ನನ್ನ ಗಂಡ ನನಗೆ ಬೇಕು – ಅತ್ತೆಯ ಮನೆ ಮುಂದೆ ಸೊಸೆಯ ಪ್ರತಿಭಟನೆ

Bengaluru: Women Protest against Her Husband and his Family.

ನನ್ನ ಗಂಡನ ಜೊತೆ ಜೀವನ ಮಾಡಲು ಅತ್ತೆ ಬಿಡ್ತಿಲ್ಲ ಅಂತ ಪ್ರೀತಿ ಅನ್ನೋರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ನಿ ಪ್ರೀತಿಯನ್ನ ಮನೆಯಿಂದ ಹೊರ ಹಾಕಿ ಗಂಡ ಮಹೇಶ್ ಸೇಠ್ ಹಾಗೂ ಅತ್ತೆ ರಜಿನಿ ರಮೇಶ್ ಒಳಗಡೆಯಿಂದ ಬೀಗ ಹಾಕಿ ಕೊಂಡಿದ್ದಾರೆ. ಹೀಗಾಗಿ, ಮನೆಯ ಗೇಟ್​​​​ನ್ನು ಕಲ್ಲು, ರಾಡ್ ನಿಂದ ಒಡೆದು ಒಳ ಹೋಗಲು ಪ್ರೀತಿ ಯತ್ನಿಸಿದ್ದಾರೆ. ರಾಜೀಸಂಧಾನದ ನಂತರವೂ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸೊಸೆ ನನಗೆ ಗಂಡ ಬೇಕು ಗಂಡ ಅಂತ ಅತ್ತೆ ಮನೆಯ ಗೇಟ್​ ಒಡೆದು ಪ್ರೊಟೆಸ್ಟ್​ ಮಾಡ್ತಿದ್ದಾಳೆ.

ad

ಏನಿದು ಘಟನೆ?
ಎರಡು ವರ್ಷಗಳ ಹಿಂದೆ ಪ್ರೀತಿ ಹಾಗೂ ಮಹೇಶ್ ಸೇಠ್ ಮದ್ವೆ ಆಗಿತ್ತು. ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ ಗಂಡ ಮಹೇಶ್ ಸೇಠ್ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಗೆ ಪ್ರೀತಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಹಿರಿಯರು ಸಂಧಾನ ನಡೆಸಿ ಪ್ರೀತಿಯನ್ನ ಗಂಡನ ಮನೆ ಸೇರಿಸಿದ್ದರು. ಆದ್ರೆ ತಡ ರಾತ್ರಿ ಮತ್ತೆ ಗಂಡ ಮತ್ತು ಅತ್ತೆ ಸೇರ್ಕೊಂಡು ಪ್ರೀತಿಯನ್ನು ಮಗುವಿನ ಸಮೇತ ಹೊರಹಾಕಿದ್ದಾರೆ. ಹೀಗಾಗಿ ಪ್ರೀತಿ ಪ್ರೊಟೆಸ್ಟ್​ ಮಾಡ್ತಿದ್ದಾಳೆ.