​ ಶೋ 2019 ಗೆ ಇಂದು ಕೊನೆಯ ದಿನ. ಶನಿವಾರ ನಡೆದ ಭೀಕರ ಅಗ್ನಿ ಅವಘಡದ ಮಧ್ಯೆಯೇ ಯಲಹಂಕದ ವಾಯುನೆಲೆಗೆ ಜನಸಾಗರವೇ ಹರಿದು ಬಂದಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.ಇಂದು ಸೂರ್ಯಕಿರಣ್, ಲಘು ಯುದ್ಧ ಹೆಲಿಕಾಪ್ಟರ್​ಗಳು ಸೇರಿದಂತೆ ಹಲವು ವಿಮಾನಗಳ ಪ್ರದರ್ಶನ ನಡೆಯಲಿದೆ. ನೇತ್ರ, ರುದ್ರ, ತೇಜಸ್, ಧನುಶ್, HTT 40, ಸುಖೋಹಿ, ಭೀಮ್, F16,  ಸೇರಿ ಸಾರಂಗ್ ಆಗಸದಲ್ಲಿ ಹಾರಾಟ ನಡೆಸಲಿವೆ. ಇದೀಗ ಸೂರ್ಯಕಿರಣ್ ಪ್ರದರ್ಶನ ಆರಂಭವಾಗಿದೆ.

ad

ಅಗ್ನಿ ಅವಘಡದಲ್ಲಿ 300ಕ್ಕೂ ಹೆಚ್ಚು ಕಾರು ಸುಟ್ಟ ಬೆನ್ನಲ್ಲೇ ಪೊಲೀಸರು ಘಟನಾ ಸ್ಥಳದಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಿದ್ದಾರೆ. ಅಗ್ನಿ ಅವಘಡ ನಡೆದ ಸ್ಥಳದಲ್ಲಿ ತುರ್ತು ಸೇವೆಗಳ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಅಲ್ದೇ 2 ಅಗ್ನಿಶಾಮಕ ದಳ ವಾಹನ ಸೇರಿದಂತೆ ಭದ್ರತೆಗೆ ಹೆಚ್ಚಿನ ಪೊಲೀಸರು ನಿಯೋಜಿಸಲಾಗಿದೆ. ದುರಂತ ನಡೆದ ಜಾಗದ ಪಕ್ಕದಲ್ಲೇ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಪಾರ್ಕಿಂಗ್ ಲಾಟ್​ನಲ್ಲಿ ಅಗ್ನಿ ಅವಘಡಕ್ಕೆ ಕಾರಣವೇನು ಅನ್ನೋದ್ರ ಬಗ್ಗೆ ಪಾರ್ಕಿಂಗ್ ಜಾಗದ ಸುತ್ತಮುತ್ತ ಇರುವ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿ ಪೊಲೀಸರು ತನಿಖೆ ಮಾಡ್ತಿದ್ದಾರೆ.