ಒಂದು ಲವ್ ಮ್ಯಾರೇಜ್- ಇನ್ನೊಂದು ಆ್ಯರೇಂಜ್ ಮ್ಯಾರೇಜ್- ಎರಡು ಮದುವೆಯಾದ ಹುಡುಗಿ- ಹೆಂಡತಿಗಾಗಿ ಮೊದಲ‌ ಗಂಡನ ಪರದಾಟ

 

ad

ಕಾರವಾರ : ಒಂದು ಗಂಡಿಗೆ ಎರಡು ಹೆಂಡಿರು ಎನ್ನುವ ಸುದ್ದಿ ಇತ್ತಿಚಿಗೆ ಸರ್ವೇ ಸಾಮಾನ್ಯ..ಆದ್ರೆ ಇಲ್ಲೊಂದು ಕಡೆ ಒಂದು ಹೆಣ್ಣಿಗೆ ಇಬ್ಬರು ಗಂಡಂದಿರು..ಪ್ರೀತಿಸಿ ಮದುವೆಯಾದ ದ್ವೇಷಕ್ಕೆ ಮನೆಯರು ಮಗಳಿಗೆ ಎರಡು ಗಂಡನನ್ನ ಕಟ್ಟಿದ ಘಟನೆ ಈಗ ಬಯಲಿಗೆ ಬಂದಿದೆ.ಹಾಗಾದ್ರೆ ಇದು ಎಲ್ಲಿ ಅಂತೀರಾ ಇ ಸ್ಟೋರಿ ಒಮ್ಮೆ ಓದಿ.

ಮಮತಾ ಮತ್ತು ದನಂಜಯ್ ಹೆಗಡೆ ಪುತ್ರಿ ಆಶಾ ಕಳೆದ ವರ್ಷ ಅಕ್ಟೋಬರ್ ನಲ್ಲಿ ಗಣಪತಿ ಎಂಬ ವ್ಯಕ್ತಿಯನ್ನ ಪ್ರೀತಿಸಿ ವಿವಾಹವಾಗಿದ್ದಳು..ಈ ವಿವಾಹಕ್ಕೆ ಆಶಾಳ ಹೆತ್ತವರು ತೀರಾ ವಿರೋದವಿತ್ತು ಆದ್ರೂ ಕೂಡಾ ವಲ್ಲದ ಮನಸ್ಸಿನಿಂದ ಆಶಾಳ ಹೆತ್ತವರು ಕೊನೆಯಲ್ಲಿ ಒಪ್ಪಿಕೊಂಡಿದ್ರು. ಆದ್ರೆ ಒಳಗೆ ದ್ವೇಷ ತುಂಬಿಕೊಂಡು ತಮ್ಮ‌ಕುತಂತ್ರ ಬುದ್ದಿಯನ್ನ ತೋರಿದ ಆಶಾಳ ಹೆತ್ತವರು ಮದುವೆಯಾದ ತನ್ನ ಮಗಳಿಗೆ ಬೇರೆ ವರನನ್ನ ನೋಡ್ತಿದ್ರು ಹಾಗೆ ವಿವಾಹವನ್ನ ನಿಶ್ಚಯ ಮಾಡಿ‌ಬಿಟ್ರು..ಇದಕ್ಕೆ ಆಶಾ ವಿರೋದ ವ್ಯಕ್ತ ಪಡಿಸಿದ್ರು ಕೂಡಾ ಹೆದರಿಸಿಬೆದರಿಸಿ ರಾಜೇಶ್ ಎನ್ನುವ ವ್ಯಕ್ತಿ ಜೊತೆ ಇದೆ ಜುಲೈ ತಿಂಗಳಲ್ಲಿ ಮದುವೆ ಮಾಡಿಬಿಟ್ರು. ಅಪ್ಪ ಅಮ್ಮ ನ ಬೆದರಿಕೆಗೆ ಆಶಾ ಕೂಡಾ ಅಸ್ತು ಎಂದಿದ್ದಾಳೆ.. ಆದ್ರೆ ಅವೆಲ್ಲಕ್ಕು ಜಗ್ಗದೆ ರೆಜಿಸ್ಟರ್ ಆಪೀಸ್ ಅಲ್ಲಿ ರೆಜಿಸ್ಟರ್ ಕೂಡಾ ಮಾಡಿ ಬಿಟ್ರು. .ಗಣಪತಿ ಮೊನ್ನೆ ತನ್ನ ಹೆಂಡತಿಯನ್ನ ಮನೆಗೆ ಕರೆಯಿಸಿ ಕೊಡಿ ಎಂದು ಹೇಳಲು ಹೋದಾಗ ಆಶಾಳಿಗೆ ಇನ್ನೊಂದು ಮದುವೆ ಮಾಡಿದ ಸತ್ಯ ಬಯಲಿಗೆ ಬಂದಿದೆ.

ಗಣಪತಿ ವಿವಾಹದ ರೆಜಿಸ್ಟರ್ ಕಾರವಾರ ಕಚೇರಿಯಲ್ಲಿ ಆದ್ರೆ ರಾಜೇಶ್ ಜೊತೆ ವಿವಾಹದ ರೆಜಿಸ್ಟರ್ ಯೆಲ್ಲಾಪುರ ತಾಲೂಕಿನಲ್ಲಿ ಮಾಡಿದ್ದಾರೆ. .ಮಕ್ಕಳ ಭವಿಷ್ಯ ರೂಪಿಸಬೇಕಾದ ಆಶಾಳ ಹೆತ್ತವರು ತನ್ನ ಮಗಳಿಗೆ ಒಬ್ಬ ಗಂಡ ಇರ್ಬೆಕಾದ್ರೆನೆ ಇನ್ನೊಂದು ಮದುವೆ ಮಾಡಿಸಿದ್ದು ಹೇಸಿಗೆ ಕೆಲಸ ಇವರ ಜೊತೆ ರೆಜಿಸ್ಟರ್ ಅಧಿಕಾರಿಗಳ ಪ್ರಮಾಧ ಹಾಗು ನಿರ್ಲಕ್ಷ್ಯ ಕೂಡಾ ಎತ್ತಿ ತೋರಿಸುತ್ತದೆ.

ಒಟ್ಟಾರೆ ಸಮಾಜದಲ್ಲೆ ಎನೆಲ್ಲ ಹೇಸಿಗೆ ಕೆಲಸ ನಡೆಯುತ್ತದೆ ಅನ್ನೋದಕ್ಕೆ ಈ ಘಟನೆ ಕೂಡಾ ತಾಜಾ ಉದಾಹರಣೆ..ತಿದ್ದಿ ತೀಡಿ ಬುದ್ದಿ ಹೇಳಬೇಕಾದ ಹಿರಿಯರೆ ಇಂತ ಲಜ್ಜೆ ಕೆಲಸಕ್ಕೆ ಕೈ ಹಾಕಿದ್ರೆ ಮಕ್ಕಳು ಎನಾಗಬೇಕು ಎನ್ನೊದೆ ಪ್ರಶ್ನೆ.