ಹಿರಿಯ ಕವಿ ಸಾಹಿತಿ ಸುಮತೀಂದ್ರ ನಾಡಿಗ ಇನ್ನಿಲ್ಲ

 

 

ಹಿರಿಯ ಕವಿ ಲೇಖಕ ಸುಮತೀಂದ್ರ ನಾಡಿಗ್ ಅವರು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸುಮತೀಂದ್ರ ನಾಡಿಗ್ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಚಿಕ್ಕಮಗಳೂರಿನ ಕಳಸ ಮೂಲಕ ಅವರು ಮೂಲತಃ ಪ್ರಾಧ್ಯಾಪಕರಾಗಿದ್ದು, ಮಕ್ಕಳ ಸಾಹಿತ್ಯ, ಅನುವಾದ,ವಿಮರ್ಶೆ,ಕಾವ್ಯ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಸುಮತೀಂದ್ರ ನಾಡಿಗರು ಕೃಷಿ ಮಾಡಿದ್ದರು.ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಇವರಿಗೆ ಸಂದಿವೆ.

ಸುಮತೀಂದ್ರ ನಾಡಿಗರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಅಲ್ಲದೇ ಸುಮತೀಂದ್ರ ನಾಡಿಗರ ನಿಧನಕ್ಕೆ ನಾಡಿದ ಹಲವು ಹಿರಿಯ ಸಾಹಿತಿಗಳು, ಲೇಖಕರು,ಕವಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.