ಗಂಗಾ ಶುದ್ಧೀಕರಣ ಯೋಜನೆಗೆ ಸಿಯೋಲ್ ಪ್ರಶಸ್ತಿ ಮೊತ್ತ ಅರ್ಪಣೆ: ನಮೋ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕೊಡುಗೆಗಾಗಿ ಪ್ರಧಾನಿ ನರೇಂದ್ರ ಮೋದಿ ಪ್ರತಿಷ್ಠಿತ “ಸಿಯೋಲ್‌ ಶಾಂತಿ ಪ್ರಶಸ್ತಿ”ಯ ನಗದು ಮೊತ್ತವನ್ನು ಗಂಗಾ ಶುದ್ಧೀರಕರಣ ಯೋಜನೆಯಾದ “ನಯಾಮಿ ಗಂಗಾ ಯೋಜನೆ”ಗೆ ಅರ್ಪಿಸುವುದಾಗಿ ಹೇಳಿದ್ದಾರೆ.

ad

ಸಿಯಾಮಿ ಸಾಂಸ್ಕೃತಿಕ ಫೌಂಡೇಶನ್‌ ” ಆಯೋಜಿಸಿದ್ದ ಸಮಾರಂಭದಲ್ಲಿ 14ನೇ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.
ಸಿಯೋಲ್‌ನಲ್ಲಿ 1990ರಲ್ಲಿ ನಡೆದ 24 ನೇ ಬೇಸಿಗೆ ಒಲಂಪಿಕ್ ಕ್ರೀಡಾಕೂಟಗಳ ಯಶಸ್ಸಿನ ಸ್ಮರಣಾರ್ಥವಾಗಿ 1990 ರಲ್ಲಿ ಸಿಯೋಲ್ ಪೀಸ್ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು.ಇದನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನೀಡಲಾಗುತ್ತದೆ.

ಪ್ರಶಸ್ತಿ ವಿಜೇತರಿಗೆ ಅಮೆರಿಕದ 200,000 ಡಾಲರ್‌ ಪ್ರಶಸ್ತಿ ಮೊತ್ತ ಮತ್ತು ಫಲಕ ನೀಡಲಾಗುತ್ತದೆ. ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೊಫಿ ಅನ್ನಾನ್ ಅವರು 1998 ರಲ್ಲಿ ಹಾಗೂ ಜರ್ಮನ್ ನಾಯಕ ಏಂಜೆಲಾ ಮಾರ್ಕೆಲ್ ಅವರಿಗೆ 2014ರಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಇದೀಗ ಈ ಅತ್ಯುನ್ನತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ನಮೋ . ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲೇ ನನಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ . ಇದು 130 ಕೋಟಿ ಭಾರತೀಯರಿಗೆ ಸಂದ ಗೌರವ ಎಂದು ಹೇಳಿ ತಮ್ಮ ಹರ್ಷವನ್ನು ವ್ಯಕ್ತ ಪಡಿಸಿದರು .

ಇದೇ ಸಂದರ್ಭದಲ್ಲಿ ರಕ್ಷಣೆ, ಸ್ಟಾರ್ಟ್ ಅಪ್, ಮಾಧ್ಯಮ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಪ್ರಮುಖ ಏಳು ದಾಖಲೆಗಳಿಗೆ ಭಾರತ ಹಾಗೂ ದಕ್ಷಿಣ ಕೊರಿಯಾ ನಾಯಕರು ಸಹಿ ವಿನಿಮಯ ಮಾಡಿಕೊಂಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.