ಮೆಟ್ರೋ ಪ್ರಯಾಣಿಕರೇ ಹುಶಾರ್ – ೫೦ ರ ಬದಲು ಬೀಳುತ್ತೆ ೫೦೦ ರೂ ದಂಡ!!

Loss Token: Metro decision to increase the fine of Rs 50 to Rs 500 at Bengaluru.
Loss Token: Metro decision to increase the fine of Rs 50 to Rs 500 at Bengaluru.

ಟ್ರಾಫಿಕ್​​ನಿಂದ ಕಂಗಾಲಾಗಿದ್ದ ಸಿಲಿಕಾನ ಸಿಟಿ ಜನರ ಪಾಲಿಗೆ ನಮ್ಮ ಮೆಟ್ರೋ ಆಪ್ತಮಿತ್ರನಂತಾಗಿತ್ತು. ಆದರೇ ಇದೇ ಮೆಟ್ರೋ ಇದೀಗ ಬೆಂಗಳೂರಿಗರ ಪಾಲಿಗೆ ದುಬಾರಿಯಾಗಿ ಪರಿಣಮಿಸಿದ್ದು, ಇನ್ಮುಂದೆ ನೀವು ಮೆಟ್ರೋದಲ್ಲಿ ಪ್ರಯಾಣಿಸುವಾಗ ಟೋಕನ್​ ಕಳೆದುಕೊಂಡರೇ 50 ರೂಪಾಯಿ ಬದಲು 500 ರೂಪಾಯಿ ಪಾವತಿಸಬೇಕು.

Loss Token: Metro decision to increase the fine of Rs 50 to Rs 500 at Bengaluru.
Loss Token: Metro decision to increase the fine of Rs 50 to Rs 500 at Bengaluru.

ಹೌದು ಮೆಟ್ರೋ ಆರಂಭವಾಗಿ ಎರಡು ವರ್ಷಗಳೇ ಕಳೆದಿವೆ. ಅಂದಿನಿಂದಲೂ ಪ್ರಯಾಣಿಕರ ನಿರ್ಲಕ್ಷ್ಯದಿಂದ ಮೆಟ್ರೋ ನಿಗಮ ಸಾಕಷ್ಟು ಟೋಕನ್​ಗಳನ್ನು ಕಳೆದುಕೊಂಡಿದೆ. ಒಂದು ಟೋಕನ್​ಗೆ ಅಂದಾಜು 40 ರೂಪಾಯಿ ತಗಲುತ್ತದೇ ಎಂದು ಅಂದಾಜಿಸಲಾಗಿದೆ. ಹೀಗಾಗಿ ಮೆಟ್ರೋ ಪ್ರಯಾಣದ ವೇಳೆ ಟೋಕನ್​ ಕಳೆದುಕೊಳ್ಳುವ ಪ್ರಯಾಣಿಕರಿಗೆ ಇದುವರೆಗೂ ಮೆಟ್ರೋ 50 ರೂಪಾಯಿ ದರ ವಿಧಿಸುತ್ತ ಬಂದಿತ್ತು.
ಆದರೇ ಇತ್ತೀಚೆಗೆ ಪ್ರತಿ ತಿಂಗಳಿಗೆ ಅಂದಾಜು 1500 ಟೋಕನ್​ ಕಳೆದುಹೋಗುತ್ತಿತ್ತು. ಹೀಗಾಗಿ ಟೋಕನ್​ ಬಗ್ಗೆ ಪ್ರಯಾಣಿಕರಿಗೆ ಕಾಳಜಿ ಬೆಳೆಸುವ ನಿಟ್ಟಿನಲ್ಲಿ ಮೆಟ್ರೋ 50 ರೂಪಾಯಿ ದಂಡದ ಮೊತ್ತವನ್ನು 500 ಕ್ಕೆ ಏರಿಸಿದ್ದು, ಜೊತೆಗೆ ಮೆಟ್ರೋ ಪ್ರಯಾಣದ ಗರಿಷ್ಠ ದರವನ್ನು ದಂಡವಾಗಿ ಪಾವತಿಸಬೇಕು.

Loss Token: Metro decision to increase the fine of Rs 50 to Rs 500 at Bengaluru.
Loss Token: Metro decision to increase the fine of Rs 50 to Rs 500 at Bengaluru.

ಈ ಬಗ್ಗೆ ಮಾಹಿತಿ ನೀಡಿರುವ ಬಿಎಂಆರ್​ಸಿಎಲ್​ ಎಂಡಿ ಪ್ರದೀಪ ಸಿಂಗ್ ಖರೋಲ, ಕೆಲವು ಭಾರಿ ಪ್ರಯಾಣಿಕರು ಟೋಕನ್ ಪಡೆದು ಫ್ಲಾಟ್​ಪಾರ್​ಂ ಪ್ರವೇಶಿಸಿದರೂ, ಇಳಿಯುವ ನಿಲ್ದಾಣದಲ್ಲಿ ಟೋಕನ್ ವಾಪಸ ನೀಡದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ದಂಡದ ಮೊತ್ತ ಹೆಚ್ಚಿಸಲಾಗಿದೆ. ಅಲ್ಲದೇ ನಿರ್ಗಮ ದ್ವಾರದಲ್ಲಿ ಡಿಟೆಕ್ಟರ್​ ಅಳವಡಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು. ಒಟ್ಟಿನಲ್ಲಿ ನೀವು ಇನ್ಮುಂದೆ ಮೆಟ್ರೋ ಪ್ರಯಾಣಿಸುವ ವೇಳೆ ಟೋಕನ್​ ಹುಶಾರಾಗಿಟ್ಟುಕೊಳ್ಳೋಕೆ ಮರಿಬೇಡಿ.

Watch Here:  https://youtu.be/gGcIcUKKsxg