ಕೊನೆಗೂ ಬಯಲಾಯ್ತು ರಾಹುಲ್ ಅಪ್ಪುಗೆ ರಹಸ್ಯ- ಇಷ್ಟಕ್ಕೂ ರಾಹುಲ್​ ಮೋದಿಯವರನ್ನು ಅಪ್ಪಿಕೊಂಡಿದ್ದ್ಯಾಕೆ ಗೊತ್ತಾ?!

ಕಳೆದ ತಿಂಗಳು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಮಾಡಿದ ಭಾಷಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಷ್ಟೇ ಅಲ್ಲ ಭಾಷಣದ ಬಳಿಕ ಪ್ರಧಾನಿಯವರ ಬಳಿ ತೆರಳಿ ಅವರನ್ನು ತಬ್ಬಿಕೊಂಡಿದ್ದು ಕೂಡ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಆದರೇ ರಾಹುಲ್ ಗಾಂಧಿ ಯಾಕೆ ಪ್ರಧಾನಿಯನ್ನು ತಬ್ಬಿಕೊಂಡರು ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು.

 

ಇದೀಗ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮೋದಿಯವರನ್ನು ತಬ್ಬಿಕೊಂಡ ಘಟನೆ ನಡೆದ ಬರೋಬ್ಬರು 1 ತಿಂಗಳ ಬಳಿಕ ರಾಹುಲ್​ ಗಾಂಧಿ ಈ ಅನುಮಾನಗಳಿಗೆ ಉತ್ತರ ನೀಡಿದ್ದಾರೆ. ಹೌದು ಈಗ ರಾಹುಲ್​ ಗಾಂಧಿ ಇದಕ್ಕೆ ಹೊಸ ವ್ಯಾಖ್ಯಾನ ನೀಡಿದ್ದಾರೆ.
ಜಗತ್ತು ನೀವು ತಿಳಿದಿರೋ ಹಾಗೆ ಅಷ್ಟು ಕೆಟ್ಟಿಲ್ಲ.. ಅದರ ತುಂಬ ಹೃದಯವಂತರೇ ಇದ್ದಾರೆ ಎಂದು ಪಿಎಂ ಮೋದಿ ಅವ್ರನ್ನು ತಬ್ಬಿಕೊಂಡಾಗ ಹೇಳಿದ್ದೇನೆ ಅಂತಾ ರಾಹುಲ್​​​ ಹೇಳಿಕೊಂಡಿದ್ದಾರೆ. ಜರ್ಮನಿಯ ಹ್ಯಾಂಬರ್ಗ್​ನಲ್ಲಿರುವ ಬರ್ಸಿರಿಯಸ್ ಸಮ್ಮರ್ ಶಾಲೆಯಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದದ ವೇಳೆ ರಾಹುಲ್​ ಈ ವಿಚಾರ ಹಮ್ಮಿಕೊಂಡಿದ್ದು, ಕೊನೆಗೂ ರಾಹುಲ್​​​ ಅಪ್ಪುಗೆಯ ಸೀಕ್ರೆಟ್ ಬಯಲಾದಂತಾಗಿದೆ.