ರಾಜ್ಯಕ್ಕಿದ್ದಾರೆ ಮೂವರು ಮುಖ್ಯಮಂತ್ರಿಗಳು ಹೊಸ ವಿವಾದಕ್ಕೆ ನಾಂದಿ ಹಾಡಿದ ಬಿಜೆಪಿ ಟ್ವಿಟ್​

 

ad

ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್​ ಟೀಕಾಯುದ್ಧ ತಾರಕಕ್ಕೇರಿದೆ. ಸದಾಕಾಲ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಟೀಕಿಸುತ್ತಲೇ ಬಂದಿದ್ದ ಬಿಜೆಪಿ ಈ ಭಾರಿ ಜೆಡಿಎಸ್​ ಕುಟುಂಬ ರಾಜಕಾರಣ ವಿರುದ್ಧ ಕಟು ಟೀಕೆ ಮಾಡಿದ್ದು, ರಾಜ್ಯದಲ್ಲಿ ಸದ್ಯ ಮೂವರು ಮುಖ್ಯಮಂತ್ರಿಗಳಿದ್ದಾರೆ. ಈ ಪೈಕಿ ಎಚ್​.ಡಿ.ಕುಮಾರಸ್ವಾಮಿ ದುರ್ಬಲ ಮುಖ್ಯಮಂತ್ರಿ ಎನ್ನುವ ಮೂಲಕ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದೆ.

ಹೌದು ದೇವೆಗೌಡರ ಕುಟುಂಬವನ್ನು ಟೀಕಿಸಿ ಟ್ವಿಟ್​ ಮಾಡಿರುವ ರಾಜ್ಯ ಬಿಜೆಪಿ ಘಟಕ, ರಾಜ್ಯದಲ್ಲಿ ಸಧ್ಯ ಮೂವರು ಮುಖ್ಯಮಂತ್ರಿಗಳಿದ್ದಾರೆ. ಆ ಪೈಕಿ ಎಚ್.ಡಿ.ಕುಮಾರಸ್ವಾಮಿ ದುರ್ಬಲ ಮುಖ್ಯಮಂತ್ರಿ. ಎಚ್.ಡಿ.ರೇವಣ್ಣ ಸೂಪರ್ ಸಿಎಂ ಹಾಗೂ ಎಚ್.ಡಿ,ದೇವೆಗೌಡ್ರು ಸುಪ್ರೀಂ ಸಿಎಂ. ಇಷ್ಟೊಂದು ಮುಖ್ಯಮಂತ್ರಿಗಳಿದ್ದರೂ ಸರ್ಕಾರಿ ಯಂತ್ರ ಯಾವಾಗ ಆರಂಭವಾಗುತ್ತದೆ ಜನರು ನೋಡುವಂತಾಗಿದೆ. ನಿಜವಾದ ಸಿಎಂ ಯಾರೂ ಎಂಬುದನ್ನ ದೇವೇಗೌಡರ ಕುಟುಂಬವೇ ನಿರ್ಧರಿಸಲಿ ಎಂದು ಬಿಜೆಪಿ ರಾಜ್ಯ ಸರ್ಕಾರ ಲೇವಡಿ ಮಾಡಿದೆ.

ಬಿಜೆಪಿಯ ಈ ಟ್ವಿಟ್​ ಮೂಲಕ ಮತ್ತೊಮ್ಮೆ ದೇವೆಗೌಡರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಹಂಗಿಸಿದೆ. ಅಲ್ಲದೇ ಕುಮಾರಸ್ವಾಮಿಗಿಂತ ರೇವಣ್ಣ ಹಾಗೂ ದೇವೆಗೌಡರು ಆಡಳಿತ ಯಂತ್ರದ ಮೇಲೆ ಪ್ರಭಾವ ಬೀರುತ್ತಾರೆ ಎಂಬುದನ್ನು ಉಲ್ಲೇಖಿಸುವ ಪ್ರಯತ್ನ ಮಾಡಿದೆ. ಈ ಹಿಂದೆ ಕೂಡ ಬಿಜೆಪಿ ಸರ್ಕಾರವನ್ನು ದೇವೆಗೌಡರು ಸರ್ಕಾರವನ್ನು ನಿಯಂತ್ರಿಸುತ್ತಾರೆ ಎಂಬ ಆರೋಪ ಮಾಡಿತ್ತು.
ಅಲ್ಲದೇ ಸರ್ಕಾರವನ್ನು ದೇವೆಗೌಡರ ಕುಟುಂಬವೇ ಆಳುತ್ತಿರೋದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂಬರ್ಥದಲ್ಲಿ ಟೀಕಿಸಿದೆ. ಆದರೇ ಇದೀಗ ಈ ಟ್ವಿಟ್​ನಲ್ಲಿ ಕುಮಾರಸ್ವಾಮಿಯವರನ್ನು ದುರ್ಬಲ ಸಿಎಂ ಮತ್ತು ರಾಜ್ಯದಲ್ಲಿ ಮೂರು ಸಿಎಂ ಎನ್ನುವ ಮೂಲಕ ಹೊಸ ವಿವಾದಕ್ಕೆ ಸಿಲುಕುವ ಸಾಧ್ಯತೆ ಇದೆ.