ಬಿಜೆಪಿ ಕಚೇರಿ ಬಿಟ್ಟ ಮಹದಾಯಿ ಹೋರಾಟಗಾರರು- ಸಂಜೆ‌ ಸಿದ್ದವಾಗಲಿದೆ ಮುಂದಿನ ಹೋರಾಟದ ರೂಪುರೇಷೆ!!

Mahadayi fighters left BJP office in Bengaluru.
Mahadayi fighters left BJP office in Bengaluru.

ಕಳೆದ ನಾಲ್ಕು ದಿನಗಳಿಂದ ಬಿಜೆಪಿ ಕಚೇರಿ ಮುಂದೇ ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರು ಇಂದು ಬಿಜೆಪಿ ಕಚೇರಿ ಮುಂದಿನ ತಮ್ಮ ಹೋರಾಟವನ್ನು ಕೈಬಿಡಲು ನಿರ್ಧರಿಸಿದ್ದು, ಮುಂದಿನ ಹೋರಾಟದ ರೂಪುರೇಷೆ ಸಂಜೆ ವೇಳೆಗೆ ಸ್ಪಷ್ಟವಾಗಲಿದೆ.

ಇನ್ನು ಬಿಜೆಪಿ ಕಚೇರಿಯಿಂದ ಮೆರವಣಿಗೆ ಆರಂಭಿಸಿದ ಮಹದಾಯಿ ಹೋರಾಟಗಾರರು ರಾಜಭವನಕ್ಕೆ ತೆರಳಿ ತಮಗಾದ ಅನ್ಯಾಯದ ಕುರಿತು ಹಾಗೂ ಸಮಸ್ಯೆ ಬಗೆಹರಿಸಿಕೊಡುವಂತೆ ರಾಜ್ಯಪಾಲರಿಗೆ ಮನವಿ ನೀಡಲು ಯತ್ನಿಸಿದರು. ಈ ವೇಳೆ ರಾಜಭವನದಲ್ಲಿ ರೈತರಿಗೆ ರಾಜ್ಯಪಾಲರ ಭೇಟಿಗೆ ಅವಕಾಶ ಸಿಗಲಿಲ್ಲ. ರಾಜಭವನದ ಮುಖ್ಯಕಾರ್ಯದರ್ಶಿ ಮನವಿ ಸ್ವೀಕರಿಸಿದರು. ಇದಕ್ಕೆ ಹೋರಾಟಗಾರ ವಿರೇಶ್ ಸೊರಬದಮಠ ಸೇರಿದಂತೆ ಎಲ್ಲ ರೈತ ಮುಖಂಡರು ಅಸಮಧಾನ ವ್ಯಕ್ತಪಡಿಸಿದ್ದಾರೆ. ‘
ರಾಜಭವನದ ಎದುರು ಮಾಧ್ಯಮದವರ ಜೊತೆ ಮಾತನಾಡಿದ ವಿರೇಶ್ ಸೊಬರದಮಠ, ನಮಗೆ ರಾಜ್ಯಪಾಲರ ಭೇಟಿ ಅವಕಾಶ ಸಿಕ್ಕಿಲ್ಲ.

 

 

ಇದರಿಂದ ಬೇಸರವಾಗಿದೆ. ಅವರ ಆತಿಥ್ಯವನ್ನು ಸ್ವೀಕರಿಸಲು ನಾವು ಹೋಗಿಲ್ಲ. ರಾಜ್ಯಪಾಲರ ಭೇಟಿಯಾಗಲು ತೆರಳಿದ್ದೇವು ಎಂದು ಬೇಸರ ವ್ಯಕ್ತಪಡಿಸಿದರು. ‘ಇನ್ನು ಪ್ರತಿಭಟನಾಕಾರರು ಪೊಲೀಸ ವಾಹನದಲ್ಲಿಯೇ ಚುನಾವಣಾ ಆಯೋಗಕ್ಕೆ ತೆರಳಿದ್ದು, ಅಲ್ಲಿ ಚುನಾವಣೆ ನಡೆಸದಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಬಳಿಕ ದೇವೆಗೌಡರ್ ನಿವಾಸಕ್ಕೆ ತೆರಳಿರುವ ಪ್ರತಿಭಟನಾಕಾರರು ಅಲ್ಲಿ ಮನವಿ ನೀಡಿದ ಬಳಿಕ ಮುಂದಿನ ಹೋರಾಟದ ರೂಪುರೇಷೆ ರೂಪಿಸಲಿದ್ದಾರೆ.