ಕಬ್ಬನಪಾರ್ಕ್ ನಲ್ಲಿ ಪೋಟೋಶೂಟ್ ಗೂ ಬಿತ್ತು ಬ್ರೇಕ್!!

Permission is mandatory for a photo shoot at Cubbon Park.

ಇತ್ತಿಚಿಗೆ ಮದುವೆ,ಹುಟ್ಟುಹಬ್ಬ,ಪುಟಾಣಿ ಮಕ್ಕಳ ಬಾಲ್ಯ, ತಾಯ್ತನದ ಮಧುರ ಕ್ಷಣಗಳು ಹೀಗೆ ಎಲ್ಲವನ್ನು ಮತ್ತಷ್ಟು ಅವಿಸ್ಮರಣೀಯವಾಗಿಸಲು ಪೋಟೋ ಶೂಟ್ ಮಾಡುವ ಪರಿಪಾಟ ಆರಂಭವಾಗಿದೆ.

ad


ಸಿಲಿಕಾನ ಸಿಟಿಯಲ್ಲಿ ಇಂತಹ ಪೋಟೋ ಶೂಟ್ ಪ್ರಿಯರ ಹಾಟ್ ಸ್ಪಾಟ್ ಅಂದ್ರೆ ಕಬ್ಬನಪಾರ್ಕ್. ಇಲ್ಲಿನ ಹಸಿರಿನ ನಡುವೆ ಪ್ರತಿನಿತ್ಯ ನೂರಾರು ಪೋಟೋಶೂಟ್ ಗಳು ನಡೆಯುತ್ತವೆ‌.ಆದರೇ ಇನ್ಮುಂದೆ ಈ ಕ್ಯಾಮರಾ ಕೈಚಳಕಕ್ಕೆ ಬ್ರೇಕ್ ಬೀಳಲಿದ್ದು ಕಬ್ಬನ್ ಪಾರ್ಕ್ ಮಾಲಿನ್ಯ ಮುಕ್ತವಾಗಿಸುವುದು ಹಾಗೂ ಪ್ರವಾಸಿಗರಿಗೆ ಕಿರುಕುಳವಾಗುವುದನ್ನು ತಪ್ಪಿಸಲು ತೋಟಗಾರಿಕಾ ಇಲಾಖೆ ಪೋಟೋಶೂಟ್ ಗಳಿಗೆ ನಿರ್ಭಂದ ಹೇರಲು ನಿರ್ಧರಿಸಿದೆ.  ಪೋಟೋ ಶೂಟ್ ಹೆಸರಿನಲ್ಲಿ ಬಲೂನುಗಳನ್ನು ಹಾರಿಬಿಡುವುದು, ಅಲಂಕಾರಿಕ ವಸ್ತುಗಳ ಬಳಕೆ, ಪಾರಿವಾಳ ಗಳನ್ನು ಹಾರಿಸುವುದು ಸೇರಿದಂತೆ ಬೇರೆ-ಬೇರೆ ರೀತಿಯ ಚಟುವಟಿಕೆಯಿಂದ ಕಬ್ಬನಪಾರ್ಕ್ ನ ಸ್ವಾಸ್ಥ್ಯ ಹಾಳಾಗುತ್ತಿದ್ದು ಕಸ ಹಾಗೂ ಮಾಲಿನ್ಯ ಉಂಟಾಗುತ್ತಿದೆ ಎಂದು ಪರಿಸರ ಪ್ರಿಯರು ಹಾಗೂ ನಡಿಗೆದಾರರು ಇಲಾಖೆ ದೂರು ನೀಡಿದ್ದರು.

 

 

ಈ ಹಿನ್ನೆಲೆಯಲ್ಲಿ ಇದೀಗ ಕಬ್ಬನ್ ಪಾರ್ಕ್ ನಲ್ಲಿ ಪೋಟೋ ಶೂಟ್ ಬ್ರೇಕ್ ಬೀಳಲಿದೆ. ಲಾಲ್ ಭಾಗ್ ನಲ್ಲಿ ಈಗಾಗಲೇ ಪೋಟೋ ಶೂಟ್ ಬ್ಯಾನ್ ಮಾಡಲಾಗಿದ್ದು ಇದೀಗ ಈ ಸಾಲಿಗೆ ಕಬ್ಬನ್ ಪಾರ್ಕ್ ಕೂಡ ಸೇರ್ಪಡೆಯಾಗಲಿದೆ.ಇನ್ನೂ ಶುಲ್ಕ ಪಾವತಿಸಿ ನಿಯಮ ಬದ್ಧವಾಗಿ ಪೋಟೋ ಶೂಟ್ ನಡೆಸಲು ತೋಟಗಾರಿಕಾ ಇಲಾಖೆ ಅನುಮತಿ ನೀಡಲಿದೆ. ಈ ಬಗ್ಗೆ ಈಗಾಗಲೇ ತೋಟಗಾರಿಕಾ ಇಲಾಖೆ ಚಿಂತನೆ ನಡೆಸಿದ್ದು ಕೆಲ ನಿಯಮಗಳನ್ನು ಪಾಲಿಸಿ, ದುಬಾರಿ ಶುಲ್ಕ ಪಾವತಿಸಿದಲ್ಲಿ ಮಾತ್ರ ಇನ್ಮುಂದೆ ಕಬ್ಬನ್ ಪಾರ್ಕ್ ನಲ್ಲಿ ನಿಮ್ಮ ಕ್ಯಾಮರಾ ಹೊರತೆಗೆಯಬಹುದು. ಒಟ್ಟಿನಲ್ಲಿ ಪುಕ್ಸಟ್ಟೆಯಾಗಿ ಪೋಟೋ ಶೂಟ್ ನಡೆಸಿ ಭರ್ಜರಿ ಆದಾಯ ಗಳಿಸುತ್ತಿದ್ದ ಪೋಟೋಗ್ರಾಫರ್ ಗಳಿಗೆ ಕಬ್ಬನಪಾರ್ಕ್ ಹಾಗೂ ತೋಟಗಾರಿಕಾ ಇಲಾಖೆ ಸಖತ್ ಶಾಕ್ ನೀಡಿದ್ದು ಇನ್ಮುಂದೆ ಶುಲ್ಕ ಪಾವತಿಸಿ ತಮ್ಮ ಕ್ಯಾಮರಾ ಬಳಸುವ ಸ್ಥಿತಿ ಪೋಟೋಗ್ರಾಫರ್ ಗಳಿಗೆ ಎದುರಾಗಿದೆ.