ಸೊಂಟ ಮುಟ್ಟಿದವನ ಕತೆ ಏನಾಯ್ತು? ನೀವೆ ನೋಡಿ!!!

ಸಿಲಿಕಾನ ಸಿಟಿ ಬೆಂಗಳೂರಿನಲ್ಲಿ ಮತ್ತೆ-ಮತ್ತೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಲೇ ಇದೆ. ಜಿಮ್​ ಮುಗಿಸಿ ಬರುತ್ತಿದ್ದ ಯುವತಿಗೆ ಕಾಮುಕನೊರ್ವ ಕಿರುಕುಳ ನೀಡಿದ್ದು, ತಕ್ಷಣ ಧೈರ್ಯ ತೋರಿದ ಯುವತಿ ಕಾಮುಕನನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ
ನಗರದ ಎಚ್​.ಎಸ್.ಆರ್.ಲೇಔಟ್​​ನ 6 ನೇ ಬ್ಲಾಕ್​​ನಲ್ಲಿ ಘಟನೆ ನಡೆದಿದ್ದು, ನವೆಂಬರ್ 17 ರಂದು ಸಂತ್ರಸ್ತ ಯುವತಿ ಜಿಮ್​ಗೆ ಹೋಗಿ ವಾಪಸ್ಸಾಗುತ್ತಿದ್ದಳು. ಈ ವೇಳೆ ಪಾರ್ಕಿಂಗ್​​ನಲ್ಲಿದ್ದ ದ್ವಿಚಕ್ರ ವಾಹನ ಹೊರತೆಗೆಯುತ್ತಿದ್ದ ವೇಳೆ ಬೈಕ್​ನಲ್ಲಿ ಇಬ್ಬರು ಕಾಮುಕರು ಬಂದಿದ್ದು, ಒಬ್ಬ ಆಕೆಯ ಸೊಂಟ ಜಿಗುಟಿ ಬೈಕ್​ನಲ್ಲಿ ಪರಾರಿಯಾಗಿದ್ದಾನೆ. ತಕ್ಷಣ ವಿಚಲಿತಳಾದ ಯುವತಿ ಸ್ನೇಹಿತನ ಸಹಾಯದಿಂದ ಬೈಕ್​​ನಲ್ಲಿ ಕಾಮುಕರನ್ನು ಬೆನ್ನಟ್ಟಿ ಹೋಗಿ ಹಿಡಿದು ಸರಿಯಾಗಿ ತದುಕಿ ಪೊಲೀಸರಿಗೆ ಒಪ್ಪಿಸಿದ್ದಾಳೆ.

ad


ಬಂಧಿತನನ್ನು ಬೇಗೂರು ನಿವಾಸಿ 43 ವರ್ಷದ ನಾರಾಯಣಸ್ವಾಮಿ ಎಂದು ಗುರುತಿಸಲಾಗಿದೆ. ಈಗಾಗಲೇ ಪೊಲೀಸರು ನಾರಾಯಣಸ್ವಾಮಿ ವಿಚಾರಣೆ ಆರಂಭಿಸಿದ್ದಾರೆ. ಒಟ್ಟಿನಲ್ಲಿ ನಗರದಲ್ಲಿ ಮತ್ತೆ- ಮತ್ತೆ ಮಹಿಳೆಯರಿಗೆ ಕಿರುಕುಳ ಹೆಚ್ಚುತ್ತಲೇ ಇದ್ದು, ಪೊಲೀಸ್ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.