ತಡರಾತ್ರಿವರೆಗೂ ಮೊಬೈಲ್​ನಲ್ಲಿ ಮುಳುಗಿರ್ತೀರಾ ಕಾದಿದೆ ನಿಮಗೆ ಶಾಕ್​​​​!

ಇತ್ತೀಚೆಗೆ ಜಗತ್ತೆ ಬೆರಳಂಚಿನಲ್ಲಿ ವಿಶ್ವ ತೋರಿಸುವ ಮೊಬೈಲ್​​ನ ಮೋಡಿಗೆ ಒಳಗಾಗಿದೆ. ಹುಟ್ಟಿದ ಮಕ್ಕಳಿಂದ ವೃದ್ಧಾಪ್ಯದ ಅಂಚಿನಲ್ಲಿರುವರಿಗೂ ಮೊಬೈಲ್​ ಅಂದ್ರೆ ಅಚ್ಚುಮೆಚ್ಚು. ದಿನದ 24 ಗಂಟೆಯೂ ಕೆಲವರಿಗೆ ಮೊಬೈಲ್​ ಬಳಸುವಷ್ಟು ಕ್ರೇಜ್​​ ಇದೆ. ಇಂತಹವರಿಗೆ ಈಗೊಂದು ಶಾಕಿಂಗ್ ಸುದ್ದಿ ಕಾದಿದೆ.

ಹೌದು ರಾತ್ರಿ ವೇಳೆ ಅತಿಯಾಗಿ ಮೊಬೈಲ್​​ ಮತ್ತು ಲ್ಯಾಪ್​​ಟಾಪ್​ ಬಳಕೆಯಿಂದ ನಿದ್ರಾಹೀನತೆ ಉಂಟಾಗುತ್ತೆ ಅಂಶವನ್ನು ಸಂಶೋಧನೆಯೊಂದು ಬಹಿರಂಗಗೊಳಿಸಿದೆ. ಇನ್ನು ಈ ಪ್ರಮಾಣ ಕರ್ನಾಟಕದಲ್ಲಿ ನೂರಕ್ಕೆ 92 ರಷ್ಟಿದೆಯಂತೆ.
25 ಶೇಕಡಾದಷ್ಟು ಜನರು ದಿನವೊಂದಕ್ಕೆ 7 ಗಂಟೆಗೂ ಕಡಿಮೆ ಅವಧಿ ನಿದ್ರಿಸುತ್ತಾರಂತೆ. ಇನ್ನು ಶೇಕಡಾ 11 ರಷ್ಟು ಜನ ರಾತ್ರಿ ಮೊಬೈಲ್​ ಬಳಸಿ ನಿದ್ದೆಗೆಟ್ಟು ಕೆಲಸದ ಅವಧಿಯಲ್ಲಿ ನಿದ್ದೆಯಲ್ಲಿರುತ್ತಾರಂತೆ.

ಇನ್ನು ಕೆಲವರು ಅತಿಯಾಗಿ ಮೊಬೈಲ್​​​​ ಬಳಸಿ ಕಣ್ಣಿಗೆ ಬೇನೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರಂತೆ. ಇನ್ನು ರಾತ್ರಿ ಮೊಬೈಲ್​ ಬಳಕೆಯಿಂದ ನಿದ್ದೆಗೆಡುವ ಜನರು ಆ್ಯಸಿಡಿಟಿ, ನರಗಳ ಸೆಳೆತ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರಂತೆ.
ಇನ್ನು ಯುವಜನತೆಯಂತೂ ಪಬ್​​ಜಿ ಗೇಮ್​, ಟಿಕ್​ಟಾಕ್​ನಂತಹವುಗಳ ಮೋಡಿಯಿಂದ ದಿನ 6-8 ಗಂಟೆ ಮೊಬೈಲ್​ನಲ್ಲೇ ಕಳೆಯುವ ಖಯಾಲಿ ಬೆಳೆಸಿಕೊಳ್ಳುತ್ತಿದ್ದು, ಇದು ಕೂಡ ಆರೋಗ್ಯಕ್ಕೆ ಹಾನಿಕರ ಎಂದು ಸಂಶೋಧನೆ ಅಭಿಪ್ರಾಯಿಸಿದೆ.