ಒಂದು ಬೈಕ್​​ನಲ್ಲಿ ಇಬ್ಬರು ಮಹಿಳೆಯರು-ಮೂವರು ಮಕ್ಕಳ ಜೊತೆ ಸವಾರ- ಬೆಚ್ಚಿಬಿದ್ದ ಸಂಚಾರಿ ಪೊಲೀಸರು!

 

ad

 

ರಾಜ್ಯದಲ್ಲಿ ರಸ್ತೆ ಅಪಘಾತಗನ್ನ ನಿಯಂತ್ರಿಸೋದಿಕ್ಕೆ ಸಂಚಾರಿ ಪೊಲೀಸರು ಇನ್ನಿಲ್ಲದ ಸರ್ಕಸ್ ನಡೆಸುತ್ತಲೇ ಇದ್ದಾರೆ. ಆದರೂ ಜನ ನಿಯಮ ಉಲ್ಲಂಘಿಸೋದನ್ನು ಮಾತ್ರ ನಿಲ್ಲಿಸಿಲ್ಲ. ಇಂತಹುದೇ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು, ಒಂದು ಬೈಕ್​ನಲ್ಲಿ ಸವಾರನೊಬ್ಬ ಮೂವರು ಮಕ್ಕಳು, ಇಬ್ಬರು ಮಹಿಳೆಯರ ಜೊತೆ ಅತಿ ವೇಗವಾಗಿ ಪ್ರಯಾಣಿಸಿದ್ದಾನೆ.
ಹೀಗೆ ಬೈಕ್​ ತುಂಬ ಜನರನ್ನು ಹೊತ್ತು ಪ್ರಯಾಣಿಸುತ್ತಿರುವನನ್ನು ಕಂಡು ಬೆಚ್ಚಿದ ಚಿಕ್ಕಬಳ್ಳಾಪುರ ಸಂಚಾರಿ ಎಎಸ್​ಐ ವೇಣುಗೋಪಾಲ್​ ಈ ಬೈಕ್​ ಸವಾರನಿಗೆ ಕೈ ಮುಗಿದು ಗಾಡಿ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ಇಷ್ಟು ಜನರನ್ನು ಕೂರಿಸಿಕೊಂಡು ವೇಗವಾಗಿ ಬೈಕ್​ ಚಲಾಯಿಸುತ್ತಿದ್ದವನಿಗೆ ಬುದ್ಧಿ ಹೇಳಿ ಸಂಚಾರಿ ನಿಯಮವನನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ

 

ಆದರೇ ಬೈಕ್​ ಸವಾರ ಮಾತ್ರ ಜಪ್ಪಯ್ಯ ಅಂದ್ರೂ ಒಪ್ಪಲೇ ಇಲ್ಲ ಎನ್ನಲಾಗಿದೆ. ಬಳಿಕ ಎಎಸ್​ಐ ಆತನ ಬಳಿ ಮಕ್ಕಳು ಈ ದೇಶದ ಅಮೂಲ್ಯ ಆಸ್ತಿ ಅವರ ಭವಿಷ್ಯದ ಜೊತೆ ಆಟ ಆಡಬೇಡಿ ಎಂದಿದ್ದಾರೆ. ಆಗ ಪೊಲೀಸರ ಮಾತಿಗೆ ಒಪ್ಪಿದ ಆತ ಬೇರೆ ದಲ್ಲಿ ಕುಟುಂಬಸ್ಥರು ಕಳುಹಿಸಿ ತಾನೊಬ್ಬನೇ ಬೈಕ್​ ನಲ್ಲಿ ಹೋಗಿದ್ದಾನೆ. ಇದೀಗ ಸಂಚಾರಿ ಪೊಲೀಸ್​​ರು ಬೈಕ್​ ಸವಾರನಿಗೆ ಕೈಮುಗಿದ ಪೋಟೋ ಎಲ್ಲೆಡೆ ವೈರಲ್​ ಆಗಿದ್ದು, ಜನರು ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.