ಸಿಲಿಕಾನ‌ ಸಿಟಿಗೆ ತಟ್ಟದ ಬಂದ್ ಬಿಸಿ- ರಸ್ತೆಗಿಳಿದ ವಾಹನಗಳು!

 

ad

 

ಕೇಂದ್ರ ಸರ್ಕಾರದ ಮೋಟಾರ್ ವಾಹನ ತಿದ್ದುಪಡಿ ಮಸೂದೆ 2017ನ್ನು ವಿರೋಧಿಸಿ ಕರೆ ಕೊಟ್ಟಿದ್ದ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೇಂದ್ರ ಸರ್ಕಾರ ತಿದ್ದುಪಡಿ ವಿಧೇಯಕವನ್ನ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಇಂದು ರಾಷ್ಟ್ರ ವ್ಯಾಪ್ತಿ ಸಾರಿಗೆ ಮುಷ್ಕರಕ್ಕೆ ಕರೆ ನೀಡಲಾಗಿದೆ.. ಆದರೆ ಮುಷ್ಕರಕ್ಕೆ ಬೆಂಗಳೂರು ಸೇರಿದಂತೆ ಎಲ್ಲೆಡೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ.. ಬೆಳಗ್ಗೆ 6 ಗಂಟೆಯಿಂದಲ್ಲೂ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲಾ ವಾಹನಗಳ ಸಂಚಾರ ಯಥಾಸ್ಥಿತಿಯಲ್ಲಿದೆ.

ಇನ್ನೊಂದೆಡೆ ಟೌನ್ ಹಾಲ್‌ನೊಂದ ಫ್ರೀಡಂ ಪಾರ್ಕ್‌ವರೆಗೂ ಬೃಹತ್ ಮೆರವಣಿಗೆ ಸಿದ್ಧತೆ ನಡೆಸಲಾಗಿದೆ. ಸಿಐಟಿಯು ಸೇರಿದಂತೆ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತಯರು ಟೌನ್‌ಹಾಲ್ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.. ಯಾವುದೇ ಕಾರಣಕ್ಕು ಈ ಮಸೂದೆ ಜಾರಿಯಾಗಬಾರದು, ಚಾಲಕರ ಪಾಲಿಗೆ ಇದೊಂದು ಮಾರಕವಾಗಿರೋ ಮಸೂದೆ ತಿದ್ದುಪಡಿ ಮಾಡಬಾರದು ಅಂತ ಒತ್ತಾಯಿಸ್ತಿದ್ದಾರೆ‌.

 

ನಮ್ಮ ಮುಷ್ಕರವನ್ನು ದಾರಿ ತಪ್ಪಿಸಲಾಗ್ತಿದೆ ಅಂತ ಕರ್ನಾಟಕ ಸಾರಿಗೆ ನಿಗಮಗಳ ಒಕ್ಕೂಟದ ಅಧ್ಯಕ್ಷ ರೇವಪ್ಪ ಆರೋಪಿಸಿದ್ರು. ಬಿಎಂಟಿಸಿ, ಕೆ ಎಸ್ ಆರ್ ಟಿ ಸಿ ನೌಕರರಿಗೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಿದ್ದಾರೆ ಎಂದು ರೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ರು.