“ಬಿ” ಅಲರ್ಟ್ !! ಬೆಂಗಳೂರಿನಲ್ಲಿ ರಾತ್ರೋರಾತ್ರಿ ನಿಮ್ಮ ಕಾರುಗಳ ಗ್ಲಾಸು ಪುಡಿಪುಡಿ !!

ನೀವು ಬೆಂಗಳೂರು ನಿವಾಸಿಗಳಾ? ನೀವು ಕಾರು ಖರೀದಿಸಿದ್ದೀರಾ? ನಿಮ್ಮ ಕಾರು ಮನೆ ಮುಂದೇ ಪಾರ್ಕ್​ ಮಾಡ್ತಿರಾ? ಹಾಗಿದ್ದರೇ ಇನ್ನು ಮುಂದೇ ನೀವು ನಿಮ್ಮ ಕಾರು-ಬೈಕ್​ ಉಳಿಸಿಕೊಳ್ಳೋಕೆ ಇನ್ನಷ್ಟು ಸರ್ಕಸ್​ ಮಾಡಬೇಕು. ಹೌದು ನಗರದಲ್ಲಿ ರಾತ್ರಿ ಮನೆ ಮುಂದೆ ನಿಲ್ಲಿಸಿರುವ ವಾಹನಗಳ ಗ್ಲಾಸ್​ ಒಡೆಯುವ ಸೈಕೋಗಳ ಕಾಟ ಮೀತಿ ಮೀರಿದೆ. ನಿನ್ನೆಯೂ ಇಂತಹುದೇ ಘಟನೆ ನಡೆದಿದ್ದು, ಈ ಸೈಕೋಗಳ ಕಾಟಕ್ಕೆ ಜೆ.ಸಿ.ನಗರದಲ್ಲಿ ಮನೆ ಮುಂದೇ ನಿಲ್ಲಿಸಲಾಗಿದ್ದ ವಾಹನಗಳ ಗ್ಲಾಸ್ ಪುಡಿ ಪುಡಿಯಾಗಿದೆ.

ad
ಕುರುಬರಹಳ್ಳಿ ಬಳಿಯ ಜೆ.ಸಿ.ನಗರದಲ್ಲಿ ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರು,ಅಟೋ,ಟೆಂಪೋ ಟ್ರಾವೆಲರ್ ಗಳ ಗ್ಲಾಸ್​ನ್ನು ಒಡೆದು ಹಾಕಲಾಗಿದೆ. ಬೆಳಗ್ಗೆ ವಾಹನಗಳನ್ನು ನೋಡಿದ ಸ್ಥಳೀಯ ನಿವಾಸಿಗಳು ಕಂಗಾಲಾಗಿದ್ದು, ಬೆಲೆಬಾಳುವ ವಾಹನಗಳ ಸ್ಥಿತಿ ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿಗೆ ನಗರದಲ್ಲಿ ಈ ರೀತಿಯ ಘಟನೆ ಪುನರಾವರ್ತನೆಯಾಗುತ್ತಲೇ ಇದ್ದು, ತಡರಾತ್ರಿ ಕುಡಿದ ಮತ್ತಿನಲ್ಲಿ ಹಾಗೂ ಮಾದಕ ದ್ರವ್ಯಗಳ ಅಮಲಿನಲ್ಲಿ ಬರುವ ಸೈಕೋಗಳು ಈ ರೀತಿ ಕೃತ್ಯ ಎಸಗುತ್ತಿದ್ದು, ಪೊಲೀಸರು ಸೂಕ್ತವಾಗಿ ಬೀಟ್​ ಮಾಡುವ ಮೂಲಕ ಈ ರೀತಿಯ ಕೃತ್ಯಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯವ್ಯಕ್ತವಾಗಿದೆ.